ಸ್ನಾಪ್‌​ಡೀಲ್‌ ಲಕ್ಕಿ​ಡಿಪ್‌ ದೋಖಾ, ಗ್ರಾಹಕರೇ ಎಚ್ಚರ..!

By Kannadaprabha News  |  First Published Dec 5, 2019, 9:40 AM IST

ನೀವು ಆನ್‌​ಲೈನ್‌ ಡೀಲ್‌ ಗ್ರಾಹ​ಕರೇ? ಸ್ನಾಪ್‌​ಡೀಲ್‌ ಮೂಲ​ಕ ಖರೀದಿಸುತ್ತಿದ್ದೀರಾ? ಹೌದು ಎಂದಾದರೆ ಈ ಪ್ರಕ​ರ​ಣ​ವನ್ನು ಗಮ​ನಿ​ಸಿ. ಆನ್‌ಲೈನ್‌ ಪ್ರಾಡಕ್ಟ್‌ ಖರೀದಿಸುವ ಭರದಲ್ಲಿ ನಿಮ್ಮ ಅಕೌಂಟ್‌ ಖಾಲಿಯಾಗದಂತೆ ಎಚ್ಚರ ವಹಿಸಿ.


ಮಡಿ​ಕೇ​ರಿ(ಡಿ.05): ನೀವು ಆನ್‌​ಲೈನ್‌ ಡೀಲ್‌ ಗ್ರಾಹ​ಕರೇ? ಸ್ನಾಪ್‌​ಡೀಲ್‌ ಮೂಲ​ಕ ಖರೀದಿಸುತ್ತಿದ್ದೀರಾ? ಹೌದು ಎಂದಾದರೆ ಈ ಪ್ರಕ​ರ​ಣ​ವನ್ನು ಗಮ​ನಿ​ಸಿ. ಸ್ನಾಪ್‌​ಡೀಲ್‌ ಸಂಸ್ಥೆಯ ಹೆಸ​ರಿ​ನಲ್ಲಿ ಮೊಬೈ​ಲ್‌ಗೆ ಒಂದು ಸಂದೇಶ ಬರು​ತ್ತದೆ. ‘ನೀವು ನಮ್ಮ ಕಂಪನಿಯ ಲಾಟರಿಯಲ್ಲಿ ಮಹಿಂದ್ರಾ ಎಸ್‌.ಯು.ವಿ. ಕಾರನ್ನು ಗೆದ್ದಿದ್ದೀರಿ’ ಎಂದು. ಹೆಚ್ಚಿನ ವಿವ​ರ​ಗ​ಳಿಗೆ ಸಂಪ​ರ್ಕಿ​ಸು​ವಂತೆ ಒಂದು ನಂಬರ್‌ ನೀಡಿ​ರು​ತ್ತಾರೆ.

ನೀವು ಆ ನಂಬರ್‌ಗೆ ಕಾಲ್‌ ಮಾಡಿದರು, ಮಾಡದಿದ್ದರೂ, ಒಂದೆರಡು ದಿವಸ ಕಳೆದು ಒಬ್ಬ ವ್ಯಕ್ತಿ ತಮ್ಮನ್ನು ಸಂಪರ್ಕಿಸಿ, ನಿಮಗೆ ಕಾರು ಬೇಕೋ ಅಥವಾ ದುಡ್ಡು ಬೇಕೋ? ಎಂದು ಕೇಳುತ್ತಾರೆ. ಇವೆರಡರಲ್ಲಿ ಯಾವುದು ಬೇಕೆಂದರೂ, ತಮ್ಮ ಸರ್ವಿಸ್‌ ಚಾಜ್‌ರ್‍ ರು. 8 ಸಾವಿ​ರ​ವನ್ನು ಅವರ ಖಾತೆಗೆ ಜಮಾ ಮಾಡಲು ಹೇಳು​ತ್ತಾ​ರೆ.

Tap to resize

Latest Videos

ಚಂದ್ರಯಾನ-2 ಮುಂದಿನ ಸಾಧನೆಗೆ ಮುನ್ನುಡಿ: ಡಾ.ಕಸ್ತೂರಿ ರಂಗನ್‌

ನೀವೆಲ್ಲಾದರೂ ಸಮ​ಯಾ​ವ​ಕಾಶ ಕೇಳಿ​ದರೆ, ‘ಇಲ್ಲ ನಮಗೆ ಹೆಚ್ಚು ದಿವಸ ನಿಮ್ಮ ಬಹುಮಾನವನ್ನು ಇಟ್ಟುಕೊಳ್ಳಲು ಆಗುವುದಿಲ್ಲ, ನಮ್ಮ ಕಂಪನಿಯ ಮೇಲಿನ ಅಧಿ​ಕಾ​ರಿ​ಗಳು ನಮ್ಮಲ್ಲಿ ಕೇಳುತ್ತಾರೆ, ನಾವು ಲೈನ್‌ನಲ್ಲಿ ಇರುತ್ತೇವೆ, ಬೇಗ ಜಮಾ ಮಾಡಿ ಕ್ಲಿಯರ್‌ ಮಾಡಬೇಕು’ ಎಂದು ಒತ್ತಡ ಹಾಕು​ತ್ತಾ​ರೆ.

ಆದರೆ ಅಪ್ಪಿ ತಪ್ಪಿ ಏನಾದರು ನೀವು ಜಮೆ ಮಾಡಿದರೆ ಇನ್ನೊಂದು ಹೊಸ ಮೋಸಕ್ಕೆ ಬಲಿಪಶುವಾದಂತೆ ಸರಿ.. ಮುಂದಿನದು ಸ್ವಿಚ್‌ ಆಫ್‌.

ಸಾಯಿ ಮಂದಿರದಲ್ಲಿ ಕಾಂಗ್ರೆಸ್, BJP ಅಭ್ಯರ್ಥಿಗಳಿಂದ ಒಟ್ಟಿಗೆ ಪ್ರಾರ್ಥನೆ

ನೀವೇನಾದರೂ ಪ್ರತಿಷ್ಠಿತ ಕಂಪನಿಗೆ ನಾವು ದುಡ್ಡು ಕಳುಹಿಸಿದ್ದಕ್ಕೆ ಇಲ್ಲಿಯವರೆಗೂ ಮೋಸ ಆಗಿಲ್ಲವೆಂದು ವ್ಯವಹರಿಸಿದರೆ ತಾವೇ ತಮ್ಮ ತಲೆಯಲ್ಲಿ ಮೇಲೆ ಚಪ್ಪಡಿ ಎಳೆದಂತೆ ಸರಿ. ಸ್ನಾಪ್‌​ಡೀಲ್‌ ಕಂಪ​ನಿಗೂ ಇಂತಹ ಫ್ರಾಡ್‌ಗಳಿಗೂ ಸಂಬಂಧವೇ ಇರುವುದಿಲ್ಲ ಎಚ್ಚರ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

click me!