ಪುತ್ತೂರು (ಜೂ.03): ಗಡಿಭಾಗವಾದ ಈಶ್ವರಮಂಗಲದಲ್ಲಿ ವ್ಯಕ್ತಿಯೊಬ್ಬ ಮೆಡಿಕಲ್ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
ಪುತ್ತುರು ತಾಲೀಕೊಮ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್ಗೆ ಔಷಧ ಖರೀದಿಸಲು ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾರೆ.
16ರ ಬಾಲಕನ ಮೇಲೆ ವಿವಾಹಿತ ಮಹಿಳೆಯಿಂದ ಲೈಂಗಿಕ ದೌರ್ಜನ್ಯ! .
ಇಬ್ರಾಹಿಂ ಕುಕ್ಕಾಜೆ (58) ಎಂಬ ವ್ಯಕ್ರಿ ಮೆಡಿಕಲ್‌ನಲ್ಲಿ ಯುವತಿಯೊಬ್ಬಳೆ ಇರುವುದನ್ನು ಕಂಡು ಒಳನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ..
ಭಯಗೊಂಡ ಯುವತಿ ಬೊಬ್ಬೆ ಹೊಡೆದುಕೊಂಡಿದ್ದು ಸುತ್ತಮುತ್ತಲಿನ ಜನರು ಸೇರಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಸಂಪ್ಯ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.