ಚಿತ್ರದುರ್ಗ (ಡಿ.21) : ಬಸವಕೇಂದ್ರ ಮುರುಘಾಮಠಕ್ಕೆ ಆಡಳಿತಾಧಿಕಾರಿಗಳ ನೇಮಕ ಮಾಡಿದ ರಾಜ್ಯ ಸರ್ಕಾರದ ಕ್ರಮಕ್ಕೆ ವಿವಿಧ ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮುರುಘಾ ಮಠದ ಶಿರಸಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನಡೆ ಖಂಡಿಸಲಾಯಿತು.
ಸಭೆಯ ಸಮ್ಮುಖ ವಹಿಸಿ ಮಾತನಾಡಿದ ಬಸವಪ್ರಭು ಸ್ವಾಮೀಜಿ, ರಾಜ್ಯ ಸರ್ಕಾರ ಮಠಗಳನ್ನು ನಿಯಂತ್ರಿಸಲು ಆಡಳಿತಾಧಿಕಾರಿ ನೇಮಕ ಮಾಡಿದ್ದು, ಇದು ಮಠಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗಿದೆ. ಸಂಸ್ಥೆಯಲ್ಲಿ ನೌಕರರ ಸಮಸ್ಯೆಗಳಿದ್ದಾಗ ಮಾತ್ರ ಆಡಳಿತಾಧಿಕಾರಿ ನೇಮಕದ ಅವಕಾಶವಿರುತ್ತದೆ. ಆದರೆ ಇಲ್ಲಿ ಯಾವ ನೌಕರರು ಸಹ ಸಂಬಳವಾಗಿಲ್ಲ ಎಂಬ ಸಮಸ್ಯೆ ತಂದು ಬೀದಿಗೆ ಬಂದಿಲ್ಲ. ಮಠದಲ್ಲಿ ಎಂದಿನಂತೆ ಪ್ರತಿದಿನ ಬಂದ ಭಕ್ತಾದಿಗಳಿಗೆ ಅನ್ನದಾಸೋಹ, ಮಠದ ಅಭಿವೃದ್ಧಿ ಕಾರ್ಯಗಳು, ಬಸವಪುತ್ಥಳಿ ಮತ್ತು ಇತರೆ ಕಟ್ಟಡ ನಿರ್ಮಾಣ ಕಾಯ ರ್‍ಗಳು ಎಂದಿನಂತೆ ಪ್ರಗತಿಯಲ್ಲಿವೆ ಎಂದರು.
undefined
Murugha Mutt Administrator : ಮುರುಘಾ ಮಠ ರಕ್ಷಿಸಲೆಂದೇ ಆಡಳಿತಾಧಿಕಾರಿ: ಸರ್ಕಾರ
ಆಡಳಿತಾಧಿಕಾರಿ ನೇಮಕ ಸರಿಯಲ್ಲ:
ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಮುರುಘಾ ಶರಣರು ಜಿಪಿಎ ನೀಡಿದ್ದಾರೆ. ಜಿಪಿಎ ಹೊಂದಿರುವ ಕಾರ‍್ಯದರ್ಶಿ ಮತ್ತು ಸ್ವಾಮಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೂ ಸಹ ರಾಜ್ಯಸರ್ಕಾರ ಏಕಾಏಕಿ ಕೆಲವರ ಒತ್ತಡಕ್ಕೊಳಗಾಗಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದರು. ಆಡಳಿತಾಧಿಕಾರಿ ನೇಮಕ ಕ್ರಮವು ಮಠವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಲಿಂಗಾಯತ ಸಮಾಜಕ್ಕೆ ಇಲ್ಲವೆಂಬ ತಪ್ಪು ಸಂದೇಶ ರವಾನೆಯಾದಂತಾಗಿದೆ ಎಂದರು.
ಐದಾರು ವರ್ಷಗಳ ಹಿಂದೆ ರಾಮಚಂದ್ರಪುರ ಮಠದ ಪ್ರಕರಣದಲ್ಲಿ ಪರ-ವಿರೋಧದ ಎರಡು ಗುಂಪುಗಳಿದ್ದಾಗ ಅಂದು ರಾಜ್ಯಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಲಿಲ್ಲ. ಆದರೆ ಈಗ ಆಡಳಿತಾಧಿಕಾರಿ ನೇಮಿಸಿರುವುದು ದುರದೃಷ್ಟಕರ. ಕೂಡಲೇ ಸರ್ಕಾರ ಈ ದ್ವಂದ್ವ ನೀತಿಯನ್ನು ಕೈಬಿಡಬೇಕು ಮತ್ತು ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಮಠದ ಇಂದಿನ ಪರಿಸ್ಥಿತಿಗೆ ಹಿತಶತ್ರುಗಳೇ ಕಾರಣರಾಗಿದ್ದಾರೆ ಎಂದರು.
ಗೋಕಾಕ್‌ನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ನಾಡಿನ ಮಠಾಧಿಪತಿಗಳೆಲ್ಲರು ಒಂದಾಗಿ ಮಠ-ಮಾನ್ಯಗಳ ಉಳವಿಗಾಗಿ ಹೋರಾಡುವ ಕಾಲ ಬಂದಿದೆ. ಮುರುಘಾ ಮಠದ ಉಳವಿಗಾಗಿ ಪ್ರಾಣ ಕೊಡಲು ನಾವು ಸಿದ್ಧರಿದ್ದೇವೆ. ಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನ ಧರಣಿಯನ್ನು ಸಾಂಕೇತಿಕವಾಗಿ ಮಾಡೋಣ. ಎಲ್ಲಾ ಮಠಾಧಿಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಹೇಳಿದರು.
ಇಳಕಲ್‌ನ ಗುರುಮಹಾಂತ ಸ್ವಾಮಿಗಳು ಮಾತನಾಡಿ, ಮುರುಘಾ ಮಠಕ್ಕೆ ಕರ್ನಾಟಕದಲ್ಲಿ ತನ್ನದೇ ಆದ ಭವ್ಯ ಪರಂಪರೆ, ಇತಿಹಾಸವಿದೆ. ಕೆಲವರ ಪಿತೂರಿಯಿಂದ ಪೂಜ್ಯರಿಗೆ ಗ್ರಹಣದ ಕಾಲ ಬಂದಿದ್ದು, ಕೆಲವೇ ದಿನಗಳಲ್ಲಿ ನಿವಾರಣೆಯಾಗಲಿದೆ. ಅದಕ್ಕೆ ಕರ್ತೃಮುರುNೕಶನ ಕೃಪೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಡೂರು ಪ್ರಭುಸ್ವಾಮಿಗಳು ಮಾತನಾಡಿ, ಯಾರು ವೈಚಾರಿಕವಾಗಿ ಕೆಲಸ ಮಾಡುತ್ತಾರೋ ಅಂಥವರಿಗೆ ಈ ಸಮಾಜ ಹಲ್ಲೆ, ಪಿತೂರಿ ಮಾಡುತ್ತ ಬಂದಿದೆ. ಅದಕ್ಕೆ ಸಾಕ್ಷಿಯಾಗಿ ಎಂ.ಎಂ. ಕಲಬುರ್ಗಿ ಹತ್ಯೆ, ಈಗ ಮುರುಘಾ ಶರಣರಿಗೆ ಸಂಕಷ್ಟಬಂದೊದಗಿದೆ. ಬಸವತತ್ವ, ವೈಚಾರಿಕತೆ ಮತ್ತು ಸಮಾನತೆ ಪರವಾಗಿ ಇರುವವರಿಗೆ ತೊಂದರೆ ತಪ್ಪಿದ್ದಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದರು.
ಅಥಣಿಯ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮಿಗಳು, ಹುಲಸೂರಿನ ಶಿವಾನಂದ ಸ್ವಾಮಿಗಳು, ಶಿಗ್ಗಾವಿಯ ಸಂಗನಬಸವ ಸ್ವಾಮಿಗಳು, ಸತ್ತಿಯ ಬಸವಲಿಂಗ ಸ್ವಾಮಿಗಳು, ಹಾವೇರಿಯ ಬಸವಶಾಂತಲಿಂಗ ಸ್ವಾಮಿಗಳು, ತಂಗಡಗಿಯ ಬಸವಪ್ರಿಯ ಅಪ್ಪಣ್ಣ ಸ್ವಾಮಿಗಳು, ಬಸವ ಹರಳಯ್ಯ ಸ್ವಾಮಿಗಳು, ಕುಂಬಾರ ಗುಂಡಯ್ಯ ಸ್ವಾಮಿಗಳು, ಶಿರಸಿಯ ಮಲ್ಲಿಕಾರ್ಜುನ ಸ್ವಾಮಿಗಳು, ಬೆಂಗಳೂರಿನ ಬಸವ ರಮಾನಂದ ಸ್ವಾಮಿಗಳು, ತುಮಕೂರಿನ ಮಹಾಲಿಂಗ ಸ್ವಾಮಿಗಳು, ಕಲಬುರ್ಗಿಯ ಸಿದ್ಧಬಸವ ಕಬೀರ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು ಜನವಾಡ, ಬಸವಭೂಷಣ ಸ್ವಾಮಿಗಳು ಸಿರಗುಪ್ಪ, ಬಸವಲಿಂಗಮೂರ್ತಿ ಸ್ವಾಮಿಗಳು ಮೈಸೂರು, ತಿಪ್ಪೇರುದ್ರಸ್ವಾಮಿಗಳು ತುಮಕೂರು, ಮನಗೂಳಿಯ ವೀರೇಶಾನಂದ ಸ್ವಾಮಿಗಳು, ಉಪ್ಪುಣಸಿಯ ಜಯಬಸವ ಸ್ವಾಮಿಗಳು, ಐರಣಿಯ ಗಜದಂಡ ಸ್ವಾಮಿಗಳು, ಮಾತೆ ಮುಕ್ತಾಯಕ್ಕ, ಮಾತೆ ಅಕ್ಕನಾಗಮ್ಮ, ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಸೋಮವಾರಪೇಟೆಯ ಮಲ್ಲಿಕಾರ್ಜುನ ಸ್ವಾಮಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಠಾಧೀಶರುಗಳು ಸಭೆಯಲ್ಲಿ ಭಾಗವಹಿಸಿದ್ದರು.
Murugha Shree Case: ಮುರುಘಾ ಶ್ರೀ ವಿರುದ್ದ ಸುಳ್ಳು ಕೇಸ್ ದಾಖಲಿಸಲು ಪಿತೂರಿ
ರಾಜ್ಯಸರ್ಕಾರ ಶೀಘ್ರವೇ ಆಡಳಿತಾಧಿಕಾರಿಯನ್ನು ರದ್ದು ಮಾಡಬೇಕು. ಆಡಳಿತಾಧಿಕಾರಿ ನೇಮಕ ಖಂಡಿಸಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಛೇರಿ ಎದುರು ಡಿಸೆಂಂಬರ್ 26 ರಂದು ಒಂದು ದಿನದ ಸಾಂಕೇತಿಕ ಧರಣಿ ಮಾಡುವುದು, ಆಡಳಿತಾಧಿಕಾರಿ ನೇಮಕ ಆದೇಶ ವಾಪಾಸು ಪಡೆಯದೇ ಇದ್ದಲ್ಲಿ ನಾಡಿನ ಎಲ್ಲಾ ಮಠಾಧಿಪತಿಗಳು ಒಂದಾಗಿ ಹೋರಾಟ ಮಾಡುವ ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು.