Dharwad: ಗೋಲ್ಡ್ ಕ್ರೌನ್ ಸಬಲೈಮ್ ಬಿಲ್ಡರ್ಸ್‌ಗೆ ದಂಡ ಮತ್ತು ಪರಿಹಾರದ ಆದೇಶ

By Govindaraj S  |  First Published Aug 4, 2023, 6:49 PM IST

ಧಾರವಾಡದ ಟೋಲ್ ನಾಕಾದ ವಾಸಿ ಹೆರಾಲ್ಡ್ ಜೋಷೆಫ್ ಎಂಬುವವರು ಇಮ್ರಾನ್ ಕಳ್ಳಿಮನಿ ಎಂಬುವವರ ಜಾಹೀರಾತಿನ ಮೇರೆಗೆ ಕೆಲಗೇರಿಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಫಾರ್ಮ್ ಹೌಸ್‍ನ್ನು ರೂ.40 ಲಕ್ಷ ರೂಪಾಯಿಗೆ 2021ರಂದು ಖರೀದಿಸಿದ್ದರು.


ವರದಿ: ಪರಮೇಶ್ ಅಂಗಡಿ‌, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಆ.04): ಧಾರವಾಡದ ಟೋಲ್ ನಾಕಾದ ವಾಸಿ ಹೆರಾಲ್ಡ್ ಜೋಷೆಫ್ ಎಂಬುವವರು ಇಮ್ರಾನ್ ಕಳ್ಳಿಮನಿ ಎಂಬುವವರ ಜಾಹೀರಾತಿನ ಮೇರೆಗೆ ಕೆಲಗೇರಿಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಫಾರ್ಮ್ ಹೌಸ್‍ನ್ನು ರೂ.40 ಲಕ್ಷ ರೂಪಾಯಿಗೆ 2021ರಂದು ಖರೀದಿಸಿದ್ದರು. ಈ ಬಗ್ಗೆ ಉಭಯತರ ಮಧ್ಯೆ ಖರೀದಿ ಕರಾರು ಪತ್ರ ಆಗಿತ್ತು. ದೂರುದಾರರು ರೂ.35 ಲಕ್ಷ ಮುಂಗಡ ಹಣವನ್ನು ಪಾವತಿಸಿದ್ದರು.

Tap to resize

Latest Videos

ಎದುರುದಾರ ಬಿಲ್ಡರ್‌ ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ ಫಾರ್ಮ ಹೌಸ್ ಖರೀದಿಗೆ ಕೊಡಲಿಲ್ಲ ಅಂತಹವರ ನಡಾವಳಿಯಿಂದ ತನಗೆ ಮೋಸವಾಗಿದೆ ಮತ್ತು ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತ ಹೇಳಿ ಬಿಲ್ಡರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಶಕ್ತಿ ಯೋಜನೆ ಎಫೆಕ್ಟ್: ಚಿಕ್ಕಮಗಳೂರಿನಲ್ಲಿ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತ!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ  ಸದಸ್ಯರುಗಳಾದ ವಿಶಾಲಾಕ್ಷಿ.ಅ ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ದೂರುದಾರನಿಂದ ರೂ.35 ಲಕ್ಷ ಹಣ ಪಡೆದುಕೊಂಡು ಎದುರುದಾರ ಲೇಔಟ್ ಅಭಿವೃದ್ಧಿಪಡಿಸಿ ಅವರಿಗೆ ಫಾರ್ಮ ಹೌಸ್ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. 

Mysuru: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 135 ಮೊಬೈಲ್‌ಗಳ ಹಸ್ತಾಂತರ!

ದೂರುದಾರರು ಸಂದಾಯ ಮಾಡಿದ ರೂ.35 ಲಕ್ಷ ಮತ್ತು ಅದರ ಮೇಲೆ ದಿನಾಂಕ 25/01/2021 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಎದುರುದಾರನಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶ ಮಾಡಿದೆ.

click me!