ಕರಾವಳಿಯಲ್ಲಿ ಕಳೆದ 4 ದಿನಗಳ ಬಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ನೀಡಿದ್ದರೂ ಅಂತಹ ಮಳೆಯೇನೂ ಆಗಿಲ್ಲ. ಇದೀಗ ಮತ್ತೇ ಕೇಂದ್ರ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಗಳು ಜಿಲ್ಲೆಯಲ್ಲಿ ಇಂದಿನಿಂದ (ಶನಿವಾರ) 3 ದಿನಗಳ ಕಾಲ ಭಾರೀ ಮಳೆಯಾಗುವ ಬಗ್ಗೆ ಕಿತ್ತಲೆ ಎಚ್ಚರಿಕೆ (ಆರೆಂಜ್ ಅಲರ್ಟ್) ನೀಡಿದೆ.
ಉಡುಪಿ(ಜೂ.27): ಜಿಲ್ಲೆಯಲ್ಲಿ ಶುಕ್ರವಾರ ಮಳೆ - ಬಿಸಿಲಿನ ಕಣ್ಣುಮುಚ್ಚಾಲೆ ನಡೆಯುತು. ಬೆಳಿಗ್ಗೆ ದಟ್ಟಮೋಡ ಕವಿದಿದ್ದರೂ ದಿನವಿಡೀ ಮಳೆಯಾಗಿಲ್ಲ. ಮಧ್ಯಾಹ್ನದ ನಂತರ ಬಿರುಬಿಸಿಲು ಕಾಯುತ್ತಿತ್ತು. ರಾತ್ರಿಯಾಗುತ್ತಿದ್ದಂತೆ ಸಾಧಾರಣ ಮಳೆಯಾಗಿದೆ.
ಗುರುವಾರ ರಾತ್ರಿಯೂ ಮಳೆ ಇರಲಿಲ್ಲ. ಶುಕ್ರವಾರ ಮುಂಜಾನೆವರೆಗೆ ಜಿಲ್ಲೆಯಾದ್ಯಂತ ಸರಾಸರಿ 10.20 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 4.00 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 17.60 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 4.70 ಮಿ.ಮೀ. ಮಳೆ ಆಗಿದೆ.
undefined
ದೇಶದಲ್ಲಿ 5,00,000 ಕೇಸ್: ಐದೇ ದಿನದಲ್ಲಿ 4ರಿಂದ 5 ಲಕ್ಷಕ್ಕೇರಿದ ಸೋಂಕಿತರು!
ಮತ್ತೆ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಕಳೆದ 4 ದಿನಗಳ ಬಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ನೀಡಿದ್ದರೂ ಅಂತಹ ಮಳೆಯೇನೂ ಆಗಿಲ್ಲ. ಇದೀಗ ಮತ್ತೇ ಕೇಂದ್ರ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಗಳು ಜಿಲ್ಲೆಯಲ್ಲಿ ಇಂದಿನಿಂದ (ಶನಿವಾರ) 3 ದಿನಗಳ ಕಾಲ ಭಾರೀ ಮಳೆಯಾಗುವ ಬಗ್ಗೆ ಕಿತ್ತಲೆ ಎಚ್ಚರಿಕೆ (ಆರೆಂಜ್ ಅಲರ್ಟ್) ನೀಡಿದೆ. ಅದರಂತೆ ಕರಾವಳಿಯಲ್ಲಿ 115 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.
ಆದ್ದರಿಂದ ಜಿಲ್ಲಾ - ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಟ್ಟು ಹೋಗಬಾರದು, ನದಿ - ಸಮುದ್ರ ಬದಿಯ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಮಾ ಪ್ರಾಧಿಕಾರ ತಿಳಿಸಿದೆ.