Panini Maharshi: ಪಾಣಿನಿಯೇ ವಿಶ್ವದ ಮೊದಲ ಕಂಪ್ಯೂಟರ್‌ ತಂತ್ರಜ್ಞಾನಿ: ತರಳಬಾಳು ಶ್ರೀ

By Kannadaprabha NewsFirst Published Feb 19, 2023, 5:06 AM IST
Highlights

ಕ್ರಿ.ಪೂ. ಐದನೆಯ ಶತಮಾನದಲ್ಲಿ ಬದುಕಿದ್ದ ಪಾಣಿನಿ ಮಹರ್ಷಿಯೇ ಜಗತ್ತಿನ ಮೊಟ್ಟಮೊದಲ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದನು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸಿರಿಗೆರೆ (ಫೆ.19) : ಕ್ರಿ.ಪೂ. ಐದನೆಯ ಶತಮಾನದಲ್ಲಿ ಬದುಕಿದ್ದ ಪಾಣಿನಿ ಮಹರ್ಷಿಯೇ ಜಗತ್ತಿನ ಮೊಟ್ಟಮೊದಲ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದನು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕಾಶಿ(Kashi)ಯ ಪ್ರಖ್ಯಾತ ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯ(Banaras Hindu University)ದ ಸಂಸ್ಕೃತ ಮತ್ತು ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಪಾಣಿನಿಯ ಅಷ್ಟಾಧ್ಯಾಯಿ ಕುರಿತು ತಂತ್ರಾಂಶ ಪ್ರಾಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಐದನೆಯ ಶತಮಾನದಷ್ಟುಹಿಂದೆಯೇ ಅಪ್ರತಿಮ ಸಂಸ್ಕೃತ ವಿದ್ವಾಂಸನಾಗಿದ್ದ ಪಾಣಿನಿಯು ರಚಿಸಿದ್ದ ವ್ಯಾಕರಣ ಶಾಸ್ತ್ರವು ಕಂಪ್ಯೂಟರಿಗೆ ಅಳವಡಿಸಬಹುದಾದಷ್ಟುಚಾಕಚಕ್ಯತೆಯಿಂದ ರಚಿಸಿರುವುದು ವೇದ್ಯವಾಗುತ್ತದೆ ಎಂದರು.

Latest Videos

ಉಜ್ಜಯಿನಿ- ತರಳಬಾಳು ಮಠಗಳ ವೈಷಮ್ಯ ಸ್ಫೋಟ: ಕೆಲ ಗ್ರಾಮಗಳಲ್ಲಿ ಕಲ್ಲು ತೂರಾಟ ಮನೆಗಳು ಜಖಂ

ಪಾಣಿನಿ(Panini), ಪತಂಜಲಿ(Patanjali) ಮತ್ತು ಕಾತ್ಯಾಯನ(katyayana) ಇವರು ಸಂಸ್ಕೃತ ವ್ಯಾಕರಣ ತ್ರಿಮೂರ್ತಿಗಳಾಗಿದ್ದಾರೆ. ನಮ್ಮ ಬೃಹನ್ಮಠದಲ್ಲಿನ ಲೆಕ್ಕಪತ್ರಗಳಿಗೆ ತಂತ್ರಾಂಶ ಬರೆಯುವ ಸಂದರ್ಭದಲ್ಲಿ ಪಾಣಿನಿಯ ವ್ಯಾಕರಣವನ್ನೂ ಅಳವಡಿಸುವ ಬಗ್ಗೆ ತಮಗೆ ಸುಳುಹು ದೊರೆಯಿತು. ಆಗ ಲಭ್ಯವಿದ್ದ ಡಾಸ್‌ ಪ್ಲಾಟ್‌ಫಾರಂ(DOS platform) ಬಳಸಿಕೊಂಡು ಡಿ.ಬೇಸ್‌ ಮೂಲಕ ವ್ಯಾಕರಣವನ್ನು ಅಳವಡಿಸುತ್ತಾ ಹೋದಂತೆ ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದ ಬಗ್ಗೆ ನಮಗೆ ಹೊಸಹೊಸ ಚಿಂತನೆಗಳು ತೆರೆದುಕೊಂಡವು ಎಂದರು.

ಪಾಣಿನಿ ಮಹರ್ಷಿಯ ಮೂಲ ಗ್ರಂಥ ಅಷ್ಟಾಧ್ಯಾಯಿ. ಅದನ್ನು ಕಂಪ್ಯೂಟರಿಗೆ ಅಳವಡಿಸಿ ಅದನ್ನು ಗಣಕಾಷ್ಟಾಧ್ಯಾಯಿ ಎಂದು ಕರೆದಿದ್ದೇವೆ. ಸಂಸ್ಕೃತದ ವ್ಯಾಕರಣಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಈ ತಂತ್ರಾಂಶ ಕ್ಷಣಮಾತ್ರದಲ್ಲಿ ಪರಿಹಾರ ನೀಡುತ್ತದೆ. ಮೂಲ ಗ್ರಂಥದಲ್ಲಿರುವ ಎಲ್ಲಾ 4000 ಸಾವಿರ ಸೂತ್ರಗಳನ್ನು ಕಂಪ್ಯೂಟರಿಗೆ ಅಳವಡಿಸಲಾಗಿದೆ. ಇದನ್ನು ತಮ್ಮ ಮಠದ ವೆಬ್‌ಸೈಟಿನಿಂದ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಶ್ರೀಗಳು ಹೇಳಿದರು.

ಇತ್ತೀಚೆಗೆ ಕೇಂಬ್ರಿಡ್ಜ್‌ ವಿಶ್ವ ವಿದ್ಯಾನಿಲಯ(Cambridge University)ದ ಸಂಶೋಧನಾ ವಿದ್ಯಾರ್ಥಿಯೊಬ್ಬರು ಪಾಣಿನಿ ಮಹರ್ಷಿ(Panini maharshi)ಯ ಸೂತ್ರದ ಸಮಸ್ಯೆಯೊಂದಕ್ಕೆ ಪರಿಹಾರವನ್ನು ತಾವು ಕಂಡುಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ. ಅದೊಂದು ತರ್ಕಬದ್ಧವಲ್ಲದ, ಅಮಾನ್ಯವಾದ ಮತ್ತು ತಪ್ಪುದಾರಿಗೆಳೆಯುವಂತಹ ಸಂಶೋಧನೆ ಆಗಿದೆ ಎಂದು ಹೇಳಿದ ಶ್ರೀಗಳು ಅವರ ಸಂಶೋಧನಾ ಪ್ರಬಂಧವನ್ನು ತಾವು ಅಭ್ಯಾಸ ಮಾಡಿದ್ದು, ಅದರಲ್ಲಿ ಪಾಣಿನಿಯ ಮೂಲ ಆಶಯಕ್ಕೆ ಅನುಗುಣವಲ್ಲದ ಹಲವು ಸಂಗತಿಗಳಿದ್ದು ಅವುಗಳನ್ನು ಒಪ್ಪಲಾಗದು ಎಂದಿದ್ದಾರೆ.

ತಾವು ವ್ಯಾಸಂಗ ಮಾಡಿದ್ದ ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯಕ್ಕೆ 45 ವರ್ಷಗಳ ನಂತರ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳನ್ನು ಭಕ್ತಿಯಿಂದ ಸ್ವಾಗತಿಸಲಾಯಿತು. ಉಪನ್ಯಾಸ ಕಾರ್ಯಕ್ರಮದ ಪೂರ್ವದಲ್ಲಿ ಶ್ರೀಗಳೇ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸುವಂತೆ ಮನವಿ ಮಾಡಲಾಯಿತು.

ಕಾಶಿಯ ವಿದ್ವತ್‌ ಪರಿಷತ್ತಿನ ಅಧ್ಯಕ್ಷ ಪದ್ಮಭೂಷಣ ಆಚಾರ್ಯ ವಶಿಷ್ಠ ತ್ರಿಪಾಠಿ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಕಾಶಿ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಪ್ರೊ.ಜಯಶಂಕರಲಾಲ್‌ ತ್ರಿಪಾಠಿ ಭಾಗವಹಿಸಿದ್ದರು. ವಿವಿಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದರು.

Valmiki Fair: ಸ್ವಾಮೀಜಿಗಳು ದಲಿತರ ಮೇಲೆ ಕಾಲಿಡುವುದನ್ನು ನಿಲ್ಲಿಸಬೇಕು: ಸಿರಿಗೆರೆ ಶ್ರೀಗಳ ಸಂದೇಶ

ವಿದ್ವಾಂಸರಿಗೆ ‘ಗಣಕಾಷ್ಟಾಧ್ಯಾಯಿ’ ಆಕರ

1994ರ ಸುಮಾರಿನಲ್ಲಿ ಆಸ್ಪ್ರೇಲಿಯಾದ ಮೆಲ್‌ಬೋರ್ನ್‌ನಲ್ಲಿ ನಡೆದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಅದನ್ನು ಪ್ರದರ್ಶಿಸಿದಾಗ ಜಗತ್ತಿನ ಹಲವು ಮೂಲೆಗಳಿಂದ ಬಂದಿದ್ದ ಸಂಸ್ಕೃತ ವಿದ್ವಾಂಸರು ಮತ್ತು ವಿವಿಗಳ ಪ್ರಾಧ್ಯಾಪಕರು ಮೆಚ್ಚುಗೆ ಸೂಚಿಸಿದರು. ವಿಂಡೋಸ್‌ ತಂತ್ರಜ್ಞಾನ ಲಭ್ಯವಾಗುತ್ತಿದ್ದಂತೆ ಗಣಕಾಷ್ಟಾಧ್ಯಾಯಿಯನ್ನು ವಿಂಡೋಸ್‌ಗೆ ಅಳವಡಿಸಿ, 1997ರಲ್ಲಿ ಬೆಂಗಳೂರಿನಲ್ಲಿ ನಡೆದ 10ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಪ್ರದರ್ಶಿಸಿದಾಗ ವ್ಯಾಪಕವಾದ ಮೆಚ್ಚುಗೆ ದೊರೆಯಿತು. ಈಗ ಜಗತ್ತಿನ ಹಲವು ಪ್ರತಿಷ್ಠಿತ ವಿವಿಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರು ಮತ್ತು ವಿದ್ವಾಂಸರು ಗಣಕಾಷ್ಟಾಧ್ಯಾಯಿಯನ್ನು ಆಕರ ಗ್ರಂಥವನ್ನಾಗಿ ಬಳಸುತ್ತಿದ್ದಾರೆ ಎಂದು ತರಳಬಾಳು ಶ್ರೀ ಹೇಳಿದರು.

click me!