ವೃದ್ಧ ಭಿಕ್ಷುಕಿಯಿಂದ ಸಾಲಿಗ್ರಾಮ ದೇವಾಲಯಕ್ಕೆ 1ಲಕ್ಷ ದೇಣಿಗೆ !

By Suvarna News  |  First Published Feb 6, 2021, 8:13 AM IST

ನಿತ್ಯದ ಜೀವನಕ್ಕಾಗಿ ಭಿಕ್ಷೆ ಬೇಡುವ, ಅಜ್ಜಿ ಅಶ್ವತ್ಥಮ್ಮ ಅನ್ನದಾನ ಸೇವೆಗೆ 1 ಲಕ್ಷ ರು. ದೇಣಿಗೆ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಕೋಟ (ಫೆ.06): ಇಲ್ಲಿನ ಸಾಲಿಗ್ರಾಮದ ಶ್ರೀ ಗುರುನರಸಿಂಹ, ಆಂಜನೇಯ ದೇವಳದ ಪರಿಸರದಲ್ಲಿ ನಿತ್ಯದ ಜೀವನಕ್ಕಾಗಿ ಭಿಕ್ಷೆ ಬೇಡುವ, ಅಜ್ಜಿ ಅಶ್ವತ್ಥಮ್ಮ ಅವರು  ದೇವಸ್ಥಾನದ ಅನ್ನದಾನ ಸೇವೆಗೆ 1 ಲಕ್ಷ ರು. ದೇಣಿಗೆ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರ ಹೊಟ್ಟೆತುಂಬಲಿ, ಕರೋನಾದಿಂದ ಮುಕ್ತಿ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಹಣವನ್ನು ಶ್ರೀಗುರುನರಸಿಂಹ ದೇವರಿಗೆ ಅರ್ಪಿಸುತ್ತಿದ್ದೇನೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.

Tap to resize

Latest Videos

ಶ್ರೀದೇವಳದ ಅರ್ಚಕ ವೇ.ಮೂ. ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕ ಕೆ. ನಾಗರಾಜ ಹಂದೆ ಅವರು ಅಶ್ವತ್ಥಮ್ಮ ಅವರಿಗೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.

ಖಾತೆಯಲ್ಲಿ ಲಕ್ಷಾಂತರ ಹಣವಿದ್ರು ಭಿಕ್ಷುಕರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ :ನೆರವಿನ ಹಸ್ತ ..

ಸಾಲಿಗ್ರಾಮ ಮಯ್ಯ ಟಿಫೀನ್‌ ರೂಂನ ಮಾಲೀಕ ರಾಘವೇಂದ್ರ ಹೆಬ್ಬಾರ್‌ ಮತ್ತು ಮಾನಸ ಸ್ಟುಡಿಯೋ ಮಾಲೀಕ ರವಿಕುಮಾರ್‌ ಉಪಸ್ಥಿತರಿದ್ದರು.

ಅವರು ಈ ಹಿಂದೆಯೂ ಅನೇಕ ದೇವಾಲಯಗಳಿಗೆ ತಾವು ಭಿಕ್ಷೆ ಬೇಡಿ ಸಂಗ್ರ​ಹಿ​ಸಿದ ಹಣ​ವನ್ನು ದಾನ ಮಾಡಿದ್ದಾರೆ. ಅವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಪ್ರಶಂಸೆ ವ್ಯಕ್ತವಾಗಿದೆ.

ಭಾರತದ ಉದ್ದಗಲಕ್ಕೂ ಇರುವ ಹಲವು ಪವಿತ್ರ ಕ್ಷೇತ್ರಗಳ ಯಾತ್ರೆ ಮಾಡಿರುವ ಅಶ್ವ​ತ್ಥ​ಮ್ಮ, ಅಯ್ಯಪ್ಪಸ್ವಾಮಿ ಪರಮಭಕ್ತೆ.

click me!