ಭಾರೀ ಅಕ್ರಮ : ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು

By Suvarna NewsFirst Published Jun 3, 2021, 2:23 PM IST
Highlights
  • ನ್ಯಾಯಬೆಲೆಯಲ್ಲಿ ಅಂಗಡಿಯೊಂದರಲ್ಲಿ ಭಾರೀ ಅಕ್ರಮ
  • ಆರೋಪದಡಿಯಲ್ಲಿ ಲೈಸನ್ಸ್ ರದ್ದು ಮಾಡಿ ಆದೇಶ
  • ಶಿವಮೊಗ್ಗದ ಆರ್.ಎಂ.ಎಲ್ ನಗರದ ವಿವೇಕ್ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು

ಶಿವಮೊಗ್ಗ (ಜೂ.03): ಇಲ್ಲಿನ ನ್ಯಾಯಬೆಲೆಯಲ್ಲಿ ಅಂಗಡಿಯೊಂದರಲ್ಲಿ ಭಾರೀ ಅಕ್ರಮ ಎಸಗುತ್ತಿದ್ದ ಆರೋಪದಡಿಯಲ್ಲಿ ಲೈಸನ್ಸ್ ರದ್ದು ಮಾಡಿ ಆದೇಶ ನೀಡಲಾಗಿದೆ.  

ಶಿವಮೊಗ್ಗದ ಆರ್.ಎಂ.ಎಲ್ ನಗರದ ವಿವೇಕ್ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು ಮಾಡಿ ಇಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಆದೇಶ ನೀಡಿದ್ದಾರೆ. 

ಸಿಟಿ ಸ್ಕ್ಯಾನ್‌: ಬಡವರಿಗೆ 1500, ಇತರರಿಗೆ ಜಾಸ್ತಿ ...

ಮೇ.22 ರಂದು ಆಹಾರ ಇಲಾಖೆಯ ಇನ್ ಸ್ಪೆಕ್ಟರ್ ದಾಳಿ ನಡೆಸಿ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಇಲ್ಲಿ ಭಾರೀ ಅಕ್ರಮ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. 
 
ತಪಾಸಣೆ ವೇಳೆ  ಪರವಾನಗಿದಾರ ಕೆ.ನಾಗರಾಜ್ ಅಂಗಡಿಯ ಮುಂದೆ ದಾಸ್ತಾನುವಿನ ವಿವರ ಪ್ರದರ್ಶಿಸದೆ ಇರುವುದು, ಅಂಗಡಿಯಲ್ಲಿ ಭೌತಿಕ ದಾಸ್ತಾನು ಕಂಡು ಬಂದಿತ್ತು.  ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಈ ದಾಸ್ತಾನುವಿನ ವಿತರಣೆ ಮಾಡದಿರುವುದು. ಬಯೋಮೆಟ್ರಿಕ್ ಪಡೆಯುವ ವೇಳೆ ಒಬ್ಬರಿಗೆ ತಲಾ 10 ರು. ಹಣ ಪಡೆಯುತ್ತಿರುವುದು. ಸೋಪು ಮತ್ತು ಉಪ್ಪು ನೀಡಲು 20 ರೂ. ಹಣ ಪಡೆಯುತ್ತಿರುವ ವಿಚಾರ ತಿಳಿದುಬಂದಿತ್ತು. 

ಈ ಹಿನ್ನಲೆಯಲ್ಲಿ ಕೆ.ನಾಗರಾಜ್ ಅವರ ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ಅಮಾನತ್ತು ಮಾಡಲಾಗಿದೆ. 

click me!