ಚಂದ್ರಯಾನ- 2ರ ವಿಕ್ರಂ ಲ್ಯಾಂಡರ್ ಇಳಿಯುವ ಕೊನೆಯ ಗಳಿಗೆಯಲ್ಲಿ ಸಂಪರ್ಕ ಕಡಿದು ಚಂದ್ರನ ಮೇಲೆ ಬಿದ್ದಿರುವ ಘಟನೆ ನಮಗೆ ತೃಪ್ತಿ ನೀಡದೆ ಹೋದರೂ ಅಲ್ಲಿಯ ವರಗೆ ತಲುಪಿರುವುದು ಮಹತ್ವದ ಸಾಧನೆಯಾಗಿದೆ. ಇದು ಚಂದ್ರಯಾನ-2 ಮುಂದಿನ ಸಾಧನೆಗೆ ಮುನ್ನುಡಿಯಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದ್ದಾರೆ.
ಮಂಗಳೂರು(ಡಿ.05): ಚಂದ್ರಯಾನ- 2ರ ವಿಕ್ರಂ ಲ್ಯಾಂಡರ್ ಇಳಿಯುವ ಕೊನೆಯ ಗಳಿಗೆಯಲ್ಲಿ ಸಂಪರ್ಕ ಕಡಿದು ಚಂದ್ರನ ಮೇಲೆ ಬಿದ್ದಿರುವ ಘಟನೆ ನಮಗೆ ತೃಪ್ತಿ ನೀಡದೆ ಹೋದರೂ ಅಲ್ಲಿಯ ವರಗೆ ತಲುಪಿರುವುದು ಮಹತ್ವದ ಸಾಧನೆಯಾಗಿದೆ. ಇದು ಚಂದ್ರಯಾನ-2 ಮುಂದಿನ ಸಾಧನೆಗೆ ಮುನ್ನುಡಿಯಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹೇಳಿದ್ದಾರೆ.
ಅವರು ಬುಧವಾರ ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಾಹ್ಯಾಕಾಶ ಮತ್ತು ಅದರಾಚೆಗೆ ಲಗ್ಗೆ’ ಎಂಬ ವಿಷಯದ ಕುರಿತು ಮಾತನಾಡಿದ್ದಾರೆ.
undefined
ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!
ಈ ಘಟನೆ ನಮ್ಮ ಮುಂದೆ ಸಂಭಾವ್ಯ ತೊಡಕುಗಳನ್ನು ದಾಟಿ ಮುಂದುವರಿಯಲು ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.
ಮುಂದೆ ಮಾನವ ಸಹಿತ ಗಗನಯಾನ:
ಮುಂದಿನ ಎರಡೂವರೆ ವರ್ಷಗಳಲ್ಲಿ ಮಾನವ ಸಹಿತ ಗಗನಯಾತ್ರೆಯನ್ನು ಕೈಗೊಳ್ಳಲು ಭಾರತ ಸಿದ್ಧತೆ ನಡೆಸಿದೆ. 2022ರಲ್ಲಿ ಗಗನ ಯಾತ್ರೆಯ ಬಾಹ್ಯಾಕಾಶ ನೌಕೆ ಸಿದ್ಧಗೊಳ್ಳಲಿದೆ ಎಂದಿದ್ದಾರೆ.
2020 ರಲ್ಲಿ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ- ಎಲ್ 1 ಸ್ಪೇಸ್ ಕ್ರಾಫ್ಟ್ ಮಿಶನ್, 2023ರಲ್ಲಿ ಶುಕ್ರ ಗ್ರಹ ಆರ್ಬಿಟರ್, 2024 ರಲ್ಲಿ ಚಂದ್ರಯಾನ- 3 ಹಾಗೂ 2025ರಲ್ಲಿ ಸೌರ ವ್ಯೂಹ ಹೊರಗಿನ ಅನ್ವೇಷಣೆ ಇಸ್ರೋ ಸಂಸ್ಥೆಯ ಮುಂದಿನ ಯೋಜನೆಗಳಾಗಿವೆ ಎಂದು ವಿವರಿಸಿದರು. ಭಾರತವು ಅಮೆರಿಕ ಮತ್ತು ಫ್ರಾನ್ಸ್ ದೇಶಗಳಿಗೆ ಸಮಾನವಾದ ಉಪಗ್ರಹಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಜಗತ್ತಿನ ವಿವಿಧ ಮೂಲೆಗಳ ಮಾಹಿತಿಗಳನ್ನು ಸಚಿತ್ರವಾಗಿ ಸಂಗ್ರಹಿಸಿ ರವಾನಿಸುವ ಆಧುನಿಕ ಕ್ಯಾಮರಾಗಳನ್ನು ಈ ಉಪಗ್ರಹ ಹೊಂದಿದೆ. ಇದರಿಂದ ಪ್ರಕೃತಿ ವಿಕೋಪಗಳ ಹಾಗೂ ಹವಾಮಾನ, ಕೃಷಿಗೆ ಪೂರಕ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಡಾ. ಕಸ್ತೂರಿ ರಂಗನ್ ಹೇಳಿದ್ದಾರೆ.
ಹೊಸ ಶಿಕ್ಷಣ ನೀತಿ ಕರಡು ಸಿದ್ಧ:
ನೂತನ ಶಿಕ್ಷಣ ನೀತಿ ರೂಪಿಸಲು 200 ಮಂದಿ ಸಂಪನ್ಮೂಲ ವ್ಯಕ್ತಿಗಳು ನೀಡಿದ ಕರಡು ವರದಿ ತಯಾರಿಸಲಾಗಿದೆ. ಶೀಘ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಉದ್ಘಾಟಿಸಿದ ಡಾ.ಕಸ್ತೂರಿರಂಗನ್ ತಿಳಿಸಿದ್ದಾರೆ.
ಸೃಜನಶೀಲತೆ ಮತ್ತು ಕ್ರೀಯಾಶೀಲತೆ ಇದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ನಮ್ಮ ಯುವ ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜು ವೈಜ್ಞಾನಿಕ ಸಂಶೋಧನೆಗೆ ಉತ್ತಮ ಮೂಲ ಸೌಲಭ್ಯಗಳನ್ನು ಹೊಂದಿದ್ದು, ಇಲ್ಲಿ ಸಂಶೋಧನೆಗಳು ನಡೆದು ಯುವ ವಿಜ್ಞಾನಿಗಳು ಹೊರ ಹೊಮ್ಮಲಿ ಎಂದು ಅವರು ಆಶಿಸಿದ್ದಾರೆ.
ಯಕ್ಷಗಾನ ವೀಕ್ಷಣೆಗೆ ಈಗ ಯುವ ಪಡೆಯ ಟ್ರೆಂಡ್..!
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ. ಗುರು ಡೈನೇಶಿಯಸ್ ವಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್, ಕಾರ್ಯಕ್ರಮದ ಸಂಚಾಲಕರಾದ ಡಾ. ವಿನೋಲಾ ರೋಡ್ರಿಗಸ್ ಇದ್ದರು.
ಕ್ಸೇವಿಯರ್ ಬ್ಲಾಕ್‌ನ ನಿರ್ದೇಶಕ ಡಾ. ಜಾನ್ ಡಿ’ಸಿಲ್ವ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ರೊನಾಲ್ಡ್ ನಝ್ರತ್ ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಪ್ರೀಮಾ ಸಿಯೊಲಾ ಪಾಯ್‌್ಸ ಕಾರ್ಯಕ್ರಮ ನಿರ್ವಹಿಸಿದರು.