ಗರ್ಲ್‌ಫ್ರೆಂಡ್ ಬೈದಿದ್ದಕ್ಕೆ ಆಕೆಯ ದುಪಟ್ಟಾ ಆತ್ಮಹತ್ಯೆ ಮಾಡ್ಕೊಂಡ

Kannadaprabha News   | Asianet News
Published : Feb 19, 2020, 03:20 PM ISTUpdated : Feb 19, 2020, 03:28 PM IST
ಗರ್ಲ್‌ಫ್ರೆಂಡ್ ಬೈದಿದ್ದಕ್ಕೆ ಆಕೆಯ ದುಪಟ್ಟಾ ಆತ್ಮಹತ್ಯೆ ಮಾಡ್ಕೊಂಡ

ಸಾರಾಂಶ

ಗರ್ಲ್‌ಫ್ರೆಂಡ್ ಬೈದಿದ್ದಕ್ಕೇ ಯುವಕ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮದ್ಯ ಸೇವನೆ ವಿಚಾರವಾಗಿ ಜಗಳವಾಗಿ ಕೊನೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  

ಮಡಿಕೇರಿ(ಫೆ.19): ತಾನು ಪ್ರೀತಿಸುತ್ತಿದ್ದ ಯುವತಿ ಮಾತಿನ ನಡುವೆ ನಿಂದಿಸಿದಳೆಂದು ಮನನೊಂದ ಯುವಕನೊಬ್ಬ ಆಕೆಯದ್ದೇ ವೇಲ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕಿನ ಹುದಿಕೇರಿ ನಿವಾಸಿ ಸಂಜು (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕುಶಾಲನಗರ ಸಮೀಪದ ಕೂಡುಮಂಗಳೂರಿನ ಬರ್ಡ್‌ ಆಫ್‌ ಪ್ಯಾರಡೈಸ್‌ ಹೋಂಸ್ಟೇಯಲ್ಲಿ ಸುಮಾರು ಐದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಯುವತಿಯೊಬ್ಬಳನ್ನು ಪ್ರೀತಿಸುತಿದ್ದ.

ಸಿಗ್ನಲ್ ಜಂಪ್ ಪ್ರಯತ್ನ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಇಬ್ಬರ ನಡುವೆ ಮೊಬೈಲ್‌ನಲ್ಲಿ ಸಂಭಾಷಣೆ ನಡೆಯುತ್ತಿದ್ದಾಗ ಮಾತಿನ ನಡುವೆ ನೀನು ಮದ್ಯ ಸೇವಿಸಿರುವೆ ಎಂದು ಆಕೆ ಸಂಜು ಜೊತೆ ವಾಗ್ವಾದ ನಡೆಸಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಸಂಜು ಆಕೆಯ ವೇಲ್‌ ತೆಗೆದುಕೊಂಡು ಬಂದು ಹೋಂಸ್ಟೇಯ ಕಾಫಿ ತೋಟದ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

ಗರ್ಭಿಣಿಯರಿದ್ದ ರಿಕ್ಷಾ ಭೀಕರ ಅಪಘಾತ: ಒಬ್ಬ ಗರ್ಭಿಣಿ ಸಾವು

ಮೃತದೇಹವನ್ನು ಕಂಡ ಹೋಂಸ್ಟೇ ವ್ಯವಸ್ಥಾಪಕರು ಆತನ ಮನೆಯವರಿಗೆ ಮತ್ತು ಕುಶಾಲನಗರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ನಂದೀಶ್‌ ಮತ್ತು ಸಿಬ್ಬಂದಿ ಶವವನ್ನು ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು