ಶಿರಸಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೋರಿಕೆ : ರೋಗಿಗಳ ಸ್ಥಳಾಂತರ

Kannadaprabha News   | Asianet News
Published : May 23, 2021, 07:37 AM IST
ಶಿರಸಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೋರಿಕೆ : ರೋಗಿಗಳ ಸ್ಥಳಾಂತರ

ಸಾರಾಂಶ

ಒಡೆದ ಕೋವಿಡ್‌ ವಾರ್ಡ್‌ಗೆ ಆಕ್ಸಿಜನ್‌ ಪೂರೈಸುವ ಘಟಕದ ಪೈಪ್‌  ಆಸ್ಪತ್ರೆಯಲ್ಲಿದ್ದ 11 ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ  ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಪಂಡಿತ ಸಾರ್ವಜನಿಕ ಆಸ್ಪತ್ರೆ

ಶಿರಸಿ (ಮೇ.23): ಕೋವಿಡ್‌ ವಾರ್ಡ್‌ಗೆ ಆಕ್ಸಿಜನ್‌ ಪೂರೈಸುವ ಘಟಕದ ಪೈಪ್‌ ಒಡೆದಿದ್ದು, ಆಸ್ಪತ್ರೆಯಲ್ಲಿದ್ದ 11 ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದ್ದರೂ ಚಾಮರಾಜನಗರದಲ್ಲಿ ಸಂಭವಿಸಿದಂತಹ ಘಟನೆಯೊಂದು ಘಟಿಸುವ ಸಾಧ್ಯತೆ ಇತ್ತು.

ಈ ಆಸ್ಪತ್ರೆಯಲ್ಲಿ 30 ಕೋವಿಡ್‌ ರೋಗಿಗಳು ಆಕ್ಸಿಜನ್‌ ಅವಲಂಬನೆಯಲ್ಲಿದ್ದರು. ಅದರಲ್ಲೂ 21 ರೋಗಿಗಳಿಗೆ ಆಕ್ಸಿಜನ್‌ ಅಗತ್ಯವಿತ್ತು. ಉಳಿದವರು ಚೇತರಿಸಿಕೊಳ್ಳುತ್ತಿದ್ದುದರಿಂದ ಅವರು ಅಷ್ಟೊಂದು ಆಕ್ಸಿಜನ್‌ ಅವಲಂಬನೆಯಲ್ಲಿರಲಿಲ್ಲ. 

ನ್ಯೂಸ್ ಅವರ್; ಮಕ್ಕಳಲ್ಲಿ ಹೆಚ್ಚಾಗ್ತಿದೆ ಸೋಂಕು, ರಾಯಚೂರಿನಲ್ಲಿ ವೈಟ್ ಫಂಗಸ್ ಮಂಕು .. 

ಶುಕ್ರವಾರ ರಾತ್ರಿಯೇ ಪೈಪ್‌ ಒಡೆದು ಆಕ್ಸಿಜನ್‌ ಸೋರಿಕೆಯಾಗುತ್ತಿದ್ದು, ಶನಿವಾರ ಬೆಳಗ್ಗೆ ಅದು ಗಮನಕ್ಕೆ ಬರುತ್ತಿದ್ದಂತೆಯೇ 7 ಜನರನ್ನು ಪಕ್ಕದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೆ, 4 ಜನರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು