'CAA ವಿರೋಧಿ ಸಭೆ ಉದ್ಘಾಟನೆಗೆ ಪದ್ಮಶ್ರೀ ಪುರಸ್ಕೃತ'..!

Kannadaprabha News   | Asianet News
Published : Feb 19, 2020, 03:47 PM IST
'CAA ವಿರೋಧಿ ಸಭೆ ಉದ್ಘಾಟನೆಗೆ ಪದ್ಮಶ್ರೀ ಪುರಸ್ಕೃತ'..!

ಸಾರಾಂಶ

ಉಡುಪಿಯಲ್ಲಿ ನಡೆಯಲಿರುವ ಪೌರತ್ವ  ಕಾಯ್ದೆ ವಿರೋಧಿ ಸಭೆಯನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಂದ ಉದ್ಘಾಟಿಸಲು ನಿರ್ಧರಿಸಲಾಗಿದೆ. ಫೆಬ್ರವರಿ 20 ರಂದು ನಡೆಯಲಿರುವ ಸಭೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಜಬ್ಬ ಅವರ ಹೆಸರನ್ನು ನಮೂದಿಸಲಾಗಿದೆ.  

ಉಡುಪಿ(ಫೆ.19): ಉಡುಪಿಯಲ್ಲಿ ನಡೆಯಲಿರುವ ಪೌರತ್ವ  ಕಾಯ್ದೆ ವಿರೋಧಿ ಸಭೆಯನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಂದ ಉದ್ಘಾಟಿಸಲು ನಿರ್ಧರಿಸಲಾಗಿದೆ. ಫೆಬ್ರವರಿ 20 ರಂದು ನಡೆಯಲಿರುವ ಸಭೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಜಬ್ಬ ಅವರ ಹೆಸರನ್ನು ನಮೂದಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ‌ ಮುಜುಗರ ಉಂಟು ಮಾಡಲು ಪ್ರಯತ್ನ ನಡೆದಿದ್ದು, ಉಡುಪಿಯಲ್ಲಿ ಪೌರತ್ವ ಕಾಯ್ದೆ ವಿರೋಧಿ ಸಭೆ ನಿಗದಿಯಾಗಿದೆ. ಫೆಬ್ರವರಿ 20 ರಂದು ನಡೆಯಲಿರುವ ಸಭೆ ಕಾರ್ಯಕ್ರಮ ಉದ್ಘಾಟಿಸಲು ಪದ್ಮಶ್ರಿ ಹರೇಕಳ ಹಾಜಬ್ಬ ಅವರನ್ನು ಆಹ್ವಾನಿಸಲಾಗಿದೆ.

ಅಷ್ಟಕ್ಕೂ ಹುಬ್ಬಳ್ಳಿ ದೇಶದ್ರೋಹದ ಘೋಷಣೆ ಕೂಗು ಬಹಿರಂಗವಾಗಿದ್ದೇ ಈ ಗೇಮ್ ನಿಂದ!

ಆಮಂತ್ರಣ ಪತ್ರಿಕೆಯಲ್ಲಿ ಹಾಜಬ್ಬ ಹೆಸರು ಮುದ್ರಣವಾಗಿದ್ದು, ಕರ್ನಾಟಕ ಮುಸ್ಲಿಂ ಜಮಾತ್ ಹಾಜಬ್ಬ ಹೆಸರು ಮುದ್ರಿಸಿದೆ. ನಾಳೆ ಉಡುಪಿಯ ಲಿಗಾರ್ಡೋ ಹೊಟೇಲ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಜಾ ಭಾರತ ಎಂಬ ಹೆಸರಲ್ಲಿ ಸಭೆ ನಡೆಯಲಿದೆ.

ಕಾರ್ಯಕ್ರಮಕ್ಕೆ ಹಾಜಬ್ಬ ಅವರ ಆಹ್ವಾನಕ್ಕೆ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮ್ಮದ್ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರಚಾರಕ್ಕಾಗಿ ಹಾಜಬ್ಬರ ವ್ಯಕ್ತಿತ್ವವನ್ನು ಬಲಿ ಕೊಡುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮ್ಮದ್ ಅಭಿಪ್ರಾಯಿಸಿದ್ದಾರೆ.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ