ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜತೆಗೆ, ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ಕ್ರಮ ಕೈಗೊಳ್ಳ ಬಾರದೆಂದು ಶೂನ್ಯಬಡ್ಡಿದರದಲ್ಲಿ 5ಲಕ್ಷ್ಯದ ವರೆಗೆ ಸಾಲ ನೀಡುವ ನಿರ್ಣಯ ಮಾಡಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಅವರು ಹೇಳಿದ್ದಾರೆ.
ಚಿಕ್ಕಮಗಳೂರು (ಫೆ.19) : ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜತೆಗೆ, ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ಕ್ರಮ ಕೈಗೊಳ್ಳ ಬಾರದೆಂದು ಶೂನ್ಯಬಡ್ಡಿದರದಲ್ಲಿ 5ಲಕ್ಷ್ಯದ ವರೆಗೆ ಸಾಲ ನೀಡುವ ನಿರ್ಣಯ ಮಾಡಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ ಎಂದು ಶಾಸಕ ಸಿ.ಟಿ.ರವಿ(CT Ravi) ಅವರು ಹೇಳಿದ್ದಾರೆ.
ಲಕ್ಯಾದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(Primary Agricultural Co-operative Society)ದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, 90 ಲಕ್ಷ ರು. ವೆಚ್ಚದಲ್ಲಿ ನೂತನ ಕಟ್ಟಡ ಕಟ್ಟಲಾಗಿದೆ, ಕಳಸಾಪುರದಲ್ಲಿ ಡಿಸಿಸಿ ಬ್ಯಾಂಕ್(DCC Bank) ಶಾಖೆ ತೆರೆಯಲಾಗುವುದು, ಇಡೀ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಜತೆಗೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ನಿರ್ಣಯ ಕ್ರಮ ಮಾಡಬಾರದೆಂದು ಸರ್ಕಾರ ನಿರ್ಣಯ ಕೈಗೊಂಡಿದ್ದಾರೆ ಎಂದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಸಿ.ಟಿ.ರವಿ ಆಪ್ತ ಹೆಚ್.ಡಿ.ತಮ್ಮಯ್ಯ
ರೈತರು(Farmers), ಉದ್ದೇಶ ಪೂರ್ವಕವಾಗಿ ಮೋಸ ಮಾಡುವವರಲ್ಲ, ಬೆಳೆ ನಾಶದಿಂದ, ಮಳೆ ಬಾರದಿದ್ದಾಗ ರೈತನು ಅಸಹಾಯಕನಾಗುತ್ತಾನೆ, ರಸಗೊಬ್ಬರ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ, ರೈತರಿಗೆ ಮೋಸವಾಗಬಾರದೆಂಬ ಉದ್ದೇಶದಿಂದ ಭಾರತ್ ಯೂರಿಯಾ ಎಂಬ ಒಂದೇ ಬ್ರಾಂಡಿನ ರಸಗೊಬ್ಬರವನ್ನು ದೇಶದಾದ್ಯಂತ ಮಾರಾಟ ಮಾಡುವ ತೀರ್ಮಾನ ಸರ್ಕಾರ ಕೈಗೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ(PM Narendra Modi) ಕನಸಾದ ಮನೆ-ಮನೆಗಳಿಗೆ ಗಂಗೆ ಎಂಬ ಯೋಜನೆಯಲ್ಲಿ 5.5 ಕೋಟಿ ಹಣ ಬಿಡುಗಡೆ ಮಾಡಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ನೀಡ ಲಾಗುವುದು, 45 ಲಕ್ಷ ರು. ವೆಚ್ಚದ ರಸ್ತೆ ಕಾಮಗಾರಿ ನಡೆಯುತ್ತಿದೆ.ಈ ಪಂಚಾಯ್ತಿಗೆ 55 ಕೋಟಿ ರು. ಅನುದಾನ ನೀಡಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಪ್ಪ ಮಾತನಾಡಿ, ರೈತರ ಬಳಿಗೆ ತೆರಳಿ ಸಹಕಾರಿ ಸಂಘದ ಪ್ರಯೋಜನ ತಿಳಿಸಿ, ರೈತರಿಂದ ಷೇರು ಸಂಗ್ರಹಿಸಿ ಸಂಘದಿಂದ ಸಾಲ ವಿತರಣೆ ಮಾಡಿ ಕೊಂಡು ಬಂದಿದ್ದು, 2 ವರ್ಷಗಳಿಂದ ಕೃಷಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ರೈತರಿಗೆ 10 ಕೋಟಿ ವರೆಗಿನ ಸಾಲ ನೀಡಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್ ಮಾತನಾಡಿ, ಜಿಲ್ಲೆಯಲ್ಲಿ 280 ಕೋಟಿ ಸಾಲಮನ್ನಾದ ಜತೆಗೆ 5 ಲಕ್ಷ ರು. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುವಂತೆ ಸಹಕಾರ ಇಲಾಖೆ, ಜಿಲ್ಲಾ ಸಹಕಾರಿ ಬ್ಯಾಂಕ್ ಮಾಡುತ್ತಿದೆ. ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್ ಆರ್ಥಿಕ ಒತ್ತಡ ಅನುಭವಿಸುತ್ತಿದೆ, ಈ ಸಮಸ್ಯೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಗೆಹರಿಸಬೇಕು. ನಬಾರ್ಡ್‌ನಿಂದ ಹೆಚ್ಚಿನ ಮರು ಹಣಕಾಸಿನ ವ್ಯವಸ್ಥೆ ಜತೆಗೆ, ರಾಜ್ಯದಿಂದ ಶೇ.4, ಕೇಂದ್ರದಿಂದ ಶೇ.3 ಬಡ್ಡಿ ದರದಲ್ಲಿ ಸಿಗುವ ಹಣದಲ್ಲಿ ರಾಜ್ಯ ಸರ್ಕಾರದಿಂದ ಬಡ್ಡಿ ನೆರವು ದೊರೆತಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ಗೆ ಲಾಭವಾಗುವ ಜತೆಗೆ, ಸಹಕಾರ ಸಂಘದಿಂದ ಹೆಚ್ಚಿನ ರೈತರಿಗೆ ಸಾಲ ವಿತರಣೆ ಮಾಡಬಹುದು ಎಂದು ತಿಳಿಸಿದರು.
ಲಕ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎಂ.ಕೃಷ್ಣೇಗೌಡ ಮಾತನಾಡಿ, ರೈತರ ಸಹಕಾರದಿಂದ ಲಕ್ಯಾ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ, ರೈತರು ಯಶಸ್ವಿನಿ ಯೋಜನೆಯಲ್ಲಿ ನೋಂದಾಣಿ ಮಾಡಿ, ಸಿಗುವ ಸೌಲಭ್ಯ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್‌ನವರಿಗೆ ಚೆಂಡುಹೂವು ಇನ್ನೂ ಪರ್ಮನೆಂಟ್: ಸಿ.ಟಿ.ರವಿ ವ್ಯಂಗ್ಯ
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬೆಳವಾಡಿ ರವೀಂದ್ರ, ಗ್ರಾಪಂ ಅಧ್ಯಕ್ಷೆ ಶೋಭಾ ಜಗದೀಶ್, ಜನತಾ ಬಜಾರ್ ಅಧ್ಯಕ್ಷ ಮಲ್ಲೇದೇವರಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಲ್.ಕೆ.ರುದ್ರೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಎಲ್.ಟಿ.ರಂಗಪ್ಪ, ಎಲ್.ವಿ.ಬಸವರಾಜ್, ಸಂಘದ ಉಪಾಧ್ಯಕ್ಷ ಎಲ್.ಎಲ್.ಜಯಣ್ಣ, ಆಡಳಿತ ಮಂಡಳಿ ನಿರ್ದೇಶಕ ಗೋಪಾಲಸ್ವಾಮಿ, ಬಸವರಾಜ್, ಧನಂಜಯಮೂರ್ತಿ, ಸಿದ್ದೇಗೌಡ, ಉಮೇಶ್, ಜಗದೀಶ್, ತೇಜು, ಸಾವಿತ್ರಮ್ಮ ಮಂಜುನಾಥ್, ಮಂಜುಳಾ ಪರಮೇಶ್ವರಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನಾಗೇಶ್, ರಾಜೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಣ್ಣೇಗೌಡ ಉಪಸ್ಥಿತರಿದ್ದರು.