ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕ್ಷಮೆಯಾಚಿಸಿದ ಗೋ ಫಸ್ಟ್ ಏರ್ಲೈನ್ಸ್. ಘಟನೆಯ ಬಳಿಕ 50 ಪ್ರಯಾಣಿಕರ ಪೈಕಿ ಕೆಲವರಿಗೆ ಮತ್ತೊಂದು ವಿಮಾನದಲ್ಲಿ ಹೋಗಲು ಅವಕಾಶ, ಇನ್ನೂ ಕೆಲವರಿಗೆ ಏರ್ಲೈನ್ಸ್ ಹಣ ವಾಪಸ್ ನೀಡಿದೆ.
ಬೆಂಗಳೂರು(ಜ.10): ಸುಮಾರು 50 ಜನ ಪ್ರಯಾಣಿಕರನ್ನು ಟರ್ಮಿನಲ್‌ನಲ್ಲೇ ಬಿಟ್ಟು ವಿಮಾನವೊಂದು ಟೇಕಾಫ್ ಆದ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಗೋ ಫಸ್ಟ್ ವಿಮಾನ ಬೆಂಗಳೂರಿನಿಂದ ದೆಹಲಿಗೆ ತೆರಳುತಿತ್ತು. ಬೋರ್ಡಿಂಗ್ ಆದರು ಪ್ರಯಾಣಿಕರನ್ನು ಬಿಟ್ಟು ಹೋಗಿದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಗೋ ಫಸ್ಟ್ ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಬೋರ್ಡಿಂಗ್ ಗೇಟ್‌ನಿಂದ ಮೊದಲ ಬಸ್ ಹೋಗಿತ್ತು, ಎರಡನೇ ಬಸ್ ವಿಮಾನ ಬಳಿ ಹೋಗುವ ಮೊದಲೇ ವಿಮಾನ ಟೇಕಾಫ್ ಆಗಿದೆ.
ವಿಮಾನ ಸೇವೆಯಲ್ಲಿ ವಿಶ್ವದಲ್ಲೇ ಬೆಂಗಳೂರು ಏರ್‌ಪೋರ್ಟ್ ಉತ್ತಮ..!
ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಗೋ ಫಸ್ಟ್ ಏರ್ಲೈನ್ಸ್ ಕ್ಷಮೆಯಾಚಿಸಿದೆ. ಘಟನೆಯ ಬಳಿಕ 50 ಪ್ರಯಾಣಿಕರ ಪೈಕಿ ಕೆಲವರಿಗೆ ಮತ್ತೊಂದು ವಿಮಾನದಲ್ಲಿ ಹೋಗಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ ಕೆಲವರಿಗೆ ಏರ್ಲೈನ್ಸ್ ಹಣ ವಾಪಸ್ ನೀಡಿದೆ.