2A ಮೀಸಲಾತಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ!

Published : Jul 04, 2022, 02:50 PM IST
2A ಮೀಸಲಾತಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ!

ಸಾರಾಂಶ

ನಿಗದಿತ ಸಮಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡದಿಂದ್ರೆ ಮುಂದಿನ ದಿನಗಳಲ್ಲಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ ಮಾಡುವ ಪ್ರತಿಜ್ಞೆ  ಕೈಗೊಳ್ಳಲಾಗಿದೆ.

ಗದಗ (ಜು.4) : ನಿಗದಿತ ಸಮಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡದಿಂದ್ರೆ ಮುಂದಿನ ದಿನಗಳಲ್ಲಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ ಮಾಡಲಿದ್ದೇವೆ ಅಂತಾ ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್ ಹೇಳಿದ್ದಾರೆ.

ಗದಗನಲ್ಲಿ ಮಾತ್ನಾಡಿದ ಅವರು, ಆಗಸ್ಟ್ 22 ಸರ್ಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ. ಮೀಸಲಾತಿ ನೀಡದಿದ್ರೆ ಉಗ್ರ ಹೋರಾಟ ಮಾಡಲಾಗುವುದು ಅಂತಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.. ಉಪಚುನಾವಣೆ ಹಾಗೂ ಪರಿಷತ್ ಚುನಾವಣೆ ಕೇವಲ ನಿದರ್ಶನ. ಮೀಸಲಾತಿ ಘೋಷಿಸದಿದ್ದರೆ ಮುಂದಿನ ದಿನಗಳಲ್ಲಿ ಬಿಸಿತುಪ್ಪವಾಗಿ ಸರ್ಕಾರಕ್ಕೆ ಪರಿಣಮಿಸಲಿದೆ. ಮಸ್ಕಿ ಹಾಗೂ ಬೆಳಗಾವಿ ಚುನಾವಣೆಯ ಫಲಿತಾಂಶ ನೋಡಿದ್ದೀರಿ. ಚುನಾವಣೆಯಲ್ಲಿ ಮಹಿಳಾ ಮತದಾರರೂ ನಿರ್ಣಾಯಕ. ಮೀಸಲಾತಿಗಾಗಿ ಮಹಿಳಾ ಘಟಕ ಹೋರಾಟ ಮಾಡಿದೆ. ಚೆನ್ನಮ್ಮನ ಒನಕೆ ಪ್ರದರ್ಶನ ಮಾಡುವ ಮೂಲಕ ಮೀಸಲಾತಿ ಹೋರಾಟ ಮಾಡಲಾಗಿದೆ. ಸಿಎಮ್ ಮನೆ ಮುತ್ತಿಗೆ ಹಾಕಿ ಸರ್ಕಾರವನ್ನ ಎಚ್ಚರಿಸಲಾಗಿದೆ. ಮಹಿಳಾ ಘಟಕದಿಂದ ಮುಂದಿನ ಹೋರಾಟ ಮತ್ತಷ್ಟು ಉಗ್ರವಾಗಿರುತ್ತದೆ. 

ಮುಂಬರುವ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ನಿರ್ಧಾರ

ಮೀಸಲಾತಿ ಕೊಡುತ್ತಾರೋ ಇಲ್ಲವೋ ಸ್ಪಷ್ಟಪಡಿಸಲಿ: ಹಾಲು ಮತ, ವಾಲ್ಮೀಕಿ ಸಮಾಜ ಸೇರಿದಂತೆ ಕೆಲ ಸಮಾಜಗಳು ಮೀಸಲಾತಿ ಕೇಳುತ್ತಿವೆ. ನಾವೂ ಮೀಸಲಾತಿ ಕೇಳಿದ್ದೇವೆ.. ಮೀಸಲಾತಿ ವಿಷಯದಲ್ಲಿ ಸರ್ಕಾರ ಸ್ಪಷ್ಟ ಪಡಿಸಬೇಕು. ಮೂರು ತಿಂಗಳು, ಆರು ತಿಂಗಳು ಗಡುವು ತೆಗೆದುಕೊಂಡು ಸರ್ಕಾರ ಮೂಗಿಗೆ ತುಪ್ಪ ವರೆಸುವ ಕೆಲಸ ಮಾಡುತ್ತಿದೆ ಅಂತಾ ಆಕ್ರೋಶ ವ್ಯಕ್ತ ಪಡಿಸಿದ್ರು. 

ಶ್ರಾವಣ ಮಾಸದಿಂದ ಮಹಿಳಾ ಸಂಘಟನೆಗಾಗಿ ಉಡಿ ತುಂಬುವ ಕಾರ್ಯಕ್ರಮ: ಪಂಚಮಸಾಲಿ ಸಮುದಾಯದ ಒಕ್ಕೂಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸಂಚರಿಸಿ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.. 32 ಜಿಲ್ಲೆಯಲ್ಲಿ ಸಂಚರಿಸಿ ಸಂಘಟನೆ ಮಾಡಲಿದ್ದೇವೆ.. ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.. ಮುಂದಿನ ದಿನಗಳಲ್ಲಿ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಗುರಿ ಇದೆ ಅಂತಾ ವೀಣಾ ಕಶಪ್ಪನವರ್ ತಿಳಿಸಿದ್ರು‌.

ನಾನೂ ನಾಲ್ಕು ಬಾರಿ ಸಿಎಂ ಆಗಿದ್ದೆ, ಗವರ್ನರ್‌ ನನಗೆ ಪೇಡಾ ತಿನ್ಸಿರ್ಲಿಲ್ಲ!

ಬಾದಾಮಿ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ರುದ್ರಗೌಡರ ಆಯ್ಕೆ: ಪಟ್ಟಣದ ಕಿತ್ತೂರು ಚನ್ನಮ್ಮ ಬ್ಯಾಂಕಿನಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಾದಾಮಿ ತಾಲೂಕಿನ ಪಂಚಮಸಾಲಿ ಸಮಾಜದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ತಾಲೂಕಾ ಪಂಚಮಸಾಲಿ ಸಮಾಜದ ನೂತನ ಅಧ್ಯಕ್ಷರಾಗಿ ನಗರದ ಶ್ರೀ ವೀರಪುಲಕೇಶಿ ಬ್ಯಾಂಕಿನ ನಿವೃತ್ತ ಜನರಲ್‌ ಮ್ಯಾನೇಜರ್‌ ಚೊಳಚಗುಡ್ಡ ಗ್ರಾಮದ ಮಲ್ಲನಗೌಡ ಶಂಕರಗೌಡ ರುದ್ರಗೌಡರ ಹಾಗೂ ಉಪಾಧ್ಯಕ್ಷರಾಗಿ ಬಾದಾಮಿ ನಗರದ ಬಸವರಾಜ ಧೂಳಪ್ಪನವರ ಆಯ್ಕೆಯಾದರು. ಸಭೆಯಲ್ಲಿ ಪಟ್ಟದಕಲ್ಲಿನ ಸುಭಾಶ್ಚಂದ್ರ ಶಿವಸಂಗಪ್ಪ ಸುಂಕದ, ತೋಗಣಸಿ ಗ್ರಾಮದ ಗಂಗಪ್ಪ ಈರಪ್ಪ ಚಿನ್ನನ್ನವರ, ಸಮಾಜದ ಹಿಂದಿನ ಅಧ್ಯಕ್ಷ ಮುತ್ತಣ್ಣ ಕಳ್ಳಿಗುಡ್ಡ, ಹನಮಂತ ಮಾವಿನಮರದ, ಬಾಪುಗೌಡಾ ಪಾಟೀಲ, ಸಿದ್ಧನಗೌಡ ಪಾಟೀಲ, ಎಂ.ಡಿ.ಯಲಿಗಾರ, ಬಿ.ಸಿ.ಬೆಳವಟಗಿ, ಎಸ್‌.ಆರ್‌.ಮಂತ್ರಿ, ಎನ್‌.ಸ್‌.ಬೊಮ್ಮನಗೌಡ್ರ, ಶರಣಪ್ಪ ಮಾವಿನ ಮರದ, ಡಾ.ಶಿವಕುಮಾರ ಗಂಗಲ್ಲ, ಆರ್‌.ಎಂ.ಸಾರವಾಡ ಹಾಗೂ ತಾಲ್ಲೂಕಿನ ಸಮಾಜದ ಗುರು ಹಿರಿಯರು ಸರ್ವಸದಸ್ಯರು ಶುಭ ಕೋರಿದರು.

PREV
Read more Articles on
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?