ಇಳಿವಯಸ್ಸಲ್ಲಿ ಕಷ್ಟ, ಸುಖಕ್ಕಾಗದ ಮಕ್ಕಳಿಗೆ ಪಾಠ ಕಲಿಸಿದ ಪೋಷಕರು| ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ 2 ಪ್ರತ್ಯೇಕ ಪ್ರಕರಣಗಳಲ್ಲಿ ಮಕ್ಕಳಿಂದ ಆಸ್ತಿ ಪಡೆದ ಪೋಷಕರು| ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007ರ ಅನ್ವಯ ದಾಖಲಾಗಿದ್ದ ಎರಡೂ ಪ್ರಕರಣಗಳು|
ಹಾನಗಲ್ಲ(ಫೆ.06): ಇಳಿವಯಸ್ಸಲ್ಲಿ ಸುಖ, ದುಃಖ ಕೇಳದ, ಕನಿಷ್ಠ ಆರೋಗ್ಯವನ್ನೂ ವಿಚಾರಿಸದ ಮಕ್ಕಳಿಗೆ, ಪೋಷಕರು ಬೇಡ, ಅವರು ಕೂಡಿಟ್ಟ ಆಸ್ತಿ ಮಾತ್ರ ಬೇಕು ಎನ್ನುವವರಿಗೆ ಹಾನಗಲ್ಲ ತಾಲೂಕಿನ ಈ ಎರಡು ಪ್ರಕರಣಗಳು ಬಹುದೊಡ್ಡ ಪಾಠ. ಮೊದಲ ಪ್ರಕರಣದಲ್ಲಿ ತಾಲೂಕಿನ ಹಿರಿಯಜ್ಜಿಯೊಬ್ಬರು ಕೊನೇಗಾಲದಲ್ಲಿ ತನ್ನ ಕಷ್ಟ ಸುಖಕ್ಕಾಗದ ದತ್ತು ಮಗನಿಗೆ ಬರೆದುಕೊಟ್ಟಿದ್ದ ಆಸ್ತಿಯನ್ನು ವಾಪಸ್ ಪಡೆದರೆ, ಮನೆ ಬರೆದುಕೊಟ್ಟರೂ ಸರಿಯಾಗಿ ನೋಡಿಕೊಳ್ಳದ ಪುತ್ರನಿಂದ ಮಹಿಳೆಯೊಬ್ಬರನ್ನು ತಮ್ಮ ಆಸ್ತಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ-1:
undefined
ಹಾನಗಲ್ಲ ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ರತ್ನವ್ವ ಹಾಗೂ ಬಸಪ್ಪ ಬ್ಯಾಡಗಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಆದರೆ ತಮ್ಮನ್ನು ನೋಡಿಕೊಳ್ಳಲು ಮಗನೊಬ್ಬ ಇರಲಿ ಎಂದು ಸ್ವಂತ ಮಗಳ ಮಗ (ಮೊಮ್ಮಗ)ನನ್ನೇ ದತ್ತು ಪಡೆದಿದ್ದು, ಆತನಿಗೆ ಆಸ್ತಿಯನ್ನೂ ಬರೆದುಕೊಟ್ಟಿದ್ದರು. ಆದರೆ ಕೊನೇಗಾಲದಲ್ಲಿ ಆತ ಇವರ ನೋವಿಗೆ ಸ್ಪಂದಿಸದ ಕಾರಣ ಆಸ್ತಿ ಮರಳಿಪಡೆಯಲು ಕಾನೂನು ಹೋರಾಟ ಆರಂಭಿಸಿದ್ದರು. ಈ ಮಧ್ಯೆ, ಬಸಪ್ಪ ಅವರು ಕಾಲವಾಗಿ ರತ್ನವ್ವ ಬ್ಯಾಡಗಿ(70) ಒಂಟಿಯಾಗಿ ದಿನ ಸಾಗಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಸವಣೂರು ಉಪವಿಭಾಗಾಧಿಕಾರಿಗಳು ಪ್ರಕರಣವನ್ನು ಇತ್ಯರ್ಥಪಡಿಸಿ ಆಸ್ತಿ ಮರಳಿ ಕೊಡಿಸಿದ್ದಾರೆ.
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ..ಹೊಸ ದಿನಾಂಕ ಯಾವಾಗ?
2ನೇ ಕೇಸ್:
ತಾಲೂಕಿನ ನಿಸ್ಸೀಮ ಆಲದಕಟ್ಟಿಯ ಪಕ್ಕೀರವ್ವ ಪಕ್ಕೀರಪ್ಪ ಹನಕನಹಳ್ಳಿಗೆ 8 ಗಂಡು ಮಕ್ಕಳು. ಇವರ 17 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಸಮನಾಗಿ ಹಂಚಿದ್ದರು. ಪಕ್ಕೀರವ್ವ ಅವರ ಮನೆಯನ್ನು 5ನೇ ಪುತ್ರ ಭಕ್ಷೀಸ ಪತ್ರ ಮಾಡಿಕೊಂಡಿದ್ದ. ಆದರೆ ಆ ಪುತ್ರ ಸರಿಯಾಗಿ ತಮ್ಮನ್ನು ನೋಡಿಕೊಳ್ಳದ ಕಾರಣ ಪಕ್ಕೀರವ್ವ (90)ಆ ಮನೆ ಮರಳಿ ಪಡೆಯಲು ಸವಣೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಈಗ ಮನೆ ಪಕೀರಮ್ಮ ಪಾಲಾಗಿದೆ. ಈ ಎರಡೂ ಪ್ರಕರಣಗಳು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007ರ ಅನ್ವಯ ದಾಖಲಾಗಿದ್ದವು.