ಹುಣ​ಸೋಡು ಬ್ಲಾಸ್ಟ್‌: ಸ್ಫೋಟಕ ಪೂರೈಸಿದ ಮಾಲೀಕ ಶ್ರೀರಾ​ಮುಲು ಅರೆಸ್ಟ್‌

By Kannadaprabha News  |  First Published Feb 6, 2021, 7:45 AM IST

ಆಂಧ್ರ​ದಿಂದ ಪೂರೈ​ಕೆ​ಯಾ​ಗಿದ್ದ ಸ್ಫೋಟ​ಕ| ಆಂಧ್ರದ ಶ್ರೀರಾ​ಮುಲು, ಈತನ ಪುತ್ರ ಸೆರೆ| ಪ್ರಕ​ರ​ಣಕ್ಕೆ ಸಂಬಂಧಿಸಿ ಈವ​ರೆ​ಗೆ 8 ಮಂದಿ ಸೆರೆ| 


ಶಿವಮೊಗ್ಗ(ಫೆ.06): ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಒಂದಿಷ್ಟು ಟ್ವಿಸ್ಟ್‌ ಸಿಕ್ಕಿವೆ. ಇಲ್ಲಿ ಬಳಕೆಯಾದ ಸ್ಫೋಟಕ ವಸ್ತುಗಳು ಆಂಧ್ರಪ್ರದೇಶದಿಂದ ಪೂರೈಕೆಯಾಗಿದ್ದು, ಇದರ ಮಾಲೀಕ ಶ್ರೀರಾಮುಲು ಎಂದು ಪತ್ತೆ ಹಚ್ಚಲಾಗಿದೆ. ಈತ ಸೇರಿ ಪ್ರಕರಣ ಸಂಬಂಧ ಈವ​ರೆಗೆ 8 ಮಂದಿ​ಯನ್ನು ಬಂಧಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಶುಕ್ರ​ವಾರ ಈ ವಿಚಾರ ತಿಳಿಸಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು, ಹುಣಸೋಡು ಸ್ಫೋಟ ಪ್ರಕರಣದ ತನಿಖೆಗಾಗಿ 6 ಮಂದಿ ತಂಡ ರಚಿಸಲಾಗಿತ್ತು. ತುಂಗಾನಗರ ಪಿಐ ದೀಪಕ್‌, ಸೊರಬದ ಸಿಪಿಐ ಮರಳಸಿದ್ದಪ್ಪ ಅವರು ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿ ನಡೆಸಿದ ತನಿಖೆಯಲ್ಲಿ ಇದೆಲ್ಲ ಪತ್ತೆಯಾಯಿತು. ಆಂಧ್ರದ ರಾಯದುರ್ಗದಲ್ಲಿ ಈ ಸ್ಫೋಟಕ ಸಂಗ್ರಹಿಸಲಾಗಿತ್ತು ಎಂದರು.

Latest Videos

undefined

ಹುಣಸೋಡು ಸ್ಫೋಟ ಪ್ರಕರಣ : ಕ್ರಷರ್‌ ಪರವಾನಗಿ ರದ್ದು

ಸ್ಫೋಟ ನಡೆಯುತ್ತಿದ್ದಂತೆ ಸ್ಫೋಟಕ ಪೂರೈ​ಸಿದ್ದ ಶ್ರೀರಾಮಲು ಮತ್ತು ಪುತ್ರ ಮಂಜುನಾಥ್‌ ಸಾಯಿ ಮುಂಬೈಗೆ ಪರಾ​ರಿ​ಯಾ​ಗಿ​ದ್ದರು. ಅಲ್ಲೇ ಅವ​ರ​ನ್ನು ಬಂಧಿ​ಸ​ಲಾ​ಗಿದೆ. ಇವರ ರಾಯ​ದು​ರ್ಗದ ಗೋದಾಮಿನಲ್ಲಿ ಸ್ಫೋಟಕ ಸಂಗ್ರಹಕ್ಕೆ ಪರವಾನಗಿ ಇದ್ದರೂ ಅದರ ಸಾಗಣೆಗೆ ಪರವಾನಗಿ ಇರಲಿಲ್ಲ. ಈ ಹಿನ್ನೆಲೆæಯಲ್ಲಿ ವಾಹನದಲ್ಲಿ ಸ್ಫೋಟ​ಕ ಅಕ್ರಮ ಸಾಗಣೆ ಮತ್ತು ಸಂಗ್ರಹ ಹಿನ್ನೆ​ಲೆ​ಯಲ್ಲಿ ಸ್ಥಳೀಯ ಪೊಲೀ​ಸರ ನೆರ​ವಿ​ನೊಂದಿಗೆ ಆಂಧ್ರದಲ್ಲಿ ಪ್ರಕರಣ ದಾಖಲಿಸಲಾಗಿದೆ.
 

click me!