ಚುನಾವಣೆ ಹೊತ್ತಲ್ಲಿ ಅಂಗನವಾಡಿ ಸಿಬ್ಬಂದಿಗೆ ಸೀರೆ ಪೂರೈಸುತ್ತಿರುವ ಸಂಘಟನೆಗಳು!

By Kannadaprabha NewsFirst Published Dec 10, 2022, 12:52 PM IST
Highlights
  • ಅಂಗನವಾಡಿ ಸಿಬ್ಬಂದಿಗೆ ಸೀರೆ ಪೂರೈಸುತ್ತಿರುವ ಸಂಘಟನೆಗಳು!
  • ಭ್ರಷ್ಟಾಚಾರ ತಡೆಯಲು ನೇರ ಹಣ ಜಮಾ ಮಾಡಿದ ಸರ್ಕಾರ
  • ಆದರೂ ಸಂಘಟನೆಗಳು ವಿತರಿಸುತ್ತಿರುವುದು ಯಾಕೆ?

ಸೋಮರಡ್ಡಿ ಅಳವಂಡಿ

ಕೊಪ್ಪಳ (ಡಿ.10) : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಖಾತೆಗೆ ನೇರವಾಗಿ ಸೀರೆ ಕೊಳ್ಳಲು .800 ಜಮೆಗೊಳಿಸಲು ಆದೇಶಿಸಿ, ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ಇದೀಗ ಈ ಸೀರೆಗಳನ್ನು ವಿವಿಧ ಸಂಘಟನೆಗಳು ಪೂರೈಕೆ ಮಾಡುತ್ತಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.

Latest Videos

ಸರ್ಕಾರವೇ ಖರೀದಿಯಿಂದ ಹಿಂದೆ ಸರಿದಿದ್ದರೆ ಇದೀಗ ಈ ಖರೀದಿ ಪ್ರಕ್ರಿಯೆಯನ್ನು ವಿವಿಧ ಸಂಘಟನೆಗಳು ಮಾಡುತ್ತಿದ್ದು, ಅನೇಕ ಅನುಮಾನಗಳಿಗೆ ರೆಕ್ಕೆಪುಕ್ಕ ಬಂದಿದೆ. ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿ ಸುಮಾರು 1,25,000 ಇದ್ದು, ಪ್ರತಿಯೊಬ್ಬರಿಗೆ ಒಂದು ಸೀರೆ ಕೊಳ್ಳಲು ತಲಾ .800ರಂತೆ ಒಟ್ಟು .10 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

Koppal: ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಭೇಟಿ: ವಿಶೇಷ ಪೂಜೆ

ಭ್ರಷ್ಟಾಚಾರದ ವಾಸನೆ:

ರಾಜ್ಯ ಸರ್ಕಾರವೇ ಖರೀದಿಯಿಂದ ಹಿಂದೆ ಸರಿದಿರುವಾಗ ವಿವಿಧ ಸಂಘಟನೆಗಳು ಖರೀದಿಸಿ ಪೂರೈಕೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಣವನ್ನು ಡ್ರಾ ಮಾಡಿಕೊಂಡು ಮರಳಿ ಸಂಘಟನೆಗಳಿಗೆ ಕಳೆದೆರಡು ತಿಂಗಳ ಹಿಂದೆಯೇ ನೀಡಿವೆಯಾದರೂ ಇದುವರೆಗೂ ಬಹುತೇಕ ಕಡೆ ವಿತರಣೆಯೇ ಆಗಿಲ್ಲ.

ಇದನ್ನು ಕೆಲವು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿರೋಧ ಮಾಡಿದ್ದು, ತಾವೇ ಖರೀದಿ ಮಾಡಿದ್ದಾರೆ. ಆದರೆ, ಬಹುತೇಕರು ತಮ್ಮ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಸಂಘಟನೆಗಳ ಕೈಗೆ ನೀಡಿದ್ದಾರೆ. ಈಗ ಅವರು ಖರೀದಿ ಮಾಡಿ, ಪೂರೈಕೆ ಮಾಡುತ್ತಿದ್ದಾರೆ. ಇನ್ನು ಹಂಚಿಕೆ ಪ್ರಕ್ರಿಯೆ ಪೂರ್ಣ ಮುಗಿದಿಲ್ಲ.

ಹೀಗೆ ಸಂಘಟನೆಗಳು ಖರೀದಿ ಮಾಡಿ, ಪೂರೈಕೆ ಮಾಡುವಲ್ಲಿ ಭ್ರಷ್ಟಾಚಾರದ ವಾಸನೆ ಬಡಿದಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸರ್ಕಾರವೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಾವೇ ಖರೀದಿ ಮಾಡಲಿ ಎಂದು ತೀರ್ಮಾನಿಸಿದ್ದರೂ ಸಂಘಟನೆಗಳು ಯಾಕೆ ಖರೀದಿಯಲ್ಲಿ ಭಾಗಿಯಾಗುತ್ತಿವೆ ಎನ್ನುವುದು ಈಗ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಹೀಗೆ ಖರೀದಿಸಿ ಪೂರೈಕೆ ಮಾಡಿರುವ ಸೀರೆಗಳು ನಿಗದಿ ಮಾಡಿರುವ .800 ಮೌಲ್ಯದಷ್ಟುಇಲ್ಲ ಎನ್ನಲಾಗುತ್ತಿದೆ. .400​-600ಕ್ಕೆ ಬಾಳುವ ಸೀರೆ ಪೂರೈಕೆ ಮಾಡಲಾಗಿದ್ದು, ಇದನ್ನು ತನಿಖೆಗೆ ಒಳಪಡಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಅಧಿಕಾರಿಗಳು ನಿಗಾ ವಹಿಸಬೇಕಿತ್ತು...

ಸರ್ಕಾರ ನೇರವಾಗಿ ಅವರ ಖಾತೆಗೆ ಜಮೆ ಮಾಡಿರುವ ಹಣದಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೀರೆಗಳನ್ನು ಖರೀದಿ ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ನಿಗಾ ವಹಿಸಬೇಕಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ.

ರೆಡ್ಡಿ ಹೊಸ ಪಕ್ಷ ಕಟ್ತಾರಾ, ಬಿಜೆಪಿಯಿಂದಲೇ ಸ್ಪರ್ಧಿಸ್ತಾರಾ?

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ಖರೀದಿ ಮಾಡಲು ನೇರವಾಗಿ ಅವರ ಖಾತೆಗೆ ಹಣವನ್ನು ಜಮೆ ಮಾಡಲಾಗಿದೆ. ಅವರೇ ಖರೀದಿ ಮಾಡಿಕೊಳ್ಳಬೇಕಾಗಿದೆ. ಆದರೆ, ಸಂಘಟನೆಗಳ ಮೂಲಕ ಖರೀದಿ ಮಾಡುತ್ತಿರುವ ಮಾಹಿತಿ ಇದ್ದು, ಸರಿಯಾಗಿ ಗೊತ್ತಿಲ್ಲ.

ಪದ್ಮಾವತಿ, ಡಿಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಖರೀದಿಯಲ್ಲಿ ಆಗುತ್ತಿದ್ದ ಭ್ರಷ್ಟಾಚಾರವನ್ನು ತಡೆಯುವುದಕ್ಕಾಗಿಯೇ ನೇರವಾಗಿ ಅವರ ಖಾತೆಗೆ ಹಣವನ್ನು ಜಮೆ ಮಾಡಲಾಗಿದೆ. ಅದನ್ನು ಅವರೇ ಖರೀದಿ ಮಾಡಿಕೊಳ್ಳುವುದು ಅವರ ಜವಾಬ್ದಾರಿ. ಆದರೆ ಅವರು ಹೇಗೆ ಖರೀದಿ ಮಾಡಿದ್ದಾರೋ ಎನ್ನುವುದು ನಮಗೆ ಗೊತ್ತಿಲ್ಲ.

ಹಾಲಪ್ಪ ಆಚಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು

click me!