'ಧರ್ಮದ ಆಧಾರದಲ್ಲಿ ಕಾಂಗ್ರೆಸ್‌ನಿಂದ ದೇಶ ಒಡೆಯುವ ಕೆಲಸ'

Kannadaprabha News   | Asianet News
Published : Jan 26, 2020, 09:53 AM IST
'ಧರ್ಮದ ಆಧಾರದಲ್ಲಿ ಕಾಂಗ್ರೆಸ್‌ನಿಂದ ದೇಶ ಒಡೆಯುವ ಕೆಲಸ'

ಸಾರಾಂಶ

ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಕೆಲಸ| ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಜಾಗೃತಿ ಸಭೆ| ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡೋಕೆ ಮುಸ್ಲಿಮರಲ್ಲಿ ತಪ್ಪು ಭಾವನೆ ಬಿತ್ತಿ ಕಾಂಗ್ರೆಸ್‌ನಿಂದ ಪ್ರತಿಭಟನೆ|

ಕೆ.ಆರ್‌.ಪುರ(ಜ.26): ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಪಿ.ಮುರಳಿದರ್‌ ರಾವ್‌ ಹೇಳಿದ್ದಾರೆ. 

ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್‌ ಇನ್ನರ್‌ ಸರ್ಕಲ್‌ನಲ್ಲಿ ಆಯೋಜಿಸಿದ್ದ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಜಾಗೃತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು, ಭಾರತದಲ್ಲಿ ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಕಾಂಗ್ರೆಸ್‌ನವರು ಮಹಾತ್ಮ ಗಾಂಧಿಜೀ ಬಿಟ್ಟು ಟಿಪ್ಪು ಸುಲ್ತಾನ್‌ ಫೋಟೋ ಹಿಡಿದುಕೊಂಡಿದ್ದರು. ಇದೀಗ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡೋಕೆ ಮುಸ್ಲಿಮರಲ್ಲಿ ತಪ್ಪು ಭಾವನೆ ಬಿತ್ತಿ ಪ್ರತಿಭಟನೆ ಮಾಡುಸುತ್ತಿದ್ದಾರೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಮಾತನಾಡಿದ ಅರವಿಂದ ಲಿಂಬಾವಳಿ, ಕರ್ನಾಟಕದಲ್ಲಿ 6.80 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಬೆಂಗಳೂರು ಸುತ್ತ ಒಂದೂವರೆ ಲಕ್ಷ ಜನ ಇದ್ದಾರೆ. ಮಹದೇವಪುರದಲ್ಲಿ 27 ಸಾವಿರ ಬಾಂಗ್ಲಾ ದೇಶದವರು ಅಕ್ರಮ ನೆಲೆಸಿದ್ದಾರೆ ಎಂದು ಹೇಳಿದರು.

ಸಂಸದರಾದ ಪಿ.ಸಿ.ಮೋಹನ್‌, ಎಸ್‌.ಮುನಿಸ್ವಾಮಿ, ಕ್ಷೇತ್ರ ಅಧ್ಯಕ್ಷ ಮನೋಹರ ರೆಡ್ಡಿ, ಪಾಲಿಕೆ ಸದಸ್ಯರಾದ ಆಶಾ ಸುರೇಶ್‌, ಶ್ವೇತಾ ವಿಜಯ್‌ ಕುಮಾರ್‌, ಮುಖಂಡರಾದ ಜಯಚಂದ್ರಾ ರೆಡ್ಡಿ, ನಟರಾಜ್‌ ಮತ್ತಿತರರು ಇದ್ದರು.
 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!