
ಬೆಂಗಳೂರು(ಜು.04): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತಳಾಗಿ ರುವ ಪವಿತ್ರಾಗೌಡಳನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸದಂತೆ ನಗರ ಪೊಲೀಸ್ ಆಯುಕ್ತರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತ್ರ ಬರೆದಿದ್ದಾರೆ.
2003ರಲ್ಲಿ ನಾನು ಹಾಗೂ ದರ್ಶನ್ ವಿವಾಹವಾಗಿದ್ದು, ನಮಗೆ ಓರ್ವ ಮಗನಿದ್ದಾನೆ. ಆದರೆ ಸಂಜಯ್ ಸಿಂಗ್ ಎಂಬುವರ ಜತೆ ಪವಿತ್ರಾಗೌಡಳಿಗೆ ಮದುವೆಯಾಗಿದ್ದು, ಅವರಿಗೂ ಒಬ್ಬ ಮಗಳಿದ್ದಾಳೆ. ಆದರೆ ನೀವು (ಆಯುಕ್ತರು) ಪತ್ರಿಕಾಗೋಷ್ಠಿಯಲ್ಲಿ ದರ್ಶನ್‌ರವರ ಪತ್ನಿ ಪವಿತ್ರಾಗೌಡ ಎಂದು ಹೇಳಿದ್ದೀರಿ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮುಗ್ದ ಎಂದ ವಕೀಲ ನಾರಾಯಣ ಸ್ವಾಮಿ!
ಅದೇ ರೀತಿ ಒಮ್ಮೆ ಗೃಹಸಚಿವರು ಉಚ್ಚರಿಸಿದ್ದಾರೆ. ಹೀಗಾಗಿ ಪೊಲೀಸ್ ದಾಖಲೆಗಳಲ್ಲಿ ಪವಿತ್ರ ಗೌಡಳನ್ನು ದರ್ಶನ್‌ರವರ ಪತ್ನಿ ಎಂದು ಉಲ್ಲೇಖಿಸದಂತೆ ವಿಜಯಲಕ್ಷ್ಮೀ ಕೋರಿದ್ದಾರೆ.