ದಿಢೀರ್ ಭಾರೀ ಕುಸಿತವಾಯ್ತು ಈರುಳ್ಳಿ ಬೆಲೆ : ಈಗೆಷ್ಟು?

By Suvarna NewsFirst Published Dec 10, 2019, 12:05 PM IST
Highlights

ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆ ದಿಢೀರ್ ಕುಸಿದಿದೆ. ಇದಕ್ಕೆ ಕಾರಣ ಏನು? ಎಷ್ಟು ಕುಸಿದಿದೆ ಇಲ್ಲಿದೆ ಮಾಹಿತಿ 

ಬೆಂಗಳೂರು [ಡಿ.10]:  ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಆಗಿದ್ದ ಬೆಳೆ ಹಾನಿಯಿಂದಾಗಿ ಪೂರೈಕೆ ಕೊರತೆ ಉಂಟಾಗಿ ಗಗನಮುಖಿಯಾಗಿದ್ದ ಈರುಳ್ಳಿ ಬೆಲೆ ಇಳಿದಿದೆ. 

ಕೆಜಿಗೆ 200 ರು. ಆಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದ್ದು, ಇದೀಗ 60 ರು.ಗೆ ಕುಸಿದಿದೆ. ಕಳೆದ ಕೆಲವು ದಿನಗಳಿಂದ ದುಬಾರಿಯಾಗಿದ್ದ ಈರುಳ್ಳಿ ದರ ದಿಢೀರ್ ಕೆಳಮುಖವಾಗಿದೆ.

ಬೆಲೆ ಇಳಿಕೆಗೆ ಕಾರಣ ಏನು ? 

ಈಗಾಗಲೇ ವಿವಿಧೆಡೆಯಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ತರಿಸಲಾಗಿದೆ. 60 ಸಾವಿರ ಚೀಲದಷ್ಟು ಈರುಳ್ಳಿಯನ್ನು ಮಾರುಕಟ್ಟೆಗೆ ತರಿಸಲಾಗಿದ್ದು, ಹೆಚ್ಚಿನ ಲಭ್ಯತೆ ಇರುವ ಕಾರಣ ಬೆಲೆ ಇಳಿಕೆಗೆ ಕಾರಣವಾಗಿದೆ.

ಈರುಳ್ಳಿ ಮಾರೋಕೆ ಲೈಸೆನ್ಸ್ ಕಡ್ಡಾಯ, ಬೇಕಾಬಿಟ್ಟಿ ಸ್ಟಾಕ್ ಮಾಡಿದ್ರೆ ಕೇಸ್... 

ಒಂದು ಕ್ವಿಂಟಾಲ್ ಈರುಳ್ಳಿಯು 8 ರಿಂದ 12 ಸಾವಿರಕ್ಕೆ ಮಾರಾಟವಾಗುತ್ತಿದ್ದು ಉತ್ಕೃಷ್ಟ ಮಟ್ಟದ ಈರುಳ್ಳಿಗೆ 12 ಸಾವಿರ ಬೆಲೆ ಇದೆ. 

ಸದ್ಯ ಮಾರುಕಟ್ಟೆಗಳಿಗೆ ಈರುಳ್ಳಿ ಪೂರೈಕೆ ಪ್ರಮಾಣ ಹೆಚ್ಚಾಗುತ್ತಿರುವ ಕಾರಣದಿಂದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು,  ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

click me!