ಸುಧರ್ಮಾ ಸಂಪತ್ ಕುಮಾರ್, ಜಯಲಕ್ಷ್ಮೀ ದಂಪತಿಗೆ ಪದ್ಮಶ್ರೀ

By Kannadaprabha NewsFirst Published Jan 26, 2020, 10:15 AM IST
Highlights

ಅರ್ಧ ಶತಮಾನ ಕಂಡ ಕಂಡಿರುವ ದೇಶದ ಏಕೈಕ ಸಂಸ್ಕೃತ ದಿನ ಪತ್ರಿಕೆ ‘ಸುಧರ್ಮಾ’ ಮೈಸೂರಿನಲ್ಲಿದೆ. ಇಲ್ಲಿನ ದಂಪತಿ ಸುಮಾರು 30 ವರ್ಷಗಳಿಂದ ಸಂಸ್ಕೃತದ ಉಳಿವಿಗೆ, ಪ್ರತಿಫಲಾಫೇಕ್ಷೆ ಇಲ್ಲದೆ ಪತ್ರಿಕೋದ್ಯಮವನ್ನು ಮುನ್ನೆಡೆಸುತ್ತಿದ್ದಾರೆ. ಇವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೈಸೂರು(ಜ.26): ಅರ್ಧ ಶತಮಾನ ಕಂಡ ಕಂಡಿರುವ ದೇಶದ ಏಕೈಕ ಸಂಸ್ಕೃತ ದಿನ ಪತ್ರಿಕೆ ‘ಸುಧರ್ಮಾ’ ನಡೆಸುತ್ತಿರುವ ಮೈಸೂರಿನ ಕೆ.ವಿ.ಸಂಪತ್‌ ಕುಮಾರ್‌(64), ವಿದುಷಿ ಜಯಲಕ್ಷ್ಮೀ(52) ದಂಪತಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸುಮಾರು 30 ವರ್ಷಗಳಿಂದ ಸಂಸ್ಕೃತದ ಉಳಿವಿಗೆ, ಪ್ರತಿಫಲಾಫೇಕ್ಷೆ ಇಲ್ಲದೆ ಪತ್ರಿಕೋದ್ಯಮವನ್ನು ಮುನ್ನೆಡೆಸುತ್ತಿರುವ ಕಾರಣಕ್ಕೆ ಈ ದಂಪತಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

‘ರಾಷ್ಟ್ರಸಂತ’ ಉಡುಪಿ ವಿಶ್ವೇಶ ತೀರ್ಥರಿಗೆ ಮರಣೋತ್ತರ ಗೌರವ

ಮೈಸೂರಿನಿಂದ ಪ್ರಕಟವಾಗುವ ಸುಧರ್ಮಾ ದಿನ ಪತ್ರಿಕೆಯನ್ನು ಸಂಪತ್‌ಕುಮಾರ್‌ ಅವರ ತಂದೆ ವರದರಾಜ ಅಯ್ಯಂಗಾರ್‌ 1970 ಜುಲೈ 15 ರಂದು ಆರಂಭಿಸಿದರು. 1990, ಆಗಸ್ಟ್‌ 5 ರಂದು ವರದರಾಜ್‌ ಅಯ್ಯಂಗಾರ್‌ ನಿಧನಾನಂತರ ಪುತ್ರ ಸಂಪತ್‌ ಕುಮಾರ್‌ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡಿದ್ದಾರೆ. ಸಂಸ್ಕೃತ ಭಾಷೆ, ಅಭಿವೃದ್ಧಿ ಪ್ರಸಾರವೇ ಇದರ ಧ್ಯೇಯೋದ್ದೇಶವಾಗಿದ್ದು, ಸರಳ ಸಂಸ್ಕೃತದಲ್ಲಿ ದೇಶದ ಪ್ರಚಲಿತ ವಿದ್ಯಾಮಾನಗಳನ್ನು ಪ್ರಕಟಿಸುತ್ತಾರೆ.

ಕಿತ್ತಳೆ ಮಾರಿ ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತನಿಗೆ ಪದ್ಮಶ್ರೀ

ಸುಧರ್ಮಾದಲ್ಲಿ ಬಾಲಕತೆ, ಪ್ರಶ್ನಮಂಚ, ಹಾಸ್ಯ, ಪ್ರಸಿದ್ಧ ದೇವಾಲಯಗಳ ಕುರಿತು ಸಂಸ್ಕೃತದಲ್ಲಿ ಪರಿಚಯ ವಿರುತ್ತದೆ. ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆ ಆರಂಭವಾಗಲು ವರದರಾಜ್‌ ಅಯ್ಯಂಗಾರ್‌ ಅವರೇ ಕಾರಣ. ಈ ಪತ್ರಿಕೆಗೆ ವಿದ್ವಾಂಸರಾದ ಎಚ್‌.ವಿ.ನಾಗರಾಜರಾವ್‌, ಸತ್ಯನಾರಾಯಣ ಮೊದಲಾದ ವಿದ್ವಾಂಸರು ಸುಧರ್ಮಾ ಲೇಖನಗಳನ್ನು ಬರೆಯುತ್ತಾರೆ.

ಸಂಪತ್‌ ಕುಮಾರ್‌ ಅವರಿಗೆ ವಿದುಷಿಯೂ ಆಗಿರುವ ಜಯಲಕ್ಷ್ಮಿ ಅವರು ಸಹಕಾರ ನೀಡುತ್ತಾರೆ. ಯಾವುದೇ ಲಾಭದ ಉದ್ದೇಶ ಇಲ್ಲದೆ ನಡೆಯುತ್ತಿರುವ ಈ ಪತ್ರಿಕೆ ಈಗ ತನ್ನ ಅಸ್ವಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.

ಸ್ವಚ್ಛ ಕೆರೆಗೆ ಕೊಳಚೆ ನೀರು: ಕೊನೆಗೂ ಬಿತ್ತು ಬ್ರೇಕ್

ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ. ಇದೇ ಪ್ರಥಮ ಬಾರಿಗೆ ಜಂಟಿಯಾಗಿ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ತಿಳಿದಿದ್ದೇನೆ. ನಮ್ಮ ಸಣ್ಣ ಪತ್ರಿಕೆಯನ್ನು ಗುರುತಿಸಿ ಪದ್ಮಶ್ರೀಯಂಥ ದೊಡ್ಡ ಪ್ರಶಸ್ತಿ ಕೊಟ್ಟಿದ್ದು ಸಂತಸ. ಮಾಧ್ಯಮಗಳು ಹೇಳುವರೆಗೆ ಮಾಹಿತಿಯೇ ಇರಲಿಲ್ಲ ಎಂದು ಸುಧರ್ಮಾ ಪತ್ರಿಕೆಯ ಸಂಪಾದಕ ಸಂಪತ್‌ ಪಂಡಿತರು ತಿಳಿಸಿದ್ದಾರೆ.

click me!