ಗದಗ: ಗುರುತೇ ಇಲ್ಲದ ಗ್ರಾಮ, ಕಂದಾಯ ಇಲಾಖೆ ಮ್ಯಾಪ್‌ನಲ್ಲಿ ಈ ಊರಿನ ಹೆಸರೇ ಇಲ್ಲ..!

By Girish Goudar  |  First Published Jul 19, 2023, 12:00 AM IST

ಕಂದಾಯ, ಗ್ರಾಮ ಮ್ಯಾಪ್ ನಲ್ಲಿ ಊರಿನ ಹೆಸರು ಇರದಿರೋದ್ರಿಂದ ರಸ್ತೆಯಾಗಿಲ್ಲ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದಿರೋದ್ರಿಂದ ಗ್ರಾಮಕ್ಕೆ ಬಸ್ ಬರ್ತಿಲ್ಲ. ಮ್ಯಾಪ್ ಒಂದೇ ಕಾರಣದಿಂದಾಗಿ ಗ್ರಾಮದ ಅಭಿವೃದ್ಧಿಯೇ ಕುಂಟಿತವಾಗಿದೆ ಅಂತಾರೆ ಗ್ರಾಮಸ್ಥರು. 


ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ(ಜು.19): ಜಿಲ್ಲೆಯ ಮುಂಡರಗಿ ತಾಲೂಕಿನ ತಾಮ್ರಗುಂಡಿ ಗ್ರಾಮಕ್ಕೆ ಐಡೆಂಟಿಟಿ ಕೊರತೆ ಕಾಡ್ತಿದೆ. ಕಂದಾಯ, ಗ್ರಾಮ ನಕಾಶೆಯಲ್ಲಿ ಊರಿನ ಹೆಸರು ಇಲ್ದಿರೋದು ಗ್ರಾಮಸ್ಥರು ಪರದಾಟ ಪಡುವಂತಾಗಿದೆ. ಗ್ರಾಮದ ಸರಹದ್ದಿನ ಸರ್ವೆ ನಂಬರ್ 87, 88 ರಲ್ಲಿ ತಾಮ್ರಗುಂಡಿ ಗ್ರಾಮ ಇದೆ. 200 ವರ್ಷದ ಹಿಂದೆ ಸರ್ವೆ ನಂಬರ್ 226 ರಿಂದ ಸರ್ವೆ ನಂಬರ್ 87, 88 ಕ್ಕೆ ಗ್ರಾಮ ಸ್ಥಳಾಂತರಗೊಂಡಿತ್ತು.. ಆದ್ರೆ ಹಳೆ ಗ್ರಾಮವನ್ನೇ ದಾಖಲೆಯಲ್ಲಿ ಮುಂದುವರೆಸಲಾಗಿದೆ. ಹೊಸ ಗ್ರಾಮ ಭೂದಾಖಲೆ, ಕಂದಾಯ ವ್ಯವಸ್ಥೆ, ಗ್ರಾಮ ನಕ್ಷೆಯಲ್ಲಿ ಒಳಪಟ್ಟಿಲ್ಲ.. ಕಂದಾಯ ನಕ್ಷೆಯಲ್ಲಿ ಗ್ರಾಮ ಇರದ ಕಾರಣ ಬ್ಯಾಂಕ್ ಸಾಲ, ಆಸ್ತಿ ಖರೀದಿ ಮಾರಾಟಕ್ಕೆ ಗ್ರಾಮಸ್ಥರು ಪರದಾಟ ನಡೆಸಿದಾರೆ. 

Latest Videos

undefined

ನಕಾಶೆಯಲ್ಲಿ ಗ್ರಾಮದ ಹೆಸರು ಇಲ್ಲದ ಕಾರಣ ಅಭಿವೃದ್ಧಿಯಾಗದೆ ಹಿಂದುಳಿದೆ ಅನ್ನೋದು ಗ್ರಾಮಸ್ಥರ ಆರೋಪ. ಲೋಕೋಪಯೋಗಿ ಇಲಾಖೆಯ ನಕಾಶೆಯಲ್ಲಿ ಗ್ರಾಮಸ ರಸ್ತೆಗಳಿಲ್ಲ. ಹೀಗಾಗಿ ಊರಿಗೆ ರಸ್ತೆ ಸೆಂಕ್ಷನ್ ಆಗ್ತಿಲ್ಲ. ಗ್ರಾಮಕ್ಕೆ ಮೂಲ ಸೌಕರ್ಯ ಇಲ್ಲದೇ ಪರದಾಡುವಂತಾಗಿದೆ ಅಂತಾರೆ ಗ್ರಾಮಸ್ಥರು.

ಹಸಿವು ಮುಕ್ತ, ಸ್ವಾಭಿಮಾನದ ಬದುಕಿಗೆ ಅನ್ನಭಾಗ್ಯ ಆಸರೆ-ಸಚಿವ ಎಚ್ಕೆ ಪಾಟೀಲ್‌ 

ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೇರಿದಂತೆ ಮುಖ್ಯಮಂತ್ರಿಗಳಿಗೂ ಗ್ರಾಮಸ್ಥರು ಪತ್ರ ಬರೆದಿದಾರೆ. ಗ್ರಾಮದಲ್ಲಿ 150 ಮನೆಗಳಿದ್ರೆ 1500 ಜನ ಸಂಖ್ಯೆಯನ್ನ ಗ್ರಾಮಹೊಂದಿದೆ. ಆಸ್ತಿ ಖರೀದಿಗೆ ಅಂತಾ ಉತಾರ ಕೇಳೋದಕ್ಕೆ ಹೋದ್ರೆ ದಾಖಲೆಯಲ್ಲಿ ಜಮೀನು ಜಾಗೆ ಅಂತಾ ತೋರಿಸುತ್ತೆ. ಖಾಸಗಿ ಜಮೀನು ಅನ್ನೋ ಕಾರಣಕ್ಕೆ ಗ್ರಾಮಸ್ಥರಿಗೆ ಉತಾರ ಸಿಗ್ತಿಲ್ಲ.. ಮನೆ ಮೇಲೆ ಸಾಲ ಪಡೀಬೇಕೆಂದ್ರು ಬ್ಯಾಂಕ್ ನಲ್ಲಿ‌ ಸಾಲ ಕೊಡ್ತಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಿ ಅಂತಾ ಗ್ರಾಮಸ್ಥರು ಮನವಿ ಮಾಡಿ ಬೇಸತ್ತಿದಾರೆ, ಆದ್ರೆ ಈ ವರೆಗೂ ಕಂದಾಯ ಗ್ರಾಮ ಅನ್ನೋ ದಾಖಲೆ ಸೃಷ್ಟಿಯಾಗಿಲ್ಲ..

ಕಂದಾಯ, ಗ್ರಾಮ ಮ್ಯಾಪ್ ನಲ್ಲಿ ಊರಿನ ಹೆಸರು ಇರದಿರೋದ್ರಿಂದ ರಸ್ತೆಯಾಗಿಲ್ಲ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದಿರೋದ್ರಿಂದ ಗ್ರಾಮಕ್ಕೆ ಬಸ್ ಬರ್ತಿಲ್ಲ. ಮ್ಯಾಪ್ ಒಂದೇ ಕಾರಣದಿಂದಾಗಿ ಗ್ರಾಮದ ಅಭಿವೃದ್ಧಿಯೇ ಕುಂಟಿತವಾಗಿದೆ ಅಂತಾರೆ ಗ್ರಾಮಸ್ಥರು. 

ಈ ಬಗ್ಗೆ ಜಿಲ್ಲಾಧಿಕಾರಿ ವೈಶಾಲಿ ಎಂಎಲ್ ಅವರನ್ನ ಕೇಳಿದ್ರೆ, ಸಮಸ್ಯೆ ಗಮನಕ್ಕೆ ಬಂದಿದೆ ಸರಿ ಮಾಡ್ತೀನಿ ಅಂತಿದಾರೆ. ಆದಷ್ಟು ಬೇಗ ಕಂದಾಯ ಮ್ಯಾಪ್ ನಲ್ಲಿ ಗ್ರಾಮದ ಹೆಸರು ಆ್ಯಡ್ ಆಗ್ಬೇಕು. ಈ ಮೂಲಕ ಗ್ರಾಮಸ್ಥರ ಐಡೆಂಟಿಟಿ ಕೊರತೆಗೆ ಮುಕ್ತಿ ಹಾಡ್ಬೇಕು. 

click me!