ಹುಬ್ಬಳ್ಳಿ- ಧಾರವಾಡ: ಚಿಗರಿ ಬಸ್‌ನಲ್ಲಿ ಜಿರಳೆ ಕಾಟಕ್ಕೆ ಪ್ರಯಾಣಿಕರು ಹೈರಾಣು..!

Published : Jul 19, 2023, 01:00 AM IST
ಹುಬ್ಬಳ್ಳಿ- ಧಾರವಾಡ: ಚಿಗರಿ ಬಸ್‌ನಲ್ಲಿ ಜಿರಳೆ ಕಾಟಕ್ಕೆ ಪ್ರಯಾಣಿಕರು ಹೈರಾಣು..!

ಸಾರಾಂಶ

ಕೇಂದ್ರ, ರಾಜ್ಯ ಸರ್ಕಾರ ಮತ್ತು ವಿಶ್ವಬ್ಯಾಂಕ್‌ ಜಂಟಿ ಯೋಜನೆಯಾಗಿ ಸುಮಾರು 970.87ಕೋಟಿ ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ನರ್ಮ್‌ ಯೋಜನೆಯ ಅಡಿ 120ಕ್ಕೂ ಅಧಿಕ ಎಸಿ ಬಸ್‌ ಖರೀದಿಸಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ(ಜು.19): ಹಲವು ಸಮಸ್ಯೆಗಳ ನಡುವೆಯೂ ಯಶಸ್ಸಿನ ಸುಖಾಸೀನ ಸಾರಿಗೆ ಸೇವೆ ನೀಡುತ್ತಿರುವ ‘ಚಿಗರಿ ಬಸ್ಸು’ಗಳಲ್ಲಿ ‘ಜಿರಳೆ’ ಕಾಟ ಶುರುವಾಗಿದೆ!. 3-4 ವರ್ಷಗಳಿಂದ ಹುಬ್ಬಳ್ಳಿ- ಧಾರವಾಡ ನಗರದಲ್ಲಿ ಸಂಚರಿಸುತ್ತಿರುವ ಬಿಆರ್‌ಟಿಎಸ್‌ ಬಸ್ಸುಗಳಲ್ಲಿ ಜಿರಳೆ ಹಾವಳಿ ಕಾಣಿಸಿಕೊಂಡು ಪ್ರಯಾಣಿಕರನ್ನು ಹೈರಾಣಾಗಿಸಿವೆ.

ಸಮರ್ಪಕ ನಿರ್ವಹಣೆ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಬಸ್ಸುಗಳಲ್ಲಿ ಜಿರಳೆ ಸಂತತಿ ಹೆಚ್ಚಿದೆ. ಬಸ್ಸಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಮೇಲೆಯೇ ಹರಿದಾಡುತ್ತಿವೆ. ರಾತ್ರಿ 9 ಗಂಟೆಯ ನಂತರ ಸಂಚರಿಸುವ ಪ್ರಯಾಣಿಕರಿಗೆ ನಿತ್ಯವೂ ಜಿರಳೆಯ ದರ್ಶನ ಸಾಮಾನ್ಯವಾಗಿದೆ.

ಹುಬ್ಬಳ್ಳಿ-ಧಾರವಾಡ: ಕಿರಿದಾಗಲಿದೆ ಬಿಆರ್‌ಟಿಎಸ್‌ ಕಾರಿಡಾರ್‌?

ಬಸ್ಸಿನಲ್ಲಿ ಎಸಿ ಬಂದ್‌:

ಆರಭವಾಗಿ 3 ವರ್ಷ ಕಳೆದಿದ್ದು ಆಗಲೇ ಹಲವು ರೀತಿಯ ಸಮಸ್ಯೆಗಳನ್ನು ಚಿಗರಿ ಬಸ್‌ ಅನುಭವಿಸುತ್ತಿದೆ. ಹಲವು ಕಡೆಗಳಲ್ಲಿ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಹಲವೆಡೆ ಬಸ್‌ ನಿಲ್ದಾಣದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ.
ಈ ಬಸ್‌ ಸಂಪೂರ್ಣ ಹವಾ ನಿಯಂತ್ರಿತ. ಆದರೆ, ಹಲವು ಬಸ್ಸುಗಳÜಲ್ಲಿ ಎಸಿ ಕೆಲಸ ನಿರ್ವಹಿಸುತ್ತಿಲ್ಲ. ಈ ಕುರಿತು ಪ್ರಯಾಣಿಕರು ಚಾಲಕರಿಗೆ ಕೇಳಿದರೆ ಎಸಿ ಚಾಲು ಇಲ್ಲ ಎಂಬ ಸಿದ್ಧ ಉತ್ತರ ಬರುತ್ತಿದೆ.

ಕಾರಿಡಾರ್‌ನಲ್ಲಿ ಬೇರೆ ವಾಹನಗಳು ಸಂಚರಿಸುತ್ತಿವೆ. ಸಿಗ್ನಲ್‌ಗಳಲ್ಲಿ ಅಪಘಾತಗಳು ನಡೆಯುತ್ತಿವೆ. ಬಸ್‌ ನಿಲ್ದಾಣಗಲ್ಲಿ ಕುಡಿಯುವ ನೀರು, ಶೌಚಾಲಯಗಳಿಲ್ಲ. ಟಿಕೆಟ್‌ ಸೆನ್ಸಾರ್‌ಗಳು ಪದೇ ಪದೇ ಕೈ ಕೊಡುತ್ತಿವೆ.
ಮಳೆ ಬಂದರೆ ಸಾಕು ಈ ನಿಲ್ದಾಣ ಹಾಗೂ ಬಿಆರ್‌ಟಿಎಸ್‌ ರಸ್ತೆಗಳಲ್ಲಿ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಪ್ರಯಾಣಿಕರು ಈ ಮಳೆ ನೀರಿನಲ್ಲಿಯೇ ಬಸ್ಸಿನಿಂದ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Hubballi-Dharwad BRTS: ಕ್ಯಾಶ್‌ಲೆಸ್‌ ಸಾರಿಗೆಗೆ ಮುನ್ನುಡಿ..!

ರಾಜ್ಯದ ಮೊದಲ ಕಾರಿಡಾರ್‌:

ದೇಶದಲ್ಲಿಯೇ 2ನೇ ಹಾಗೂ ರಾಜ್ಯದ ಪ್ರಪ್ರಥಮ ಬಿಆರ್‌ಟಿಎಸ್‌ ಯೋಜನೆಯನ್ನು ಸುಮಾರು .970 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಿದ್ದು, 2020ರ ಫೆ. 2ರಂದು ಅಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರ ಮತ್ತು ವಿಶ್ವಬ್ಯಾಂಕ್‌ ಜಂಟಿ ಯೋಜನೆಯಾಗಿ ಸುಮಾರು 970.87ಕೋಟಿ ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ನರ್ಮ್‌ ಯೋಜನೆಯ ಅಡಿ 120ಕ್ಕೂ ಅಧಿಕ ಎಸಿ ಬಸ್‌ ಖರೀದಿಸಲಾಗಿದೆ.

ಹು-ಧಾ ಮಹಾನಗರದ ಮಧ್ಯೆ ಸುಮಾರು 32 ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. 6 ಪಾದಚಾರಿ ಮೇಲ್ಸೇತುವೆ, ಹೊಸೂರಿನ 17 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಈ ಚಿಗರಿ ಬಸ್‌ಗಳಲ್ಲಿ ನಿತ್ಯವೂ ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ.

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ