ಬೆಂಗಳೂರು: ಬೈಕ್‌ ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್, ಮತ್ತೊಬ್ಬರ ಬಾಳಿಗೆ ಬೆಳಕಾದ ರೋಹಿತ್‌..!

By Girish GoudarFirst Published Jun 1, 2023, 10:33 AM IST
Highlights

ಸಾವಿನಲ್ಲೂ ಸಾರ್ಥಕತೆ ಮೆರೆದಿದ ಯುವಕನ ಕುಟುಂಬಸ್ಥರು. ಮೃತ  ರೋಹಿತ್‌ನ ಅಂಗಾಂಗಗಳನ್ನ ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದಾರೆ. 2 ಕಣ್ಣು,  2 ಕಿಡ್ನಿ, ಲಿವರ್, ಲಂಗ್ಸ್,  ಹೃದಯ ಅಂಗಾಂಗಗಳನ್ನ ದಾನ ಮಾಡಿದ ಪೋಷಕರು. 
 

ಬೆಂಗಳೂರು(ಜೂ.01): ಅಪಘಾತದಲ್ಲಿ ಗಾಯಗೊಂಡು ಒಂದು ವಾರ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದ ಯುವಕನ ಮೆದುಳು ಇಂದು(ಗುರುವಾರ) ನಿಷ್ಕ್ರೀಯಗೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಬ್ರೈನ್ ಡೆಡ್ ಆಗಿದೆ ಅಂತ ವೈದ್ಯರು ಘೋಷಿಸಿದ್ದಾರೆ. ರೋಹಿತ್ (26) ಎಂಬಾತನ ಬ್ರೈನ್ ಡೆಡ್ ಆಗಿದೆ. 

ಆದರೆ, ಯುವಕನ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹೌದು, ಮೃತ  ರೋಹಿತ್‌ನ ಅಂಗಾಂಗಗಳನ್ನ ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದಾರೆ. 2 ಕಣ್ಣು,  2 ಕಿಡ್ನಿ, ಲಿವರ್, ಲಂಗ್ಸ್,  ಹೃದಯ ಅಂಗಾಂಗಗಳನ್ನ ದಾನ ಮಾಡಿದ್ದಾರೆ ಪೋಷಕರು. 

Udupi: ರಸ್ತೆ ಅಪಘಾತಗೊಂಡು, ಮೆದುಳು ನಿಷ್ಕ್ರೀಯ ಬಳಿಕ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

ಕಳೆದ ಭಾನುವಾರ (ಮೇ.21) ರಂದು ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿತ್ತು. ರಾಜಾಜಿನಗರ ಕ್ಷೇತ್ರದ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ಘಟನೆ ನಡೆದಿತ್ತು. 

ಅಪಘಾತದ ಗಾಯಗೊಂಡಿದ್ದ ರೋಹಿತ್‌ನನ್ನ ವಿಜಯನಗರ ಆಸ್ಪತ್ರೆಗೆ ದಾಖಲಿಸಿ ಕಳೆದ 8 ದಿನಗಳ ನಿರಂತರ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ವಿಜಯನಗರ ಆಸ್ಪತ್ರೆಯಿಂದ ಟ್ರಸ್ಟ್ ವೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ರೋಹಿತ್‌ನ ಬ್ರೈನ್ ಡೆಡ್ ಆಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ವಿಜಯನಗರ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಮೃತ ಯುವಕನ ಪೋಷಕರು ಆರೋಪಿಸಿದ್ದಾರೆ. 

click me!