ಹುಬ್ಬಳ್ಳಿ-ನಿಜಾಮುದ್ದೀನ್‌ ರೈಲಿಗೆ ಪಂ. ಸವಾಯಿ ಗಂಧರ್ವ ಹೆಸರು

By Kannadaprabha NewsFirst Published Oct 12, 2022, 9:24 AM IST
Highlights

ಹುಬ್ಬಳ್ಳಿ-ನಿಜಾಮುದ್ದೀನ್‌ ರೈಲಿಗೆ ‘ಪಂಡಿತ ಸವಾಯಿ ಗಂಧರ್ವ’ ರೈಲು ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು. ಧಾರವಾಡದ ನವೀಕೃತ ರೈಲ್ವೆ ನಿಲ್ದಾಣ, ಹುಬ್ಬಳ್ಳಿಯ ರೈಲು ನಿಲ್ದಾಣದ 3ನೆಯ ಪ್ರವೇಶ ದ್ವಾರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಧಾರವಾಡ/ಹುಬ್ಬಳ್ಳಿ (ಅ.12) : ಹುಬ್ಬಳ್ಳಿ-ನಿಜಾಮುದ್ದೀನ್‌ ರೈಲಿಗೆ ‘ಪಂಡಿತ ಸವಾಯಿ ಗಂಧರ್ವ’ ರೈಲು ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು. ಧಾರವಾಡದ ನವೀಕೃತ ರೈಲ್ವೆ ನಿಲ್ದಾಣ, ಹುಬ್ಬಳ್ಳಿಯ ರೈಲು ನಿಲ್ದಾಣದ 3ನೆಯ ಪ್ರವೇಶ ದ್ವಾರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ರೈಲ್ವೆಗೆ ಯುಪಿಎಗಿಂತ ಎನ್‌ಡಿಎ 3 ಪಟ್ಟು ಹೆಚ್ಚು ಅನುದಾನ

Latest Videos

ಹುಬ್ಬಳ್ಳಿ-ನಿಜಾಮುದ್ದೀನ್‌ ರೈಲು ಸಾಪ್ತಾಹಿಕ ಸಂಚರಿಸುತ್ತದೆ. ಸದ್ಯ ಈ ರೈಲಿನ ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ಎಂಬ ಹೆಸರಿದೆ. ಇದಕ್ಕೆ ಈ ಭಾಗದ ಸಂಗೀತ ದಿಗ್ಗಜ ಪಂಡಿತ ಸವಾಯಿ ಗಂಧರ್ವರ ಹೆಸರಿಡಬೇಕೆಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮನವಿ ಮಾಡಿರುವುದುಂಟು. ಈ ನಿಟ್ಟಿನಲ್ಲಿ ಸವಾಯಿ ಗಂಧರ್ವರ ಹೆಸರಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಹುಬ್ಬಳ್ಳಿಯಿಂದ ವಾರಣಾಸಿಗೆ ಸದ್ಯ ವಾರಕ್ಕೆ ಒಂದು ಬಾರಿ ಮಾತ್ರ ರೈಲು ಸಂಚರಿಸುತ್ತಿದೆ. ಇದನ್ನು ವಾರಕ್ಕೆ ಎರಡು ಬಾರಿ ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಇದೇ ವೇಳೆ ತಿಳಿಸಿದರು. ಬಿಜೆಪಿ ಸರ್ಕಾರಬಂದ ಮೇಲೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿತ್ತು. ಇದೀಗ ನಿಜಾಮುದ್ದೀನ ರೈಲಿಗೆ ಗಂಧರ್ವರ ಹೆಸರಿಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿರುವುದು ಜನತೆಯಲ್ಲಿ ಸಂತಸವನ್ನುಂಟು ಮಾಡಿದೆ.

ಧಾರವಾಡ: ಸೌಂಡ್‌ ಸ್ಪೀಕರ್ ಹಚ್ಚಿದಕ್ಕೆ ದುರ್ಗಾಮಾತಾ ಮಂಟಪಕ್ಕೆ ನುಗ್ಗಿ ಮಹಿಳಾ ಅಧಿಕಾರಿಯಿಂದ ದರ್ಪ..!

ಕುಂದಗೋಳ ನಿಲ್ದಾಣ;

ಈ ನಡುವೆ ಕುಂದಗೋಳ ರೈಲ್ವೆ ನಿಲ್ದಾಣಕ್ಕೂ ಸವಾಯಿ ಗಂಧರ್ವರ ಹೆಸರನ್ನಿಡಬೇಕೆಂದು ಕೂಡ ಗಂಧರ್ವರ ವಂಶಸ್ಥರಾದ ನಾರಾಯಣ ಜೋಶಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

click me!