Chikkamagaluru: ಉದ್ಯೋಗದ ಆಮಿಷ, ಆನ್ ಲೈನ್ ನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

By Suvarna News  |  First Published Jan 10, 2023, 12:53 PM IST

ಒಬ್ಬರಿಗೆ ವಿದೇಶದಲ್ಲಿ ಕೆಲಸದ ಆಮಿಷ ಮತ್ತೊಬ್ಬರಿಗೆ ಮನೆಯಿಂದಲೇ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ  ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.10): ಒಬ್ಬರಿಗೆ ವಿದೇಶದಲ್ಲಿ ಕೆಲಸದ ಆಮಿಷ ಮತ್ತೊಬ್ಬರಿಗೆ ಮನೆಯಿಂದಲೇ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಣ ಕಳೆದುಕೊಂಡಿರುವರು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tap to resize

Latest Videos

ವಿದೇಶದಲ್ಲಿ ಉದ್ಯೋಗದ ಆಮಿಷ: ಆನ್‌ಲೈನ್‌ನಲ್ಲಿ 90 ಸಾವಿರ ವಂಚನೆ
ವಿದೇಶದಲ್ಲಿ ಉದ್ಯೋಗದ ಅನ್‌ಲೈನ್‌ ಅಮಿಷಕ್ಕೆವೊಬ್ಬರು ಮರುಳಾಗಿ 90ಸಾವಿರ ಹಣ ಪಾವತಿಸಿ ಮೋಸ ಹೋಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಚನ್ನಹಡ್ಲು ಗ್ರಾಮದ ಎಸ್‌.ಕಾರ್ತಿಕ್ ಅವರು ಮೋಸ ಹೋಗಿದ್ದು, ಜಿಲ್ಲಾ ಸೈಬರ್, ಅರ್ಥಿಕ ಮತ್ತು ಮಾದಕ ಠಾಣೆಗೆ ದೂರು ನೀಡಿದ್ದಾರೆ. ವಿದೇಶದಲ್ಲಿ ಉದ್ಯೋಗದ ಜಾಹಿರಾತನ್ನು ಇನ್ ಸ್ಟಾಗ್ರಾಂನಲ್ಲಿ ನೋಡಿ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಹಣ ಕಳೆದುಕೊಂಡಿದ್ದಾರೆ. 2022ರ ಜುಲೈ 6ರಂದು ವ್ಯಕ್ತಿಯೊಬ್ಬರು ಫೋನ್ ಮಾಡಿ ಕೆನಡಾದಲ್ಲಿ ಫುಡ್ ಪ್ಯಾಕಿಂಗ್ ಉದ್ಯೋಗ ಇದೆ ಎಂದು ಹೇಳಿ ಆಧಾರ್ ಕಾರ್ಡ್‌, ಇತರ ಮಾಹಿತಿ ಪಡೆದುಕೊಂಡು ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನೋಂದಣಿ ಶುಲ್ಕ 1800, ಎಂಬೆಸಿ ಶುಲ್ಕ 12 ಸಾವಿರ, ಎಲ್‌ಎಂಐಎ ಶುಲ್ಕ  60 ಸಾವಿರ, ಬಯೊಮೆಟ್ರಿಕ್ ಶುಲ್ಕ 15 ಸಾವಿರ ಒಟ್ಟು 88,800 ಹಣವನ್ನು 2022 ನವೆಂಬರ್ 27ರವರೆಗೆ ಹಂತಹಂತವಾಗಿ ಆನ್‌ಲೈನ್‌ನಲ್ಲಿ (ಗೂಗಲ್ ಪೇ) ಮೂಲಕ ಜಮೆ ಮಾಡಿಸಿಕೊಂಡಿದ್ದಾರೆ ಎಂದು ವಿವರ ನೀಡಿದ್ದಾರೆ. ಈಗ ಹಲವಾರು ಬಾರಿ ಫೋನ್ ಮಾಡಿದರೂ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲ. ಉದ್ಯೋಗವನ್ನೂ ಕೊಡಿಸದೆ, ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

Bengaluru: ಗಿಡಮೂಲಿಕೆ ಮಾರಾಟಗಾರರಿಂದ ಚಿಕಿತ್ಸೆ ಹೆಸರಲ್ಲಿ ವಂಚನೆ: ಮೂವರ ಬಂಧನ

ಮಹಿಳೆಗೆ ‍1.67 ಲಕ್ಷ ಮೋಸ : 
ಮಹಿಳೆಯೊಬ್ಬರಿಗೆ ಮನೆಯಿಂದಲೇ ಉದ್ಯೋಗ, ಕಮಿಷನ್ ಆಮಿಷವೊಡ್ಡಿ ಆನ್‌ಲೈನ್ ವಂಚಕರು 1.67 ಲಕ್ಷ ಲಪಟಾಯಿಸಿದ್ದಾರೆ. ತರೀಕೆರೆಯ ಐ.ಎಂ. ಸ್ನೇಹಾ ಅವರು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆನ್ ಲೈನ್  ನಂಬರ್‌ನಿಂದ ತನ್ನ ವಾಟ್ಸ್ ಆಪ್‌ಗೆ ರವಾನೆಯಾಗಿದ್ದ 'ವರ್ಕ್ ಫ್ರೆಂ ಹೋಮ್ ಜಾಬ್'  ಲಿಂಕ್‌ನ ವಿವರ ನಂಬಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ವರ್ಕ್ ಅರ್ಡರ್ ಡಿಸ್ಪ್ಯಾಚ್ ಗೆ ಮೊದಲು ಕಮಿಷನ್ ( 500ಕ್ಕೆ 50 ಹಾಗೂ 3000ಕ್ಕೆ  300) ಕೊಟ್ಟರು. ನಂತರ ಟಾಸ್ಕ್‌ ಕಂಪ್ಲಿಟ್ ನಿಟ್ಟಿನಲ್ಲಿ  1.09 ಲಕ್ಷ ಬ್ಯಾಂಕ್ ಮೂಲಕ 58 ಸಾವಿರ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ICICI Bank Fraud Case: ಬಂಧಿತರಾಗಿದ್ದ ಚಂದಾ ಕೊಚ್ಚರ್‌, ಪತಿ ಬಿಡುಗಡೆಗೆ ಬಾಂಬೆ ಹೈ ಆದೇಶ

ನಂತರ ಕಮಿಷನ್ ಕೊಡದೆ ವಂಚನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಎರಡು ಪ್ರಕರಣಗಳಲ್ಲೂ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲಾಗಿದ್ದು ಯುಪಿಐನಿಂದ ಮಾಹಿತಿ ಪಡೆದು ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಪ್ರಯತ್ನದಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ಆನ್ ಲೈನ್ ನಲ್ಲಿ  ವಂಚನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಇದ್ದರೂ ಕೂಡ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿರುವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿರುವುದು ವಿಷಾದವೇ ಸರಿ.

click me!