ಜೆಡಿಎಸ್ ಪಕ್ಷದ ಹೆಸರಿನಲ್ಲಿ ಕಟಿಂಗ್ ಶಾಪ್ ಓಪನ್: ಅಭಿಮಾನಿಯಿಂದ ವಿನೂತನ ಕಾರ್ಯಕ್ರಮ

By Govindaraj S  |  First Published Jul 29, 2022, 12:25 AM IST

2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಅಭಿಮಾನಿಯಿಂದ ವಿನೂತನ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ. 


ಕೋಲಾರ (ಜು.29): 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಅಭಿಮಾನಿಯಿಂದ ವಿನೂತನ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ. 

ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದ ಸವಿತಾ ಸಮಾಜದ ರಾಜೇಶ್ ಎಂಬುವರಿಗೆ ಹೇರ್ ಕಟ್ ಅಂಗಡಿಯ ವ್ಯವಸ್ಥೆಯನ್ನು ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಅಭಿಮಾನಿ ಹಾಗೂ ಸವಿತಾ ಸಮಾಜದ ರಾಜೇಶ್ ಅವರು ಅಂಗಡಿಯಲ್ಲಿ ಜೆಡಿಎಸ್ ರಾಷ್ಟ್ರೀಯ ವರಿಷ್ಠರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಹಾಗೂ ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಅವರ ಭಾವಚಿತ್ರವನ್ನು ಅಂಗಡಿಯ ಗೋಡೆ ಮೇಲೆ ಬರೆಸುವ ಮೂಲಕ ಪಕ್ಷದ ಮೇಲಿರುವ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾಗ ರಾಜ್ಯದ ಜನತೆಯ ಪರವಾಗಿ ಯಾವ ರೀತಿ ಆಡಳಿತ ನಡೆಸಿದ್ರು ಹಾಗೂ ಅವರ ಅವಧಿಯಲ್ಲಿ ಬಂದಿರುವ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ರಾಜೇಶ್ ತೊಡಗಿದ್ದಾರೆ.

Tap to resize

Latest Videos

Kolar: ಉಪಯೋಗಕ್ಕೆ ಬಾರದೇ ಹಾಳಾಗ್ತಿದೆ ಸ್ವಚ್ಛ ಭಾರತ ಯೋಜನೆ!

ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪನೆಗೆ ಒಪ್ಪಿಗೆ: ಕೋಲಾರ- ಚ್ಕಿಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯ ಬೆನ್ನಹಿಂದೆಯೇ ಕೋಲಾರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 185 ಕೋಟಿ ವೆಚ್ಚದ ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ. ಕೋಲಾರದಲ್ಲಿರುವ ಡೇರಿಯ ಸಾಮರ್ಥ್ಯ ಕಡಿಮೆ ಇದೆ. 1 ಲಕ್ಷ ಲೀಟರ್‌ ಹಾಲಿನ ಸಾಮರ್ಥ್ಯದ ಡೇರಿಯಲ್ಲಿ 10-11 ಲಕ್ಷ ಲೀಟರ್‌ ಹಾಲನ್ನು ಪ್ರತಿ ದಿನ ಹಾಲು ಪ್ಯಾಕಿಂಗ್‌ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದರ ಸಾಮರ್ಥ್ಯವನ್ನು ಹೆಚ್ಚು ಮಾಡುವ ಉದ್ದೇಶದಿಂದ ಹೊಸದಾಗಿ ಕೋಲಾರಕ್ಕೆ ಎಂವಿ ಕೃಷ್ಣಪ್ಪನವರ ಹೆಸರಿನಲ್ಲಿ ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪನೆ ಮಾಡಲು ಇಲ್ಲಿನ ಆಡಳಿತ ಮಂಡಳಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಶಿಪಾರಸು ಮಾಡಲಾಗಿತ್ತು. ಇದಕ್ಕೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅನುಮೋದನೆಯನ್ನೂ ನೀಡಿದ್ದರು.

ಕೋಚಿಮುಲ್‌ ವಿಭಜನೆ: ಸಮ್ಮಿಶ್ರ ಸರ್ಕಾರ ಬದಲಾವಣೆಯ ನಂತರ ಎರಡೂ ಜಿಲ್ಲೆಗಳ ರಾಜಕೀಯ ವಿದ್ಯಾಮಾನಗಳು ಏರು ಪೇರಾದ ನಂತರ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಡೇರಿ ಬೇಕೆಂಬ ಕೂಗು ಇದ್ದ ಹಿನ್ನೆಲೆಯಲ್ಲಿ ಗೋಲ್ಡನ್‌ ಡೇರಿ ಸ್ಥಾಪನೆ ನನೆಗುದಿಗೆ ಬಿದ್ದಿತ್ತು. ಡೇರಿ ವಿಭಜನೆಯ ಬಗ್ಗೆ ಪರ ವಿರೋಧ ಕೂಗುಗಳು ಕೇಳಿ ಬಂದಿತ್ತು. ಆರೋಗ್ಯ ಸಚಿವ ಕೆ.ಸುಧಾಕರ್‌ ಸರ್ಕಾರದ ಮೇಲೆ ಒತ್ತಡ ತಂದು ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಡೇರಿ ಸ್ಥಾಪನೆ ಮಾಡಲು ಸರ್ಕಾರದಿಂದ ಆದೇಶ ತಂದು ವಿಭಜನೆ ಮಾಡಿಸಿದರು. ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಡೇರಿ ಮಾಡಿಸಿದವರು ಕೋಲಾರಕ್ಕೆ ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪನೆಗೆ ಅನುಮೋದನೆಯನ್ನು ಕೊಡಿಸಬೇಕು ಎಂದು ಕೋಲಾರದ ಕೋಚಿಮುಲ್‌ ನಿರ್ದೇಶಕರು ಹಾಗು ಸಾರ್ವಜನಿಕರು ಒತ್ತಾಯ ಪಡಿಸಿದ್ದರು.

ಕೊಲೆ ಮಾಡೋದೇ ಫ್ಯಾಷನ್, ಆರೋಪಿಗಳ ವಿರುದ್ಧ ಕೋಕಾ ದಾಖಲಿಸಲು ಚಿಂತನೆ!

ಗೋಲ್ಡನ್‌ ಡೇರಿ ಸ್ಥಾಪನೆಗೆ ಆಗ್ರಹ: ನಂತರ ಕೋಲಾರ ಡೇರಿ ಅಧ್ಯಕ್ಷ ನಂಜೇಗೌಡ ಹಾಗು ನಿರ್ದೇಶಕರು ಪತ್ರಿಕಾಗೋಷ್ಠಿ ನಡೆಸಿ ಕೋಲಾರದಲ್ಲಿ ಈಗಿರುವ ಡೇರಿ ಓಬಿರಾಯನ ಕಾಲದ್ದು ಈಗಿನ ಹಾಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಯಂತ್ರಗಳು ಇಲ್ಲ. ಆದ್ದರಿಂದ ಕೋಲಾರದಲ್ಲಿ ಗೋಲ್ಡನ್‌ ಡೇರಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ನೀಡಿದ್ದರೂ ಕಾರ್ಯಗತಗೊಳಿಸಲು ಆದೇಶ ನೀಡದೆ ವಿಭಜನೆ ಮಾಡಲು ಅನುಮತಿ ನೀಡಲಾಗಿದೆ. ವಿಭಜನೆಗೆ ನಮ್ಮ ಅಡ್ಡಿಯಿಲ್ಲ. ಆದರೆ ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪನೆಗೆ ನಮ್ಮದೇ ಹಣ ಇದ್ದರೂ ಅದಕ್ಕೆ ಅನುಮೋದನೆ ನೀಡುತ್ತಿಲ್ಲ. ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಸಹಕಾರಿ ಸಚಿವ ಹಾಗು ಮುಖ್ಯ ಮಂತ್ರಿಗಳ ಬಳಿ ಒತ್ತಡ ತಂದಿದ್ದರು. ಕೋಲಾರ ಹಾಲು ಒಕ್ಕೂಟದ ಡೈರಿ ಆವರಣದಲ್ಲಿ 185 ಕೋಟಿ ಮತ್ತು ತೆರಿಗೆ ವೆಚ್ಚದಲ್ಲಿ ನೂತನ ಎಂವಿಕೆ ಗೋಲ್ಡನ್‌ ಡೇರಿ ಸ್ಥಾಪನೆ ಮಾಡಲು ಜು.27ರಂದು ಕೆಲವೊಂದು ಷರತ್ತುಗಳೊಂದಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

click me!