ಚಿತ್ರದುರ್ಗದಲ್ಲಿ ಭಾರೀ ಮಳೆ: ಜಿಲ್ಲಾಸ್ಪತ್ರೆಯ ಛಾವಣಿಯ ಸಿಮೆಂಟ್‌ ಕುಸಿತ, ರೋಗಿಯ ತಲೆಗೆ ಪೆಟ್ಟು!

Published : Oct 23, 2024, 10:28 AM IST
ಚಿತ್ರದುರ್ಗದಲ್ಲಿ ಭಾರೀ ಮಳೆ: ಜಿಲ್ಲಾಸ್ಪತ್ರೆಯ ಛಾವಣಿಯ ಸಿಮೆಂಟ್‌ ಕುಸಿತ, ರೋಗಿಯ ತಲೆಗೆ ಪೆಟ್ಟು!

ಸಾರಾಂಶ

ಛಾವಣಿಯಿಂದ ಸಿಮೆಂಟ್ ಕುಸಿದ ಪರಿಣಾಮ ಆಂಧ್ರಪ್ರದೇಶ ಮೂಲದ ಲಕ್ಷ್ಮಕ್ಕ ಎಂಬುವರ ತಲೆಗೆ ಪೆಟ್ಟಾಗಿದೆ. ಅದೃಷ್ಟವಶಾತ್‌ ಲಕ್ಷ್ಮಕ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಚಿತ್ರದುರ್ಗ(ಅ.23): ಚಿತ್ರದುರ್ಗದಲ್ಲಿ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ  ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅವಘಡವೊಂದು ಸಂಭವಿಸಿದೆ. ಹೌದು, ಆಸ್ಪತ್ರೆಯ ಛಾವಣಿಯಿಂದ ಸಿಮೆಂಟ್ ಕುಸಿದು ರೋಗಿಗಳಿದ್ದ ಬೆಡ್ ಮೇಲೆ ಬಿದ್ದಿದೆ. 

ಛಾವಣಿಯಿಂದ ಸಿಮೆಂಟ್ ಕುಸಿದ ಪರಿಣಾಮ ಆಂಧ್ರಪ್ರದೇಶ ಮೂಲದ ಲಕ್ಷ್ಮಕ್ಕ ಎಂಬುವರ ತಲೆಗೆ ಪೆಟ್ಟಾಗಿದೆ. ಅದೃಷ್ಟವಶಾತ್‌ ಲಕ್ಷ್ಮಕ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಛಾವಣಿ ಸಿಮೆಂಟ್ ಕುಸಿತದಿಂದ ಆಸ್ಪತ್ರೆಯಲ್ಲಿ ಕೆಲ ಹೊತ್ತು ಭೀತಿ ಸೃಷ್ಠಿಯಾಗಿತ್ತು. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ರೋಗಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಛಾವಣಿ ಸಿಮೆಂಟ್ ಕುಸಿದು ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ

PREV
Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು