Panchamasali Reservation: ನಾಳೆ 2ಎ ಮೀಸಲಿಗಾಗಿ ಬೃಹತ್‌ ಜಾಗೃತಿ ಸಮಾವೇಶ

By Kannadaprabha News  |  First Published Jan 13, 2023, 8:29 AM IST

 ಸಮಸ್ತ ವೀರಶೈವ ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರದಲ್ಲಿ ಒಬಿಸಿ ಹಾಗೂ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಬೃಹತ್‌ ಜನಜಾಗೃತಿ ಸಮಾವೇಶಗಳು ಈ ಬಾರಿಯ ಹರಜಾತ್ರೆಯ ಪ್ರಮುಖ ವಿಷಯ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಹೇಳಿದರು.


 ಹರಿಹರ (ಜ.13) : ಸಮಸ್ತ ವೀರಶೈವ ಲಿಂಗಾಯತ ಒಳ ಪಂಗಡಗಳಿಗೆ ಕೇಂದ್ರದಲ್ಲಿ ಒಬಿಸಿ ಹಾಗೂ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಬೃಹತ್‌ ಜನಜಾಗೃತಿ ಸಮಾವೇಶಗಳು ಈ ಬಾರಿಯ ಹರಜಾತ್ರೆಯ ಪ್ರಮುಖ ವಿಷಯ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಪೀಠ(Panchamasali peeta)ದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹರಜಾತ್ರಾ ಮಹೋತ್ಸವ(Harajatra mahotsav)ದ ಪೂರ್ವಸಿದ್ಧತೆ ಬಗ್ಗೆ ಮಾತನಾಡಿ ಜ.14 ಮತ್ತು 15ರಂದು ಜರುಗುವ ಹರ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ(BS Yadiyurappa), ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad joshi) ಭಾಗವಹಿಸಲಿದ್ದಾರೆ ಎಂದರು.

Latest Videos

undefined

Reservation: ಪ್ರವರ್ಗ 2ಸಿ, 2ಡಿ ಮೀಸಲಾತಿಗೆ ಹೈಕೋರ್ಟ್‌ ತಡೆ: ಪಂಚಮಸಾಲಿ, ಒಕ್ಕಲಿಗರಿಗೆ ಬಿಗ್‌ ಶಾಕ್

14ರ ಬೆಳಿಗ್ಗೆ 8.30ರಿಂದ 10.30ರವರೆಗೆ ಹರಿಹರ ಬೈಪಾಸ್‌ ರಸ್ತೆಯಿಂದ ಶ್ರೀಮಠದವರೆಗೆ ವಿವಿಧ ಕಲಾತಂಡಗಳು, ಮಹಿಳೆಯರ ಪೂರ್ಣಕುಂಭ ಹಾಗೂ ರೊಟ್ಟಿ, ಬುತ್ತಿಯೊಂದಿಗೆ ಬೃಹತ್‌ ಮೆರವಣಿಗೆ ನಡೆಯಲಿದೆ. ನಂತರ 11ಗಂಟೆಗೆ ಸಮಸ್ತ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದಲ್ಲಿ ಒಬಿಸಿ ಹಾಗೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಬೃಹತ್‌ ಜನಜಾಗೃತಿ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟ ಅಲಗೂರು ಜಮಖಂಡಿಯ ಮಹಾದೇವ ಶ್ರೀ, ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ , ಹಗರಿಬೊಮ್ಮನಹಳ್ಳಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶಾಖಾ ಮಠದ ಮಹಾಂತ ಶ್ರೀ, ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸುವರು.

ರಾಜ್ಯಾಧ್ಯಕ್ಷ ಬಿ.ಪಿ.ಪಾಟೀಲ್‌ ಕಾರ್ಯಕ್ರಮ ಉದ್ಘಾಟಿಸುವರು. ಖ್ಯಾತ ವಕೀಲರಾದ ಬಿ.ಎಸ್‌. ಪಾಟೀಲ್‌ ಮೀಸಲಾತಿ ಕುರಿತು ಮಾತನಾಡಲಿದ್ದಾರೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು, ಮುಖ್ಯ ಅತಿಥಿಗಳಾಗಿ ಸಚಿವರಾದ ಮುರುಗೇಶ್‌ ನಿರಾಣಿ, ಶಂಕರ ಪಾಟೀಲ್‌ ಮುನೇನಕೊಪ್ಪ, ಸಿ.ಸಿ.ಪಾಟೀಲ್‌, ಸಂಸದರಾದ ಸಂಗಣ್ಣ ಕರಡಿ, ಈರಣ್ಣ ಕಡಾಡಿ, ಶಾಸಕರಾದ ಸಿ.ಎಂ.ನಿಂಬಣ್ಣನವರ್‌, ಶಿವಾನಂದ ಪಾಟೀಲ್‌, ಲಕ್ಷ್ಮಿ ಹೆಬ್ಬಾಳ್ಕರ್‌, ಪ್ರಕಾಶ್‌ ಹುಕ್ಕೇರಿ, ಮಹೇಶ್‌ ಕುಮಟಳ್ಳಿ, ಕಳಕಪ್ಪ ಬಂಡಿ, ಹನುಮಂತ ಆರ್‌. ನಿರಾಣಿ, ಅರವಿಂದ ಬೆಲ್ಲದ, ಎಂ.ವೈ.ಪಾಟೀಲ್‌, ಮಹಾಂತೇಶ್‌ ದೊಡ್ಡಗೌಡರ್‌, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್‌ ಕುಮಾರ್‌ ಪೂಜಾರ್‌, ಸಿದ್ದು ಸವದಿ, ಗಣೇಶ್‌ ಹುಕ್ಕೇರಿ, ಚನ್ನರಾಜ ಹಟ್ಟಿಹೊಳ್ಳಿ ಮತ್ತಿರರು ಭಾಗವಹಿಸಲಿದ್ದಾರೆ.

ರೈತ ರತ್ನ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ, ಬಿಎಸ್‌ವೈ:

ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತ ರತ್ನ ಸಮಾವೇಶ ಉದ್ಘಾಟಿಸುವರು. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಎರೇ ಹೊಸಳ್ಳಿ ಯೋಗಿವೇಮನ ಗುರುಪೀಠದ ವೇಮನಾನಂದ ಶ್ರೀ. ಸಿದ್ದರಹಳ್ಳಿ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಶ್ರೀ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಜ.15 ರಂದು ಬೆಳಿಗ್ಗೆ 11 ಕ್ಕೆ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳಿಗೆ ಜ್ಞಾನಯೋಗಿ ನುಡಿ ನಮನ’ ಕಾರ್ಯಕ್ರಮ ತರಳಬಾಳು ಜಗದ್ಗುರು ಡಾ. ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಮಧ್ಯಾಹ್ನ 3 ಕ್ಕೆ ಹರ ಪೀಠಾಧ್ಯಕ್ಷ ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿ ಪಂಚಮ ಪೀಠಾರೋಹಣ ಕಾರ್ಯಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಂಚಮವಾಣಿ ಪತ್ರಿಕೆ ಅನಾವರಣಗೊಳಿಸುವರು.

ಮುಖ್ಯ ಅತಿಥಿಗಳಾಗಿ ಬಾಲ್ಕಿ ಡಾ.ಬಸವಲಿಂಗ ಪಟ್ಟದೇವರು,ಇಲಕಲ್‌ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಶ್ರೀಗುರು ಮಹಾಂತ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸುವರು. ಶ್ರೀಪೀಠದ ಧರ್ಮದರ್ಶಿ ಪಿ.ಡಿ. ಶಿರೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್‌ ಪೂಜಾರ್‌, ಸಮಾಜದ ಮುಖಂಡರಾದ ಮಲ್ಲಿನಾಥ್‌, ವಾಣಿ ಶಿವಣ್ಣ, ವಸಂತ ಹುಲ್ಲತ್ತಿ, ಸುಷ್ಮಾ ಪಾಟೀಲ್‌, ರೇಷ್ಮಾ ಕುಂಕೋದ ಮತ್ತಿತರರಿದ್ದರು.

Panchamasali Reservation: 2D ಮೀಸಲಾತಿ ನಿರಾಕರಣೆ, ಜ.13ರಂದು ಸಿಎಂ ನಿವಾಸದೆದುರು ಜಯಮೃತ್ಯುಂಜಯ ಶ್ರೀ ಹೋರಾಟ

ಎರಡು ಲಕ್ಷ ಮಂದಿಗೆ ಪ್ರಸಾದ ವ್ಯವಸ್ಥೆ

ಹರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್‌ ಪಾಟೀಲ್‌ ಮಾತನಾಡಿ ಕಾರ್ಯಕ್ರಮಕ್ಕೆ ಬೃಹತ್‌ ವೇದಿಕೆ ಹಾಕಲಾಗಿದ್ದು. ಎರಡು ಲಕ್ಷ ಮಂದಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು. ಬೇರೆ ಊರು, ಜಿಲ್ಲೆಗಳಿಂದ ಬರುವ ಭಕ್ತರಿಗೆ ರಾಜನಹಳ್ಳಿ ವಾಲ್ಮೀಕಿ ಮಠ ಹಾಗೂ ವೇಮನಪೀಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಮಠದ ಮುಂಭಾಗ ಸುಮಾರು 50 ಎಕರೆ ಜಮೀನಿನಲ್ಲಿ ಪಾರ್ಕಿಂಗ್‌ಗೆ ಸಿದ್ಧತೆ ಮಾಡಲಾಗಿದೆ. 14 ಮತ್ತು 15ರಂದು ಎರಡು ದಿನಗಳ ಕಾಲ ರೆಡ್‌ಕ್ರಾಸ್‌ ಹಾಗೂ ಶ್ರೀಪೀಠದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

click me!