ಈರುಳ್ಳಿ ಬೆಲೆ ಏಕಾ ಏಕಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಅರ್ಧಕ್ಕರ್ಧ ಕುಸಿದಿದ್ದು ಇನ್ನೂ ಇಳಿಯುವ ಸಾಧ್ಯತೆ ಇದೆ.
ಬೆಂಗಳೂರು [ಡಿ.09]: ಗದಗ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ ಬೆಲೆ ಕುಸಿತ ಕಂಡ ಬಳಿಕ ಇದೀಗ ವಿಜಯಪುರ, ರಾಯಚೂರುಗಳಲ್ಲೂ ದಿಢೀರ್ ದರ ಕುಸಿತ ದಾಖಲಾಗಿದೆ.
ಇಲ್ಲಿಯ ಎಪಿಎಂಸಿಗಳಲ್ಲಿ ಕಳೆದ ವಾರವಷ್ಟೇ ಪ್ರತಿ ಕ್ವಿಂಟಲ್‌ಗೆ 15 ಸಾವಿರ ರು. ಇದ್ದ ದರ ಭಾನುವಾರ ಏಕಾಏಕಿಯಾಗಿ 7 ಸಾವಿರಕ್ಕೆ ಕುಸಿತ ಕಂಡಿದೆ.
ಟರ್ಕಿಯಿಂದ ಬಂದ ಈರುಳ್ಳಿ ಕಡಿಮೆ ದರಕ್ಕೆ ಮಾರಾಟ ...
ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳುತ್ತಿರುವುದು, ರೈತರು ಬೆಲೆ ಜಾಸ್ತಿಯಿದೆ ಎಂದು ಇನ್ನೂ ಸರಿಯಾಗಿ ಬೆಳೆಯದ ಈರುಳ್ಳಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿರುವುದರಿಂದ ಗುಣಮಟ್ಟಕ್ಷೀಣಗೊಂಡು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.
ಮಲೇಷ್ಯಾ ಮೂಲಕ ಹುಬ್ಬಳ್ಳಿಗೆ ಬಂತು ಈಜಿಪ್ಟ್ ಈರುಳ್ಳಿ...
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹುಬ್ಬಳ್ಳಿ ಎಪಿಎಂಸಿಗೆ ಸೋಮವಾರ ಸೊಲ್ಲಾಪುರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆಗಮಿಸುವ ನಿರೀಕ್ಷೆಯಿದ್ದು, ಬೆಲೆಯಲ್ಲಿ ಗಣನೀಯ ಏರುಪೇರಾಗುವ ಸಾಧ್ಯತೆ ಇದೆ. ಸೊಲ್ಲಾಪುರದಲ್ಲಿ ಕ್ವಿಂಟಲ್‌ಗೆ 5-6 ಸಾವಿರ ರು. ಇದ್ದು, ಅಲ್ಲಿನ ರೈತರು ಕರ್ನಾಟಕಕ್ಕೆ ಈರುಳ್ಳಿ ತರುತ್ತಿದ್ದಾರೆ.