ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌ ಗ್ಯಾಂಗ್‌ನಿಂದ ಕುಖ್ಯಾತಿ ಆದ ಶೆಡ್ ಬಿಬಿಎಂಪಿಗೆ ತೆರಿಗೆ ಕಟ್ಟಿಲ್ಲ..!

By Kannadaprabha NewsFirst Published Jun 21, 2024, 7:40 AM IST
Highlights

ಕೊಲೆ ನಡೆಸಲಾಗಿದೆ ಎಂಬ ಜಾಗ ಹಾಗೂ ಶೆಡ್‌ ಮಾಲೀಕ ಕೆ.ಜಯಣ್ಣ ತಂದೆ ಲೇ.ಕೃಷ್ಣಪ್ಪ ಅವರಿಗೆ ಇದೀಗ ಬಿಬಿಎಂಪಿ ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯು 2008ರಿಂದ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಎಂದು ನೋಟಿಸ್ ನೀಡಿದೆ.

ಬೆಂಗಳೂರು(ಜೂ.21): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ನಟ ದರ್ಶನ್‌ ಮತ್ತು ಅವರ ಗ್ಯಾಂಗ್‌ ಕೊಲೆ ನಡೆಸಿದೆ ಎನ್ನಲಾದ ರಾಜರಾಜೇಶ್ವರಿನಗರದ ಶೆಡ್‌ ಮತ್ತು ಜಾಗದ ಮಾಲೀಕ ಕೆ.ಜಯಣ್ಣ ಅವರಿಗೆ ಬಿಬಿಎಂಪಿ ಗುರುವಾರ ನೋಟಿಸ್‌ ಜಾರಿಗೊಳಿಸಿದೆ.

ಕೆಂಗೇರಿ ಉಪ ವಲಯದ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್‌ನ ಪಟ್ಟಣಗೆರೆ ಮುಖ್ಯ ರಸ್ತೆಯ ಬಿಎಚ್‌ಇಎಲ್‌ ಬಡಾವಣೆಯಲ್ಲಿರುವ ಕೆ.ಜಯಣ್ಣ ಅವರ ಮಾಲೀಕತ್ವದ ಶೆಡ್‌ ಹಾಗೂ ಖಾಲಿ ಜಾಗದಲ್ಲಿ ನಟ ದರ್ಶನ್‌ ಮತ್ತು ತಂಡ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ನಡೆಸಿತು ಎಂಬ ಆರೋಪ ಕೇಳಿ ಬಂದಿದೆ. ಕೊಲೆ ನಡೆಸಲಾಗಿದೆ ಎಂಬ ಜಾಗ ಹಾಗೂ ಶೆಡ್‌ ಮಾಲೀಕ ಕೆ.ಜಯಣ್ಣ ತಂದೆ ಲೇ.ಕೃಷ್ಣಪ್ಪ ಅವರಿಗೆ ಇದೀಗ ಬಿಬಿಎಂಪಿ ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯು 2008ರಿಂದ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಎಂದು ನೋಟಿಸ್ ನೀಡಿದೆ.

Latest Videos

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಆಪ್ತನ ಮೊಬೈಲ್‌ನಲ್ಲಿ ಪ್ರಮುಖ ಸಾಕ್ಷ್ಯ?

ನೋಟಿಸ್‌ ತಲುಪಿದ 15 ದಿನದಲ್ಲಿ ತಮ್ಮ ಆಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಂಡು ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡಬೇಕು. ತಪ್ಪಿದಲ್ಲಿ ತಮ್ಮ ಸ್ವತ್ತಿಗೆ ಆಸ್ತಿ ತೆರಿಗೆಯನ್ನು ನಗರ ಪಾಲಿಕೆಯಲ್ಲಿ ಲಭ್ಯವಿರುವ ದಾಖಲೆಗಳ ಮಾಹಿತಿ ಆಧಾರದ ಮೇಲೆ ಆಸ್ತಿ ತೆರಿಗೆ ನಿರ್ಧಾರ ಮಾಡಿ ನೋಟಿಸ್‌ ಜಾರಿಗೊಳಿಸಲಾಗುವುದು. ಒಂದು ವೇಳೆ ಈಗಾಗಲೇ ಆಸ್ತಿ ತೆರಿಗೆ ಪಾವತಿ ಮಾಡಿದ್ದರೆ, ಸಂಬಂಧಪಟ್ಟ ದಾಖಲೆಗಳನ್ನು ಬಿಬಿಎಂಪಿ ಕಂದಾಯ ಅಧಿಕಾರಿಗಳಿಗೆ ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ನಿರ್ದೇಶಿಸಲಾಗಿದೆ.

click me!