'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಶೀಘ್ರದಲ್ಲಿ ಬಿಜೆಪಿಗೆ ಬರ್ತಾರೆ'

By Suvarna News  |  First Published Dec 5, 2019, 9:39 AM IST

ಎಸ್ ಟಿಡಿ ಬೂತ್ ನಲ್ಲಿ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡುವುದಿಲ್ಲ‌|  ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ| ಸತೀಶ್ ಜಾರಕಿಹೊಳಿ ತುಳಿದಷ್ಟು ನಾನು ಬೆಳೆದಿದ್ದೇನೆ| ಲಖನ್ ಜಾರಕಿಹೊಳಿ ಬಗ್ಗೆ ನನಗೆ ಗೊತ್ತಿರಲಿಲ್ಲ|ಗೋಕಾಕ್ ನಲ್ಲಿ ಕೇವಲ ಸಹೋದರರ ನಡುವೆ ಜಗಳ ಹಚ್ಚಿದ್ದಾನೆ| ಅವನ ನೆರಳು ಸಹ ನನ್ನ ಜತೆಗೆ ಬೇಡ| ಹರಾಮಿ‌ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ| 


ಗೋಕಾಕ(ಡಿ.05): ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲ 15 ಸ್ಥಾನಗಳಲ್ಲೂ ಗೆಲ್ಲಲಿದೆ. ಕಾಂಗ್ರೆಸ್, ಜೆಡಿಎಸ್ ಒಂದು ಸ್ಥಾನವನ್ನೂ ಕೂಡ ಗೆಲ್ಲುವುದಿಲ್ಲ ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.

ಗುರುವಾರ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ ನ ಮತಗಟ್ಟೆ ಸಂಖ್ಯೆ 136ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಸ್ ನಿಲ್ದಾಣದಲ್ಲಿ ಹೂವು, ಎಸ್ ಟಿಡಿ ಬೂತ್ ನಲ್ಲಿ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡುವುದಿಲ್ಲ‌ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸತೀಶ್ ಜಾರಕಿಹೊಳಿ ತುಳಿದಷ್ಟು ನಾನು ಬೆಳೆದಿದ್ದೇನೆ, ಲಖನ್ ಜಾರಕಿಹೊಳಿ ಬಗ್ಗೆ ನನಗೆ ಗೊತ್ತಿರಲಿಲ್ಲ. ಗೋಕಾಕ್ ನಲ್ಲಿ ಕೇವಲ ಸಹೋದರರ ನಡುವೆ ಜಗಳ ಹಚ್ಚಿದ್ದಾನೆ. ಅವನ ನೆರಳು ಸಹ ನನ್ನ ಜತೆಗೆ ಬೇಡ. ಹರಾಮಿ‌ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ ಎಂದು ಹೇಳಿದ್ದಾರೆ. 

"

ಬೆಳಗಾವಿ ಉಸಾಬರಿ ಬಿಟ್ಟರೆ, ಮಾಜಿ ಸಚಿವ ಡಿ ಕೆ ಶಿವಕುಮಾರ್ ನನ್ನ ಒಳ್ಳೆಯ ಸ್ನೇಹಿತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ನಾಲಾಯಕ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಮುಂದಿನ ದಿನದಲ್ಲಿ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುತ್ತೇವೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಇಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಡಿ. 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!