ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ನಾಲ್ಕು ಕಾರ್ಮಿಕರ ಸಾವು?

By Santosh Naik  |  First Published Oct 22, 2024, 5:05 PM IST

ಬೆಂಗಳೂರಿನ ಕಮ್ಮನಹಳ್ಳಿ ಬಳಿಯ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. 15ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.


ಬೆಂಗಳೂರು (ಅ.22): ಬೆಂಗಳೂರಿಗೆ ಮಳೆ ಒಂದೆಡೆ ಬಿಟ್ಟೂಬಿಡದೆ ರಾದ್ದಾಂತ ನೀಡುತ್ತಿದ್ದರೆ, ಕಮ್ಮನಹಳ್ಳಿ ಬಳಿಯ ಬಾಬುಸಾ ಪಾಳ್ಯದಲ್ಲಿ (ಬಾಬುಸಾಹೇಬ್‌ ಪಾಳ್ಯ) ನಿರ್ಮಾಣ ಹಂತದ ಕಟ್ಟಡ ಕುಸಿತ ಕಂಡಿದೆ. ಹೆಣ್ಣೂರು ಸಮೀಪ‌ ಇರುವ ಬಾಬುಸಾಬ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ.ಕಟ್ಟಡದ ಕಾಮಗಾರಿಯ ವೇಳೆಗೆ 15 ಜನಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೂಲಿ ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರೆಸ್ಕ್ಯೂ ಟೀಂ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಅವಶೇಷಗಳ ಅಡಿಯಲ್ಲಿ ಕಾರ್ಮಿಕರು ಸಿಲುಕಿರುವ ಸಾಧ್ಯತೆ ದಟ್ಟವಾಗಿದೆ.ಸುಮಾರು 15 ಕಾರ್ಮಿಕರು ಈ ಬಿಲ್ಡಿಂಗ್‌ ನಿರ್ಮಾಣದಲ್ಲಿ ತೊಡಗಿದ್ದರು.ಘಟನೆ ನಡೆದ ಬೆನ್ನಲ್ಲಿಯೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ನಾಲ್ಕು ಸ್ಟೇಷನ್‌ಗಳಿಂದ ರಕ್ಷಣಾ ಕಾರ್ಯಕ್ಕೆ ಸಿಬ್ಬಂದಿಗಳನ್ನು ರವಾನಿಸಲಾಗಿದೆ.

ಆರು ಅಂತಸ್ತಿನ ನಿರ್ಮಾಣ ಹಂತದ ಅಪಾರ್ಮೆಂಟ್ ಕಟ್ಟಡದ ನಿರ್ಮಾಣ ಕೆಲಸ ನಡೆಯುತ್ತಿತ್ತು. ಬಹುತೇಕ ಕಟ್ಟಡ ನಿರ್ಮಾಣ ಮಾಡಿ, ಪೇಟಿಂಗ್‌ ಕೆಲಸಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ. ಕಟ್ಟಡ ದಲ್ಲಿ ಸುಮಾರು ಹದಿನೈದು ಜನ ಕಾರ್ಮಿಕರಿದ್ದು, ನಾಲ್ವರು ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಇನ್ನೂ ಕೆಲವರ ಮಾಹಿತಿ ಪ್ರಕಾರ, 20 ಕ್ಕೂ ಹೆಚ್ಚು ಕಾರ್ಮಿಕರು ಒಳಗೆ ಸಿಲುಕಿರೋ ಸಾಧ್ಯತೆ ಇದೆ. ಮಳೆ ನಡುವೆಯೇ ಪೇಂಟಿಂಗ್‌ ಕೆಲಸಗಳು ನಡೆಯುತ್ತಿದ್ದವು. ಸ್ಥಳಕ್ಕೆ  ಸ್ಥಳೀಯ ಶಾಸಕ ಬೈರತಿ ಬಸವರಾಜ್ ಆಗಮಿಸಿ ಪರಿಶೀಲನೆ ಮಾಡುತ್ತಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನೋಡುತ್ತಿದ್ದಾರೆ.

Tap to resize

Latest Videos

ಬಚಾವ್‌ ಆದ ಕಾರ್ಮಿಕ: ಕಟ್ಟಡ ಕುಡಿತದ ವೇಳೆ ಬಚಾವ್‌ ಆಗಿ ಬಂದ ಕಾರ್ಮಿಕ ಕಣ್ಣೀರಿಡುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ಘಟನೆ ಭೀಕರತೆಯನ್ನು ಗಾಯಾಳು ವ್ಯಕ್ತಿ ಬಿಚ್ಚಿಟ್ಟಿದ್ದಾರೆ. ಕಟ್ಟಡದಲ್ಲಿ ಪೇಟಿಂಗ್‌ ಕೆಲಸದಲ್ಲಿ ಕಾರ್ಮಿಕ ಭಾಗಿಯಾಗಿದ್ದ. ಘಟನೆಯಿಂದ ತಲೆಗೆ ಪೆಟ್ಟು ಬಿದ್ದಿದೆ. ರಕ್ತ ಸಿಕ್ತವಾಗಿಯೇ ಆ ಸ್ಥಳದಿಂದ ಹೊರಬಂದಿದ್ದಾನೆ. ನಮ್ಮವರು ಒಳಗೆ ಸಿಲುಕಿದ್ದಾರೆಂದು ಕಣ್ಣೀರಿಡುತ್ತಿರುವ ವಿಡಿಯೋ ಇದಾಗಿದೆ.

click me!