ಈರುಳ್ಳಿ ಮಾರೋಕೆ ಲೈಸೆನ್ಸ್ ಕಡ್ಡಾಯ, ಬೇಕಾಬಿಟ್ಟಿ ಸ್ಟಾಕ್ ಮಾಡಿದ್ರೆ ಕೇಸ್

By Suvarna NewsFirst Published Dec 10, 2019, 11:31 AM IST
Highlights

ಅನಾವಶ್ಯಕವಾಗಿ ಈರುಳ್ಳಿ ದರ ಏರಿಕೆಯಾಗುತ್ತಿದ್ದು, ಅಕ್ರಮ ದಾಸ್ತಾನು ಮಾಡಿ ಲಾಭ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳಿಗೆ ಮೈಸೂರು ಜಿಲ್ಲಾಧಿಕಾರಿ ವಾರ್ನಿಂಗ್ ಮಾಡಿದ್ದಾರೆ. ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮೈಸೂರು(ಡಿ.10): ಅನಾವಶ್ಯಕವಾಗಿ ಈರುಳ್ಳಿ ದರ ಏರಿಕೆಯಾಗುತ್ತಿದ್ದು, ಅಕ್ರಮ ದಾಸ್ತಾನು ಮಾಡಿ ಲಾಭ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳಿಗೆ ಮೈಸೂರು ಜಿಲ್ಲಾಧಿಕಾರಿ ವಾರ್ನಿಂಗ್ ಮಾಡಿದ್ದಾರೆ. ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ

ಈರುಳ್ಳಿ ದರ ಅನಾವಶ್ಯಕ ಏರಿಕೆ ತಡೆಗೆ ಸರ್ಕಾರ ಮುಂದಾಗಿದ್ದು, ಅಕ್ರಮ ಈರುಳ್ಳಿ ದಾಸ್ತಾನು ಮಾಡಿ ಲಾಭ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಅಕ್ರಮವಾಗಿ ಯಥೇಚ್ಛವಾಗಿ ಈರುಳ್ಳಿ ದಾಸ್ತಾನು ಮಾಡಿದಲ್ಲಿ ಪ್ರಕರಣವನ್ನೂ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.

ಈರುಳ್ಳಿ ಅಕ್ರಮ ದಾಸ್ತಾನುಗಳ ಮೇಲೆ ಅನಿರೀಕ್ಷಿತ ದಾಳಿ ಹಾಗೂ ಪರಿಶೀಲನೆಗೆ ಸರ್ಕಾರ ಆದೇಶ ನೀಡಿದ್ದು, ಈರುಳ್ಳಿ ಡೀಲರ್, ಮಾರಾಟಗಾರರ ದಾಸ್ತಾನು ಮಿತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ದೊಡ್ಡಮಟ್ಟದ ಡೀಲರ್‌ಗಳು 250 ಕ್ವಿಂಟಾಲ್, ಚಿಲ್ಲರೆ ವ್ಯಾಪಾರಿಗಳು 50 ಕ್ವಿಂಟಾಲ್‌ನಷ್ಟು ದಾಸ್ತಾನು ಮಾಡಬಹುದು. ಈರುಳ್ಳಿ ದಾಸ್ತಾನು ಮಿತಿ ಇರುವಂತಹ ಹಾಗೂ ಮಾರಾಟದ ಪರವಾನಗಿ ಪಡೆಯಬೇಕು.

ಜಿಲ್ಲಾಮಟ್ಟದಲ್ಲಿ ಜಿಲ್ಲಾಡಳಿತ, ತಾಲೂಕು ‌ಮಟ್ಟದಲ್ಲಿ ತಹಶಿಲ್ದಾರ್ ಕಚೇರಿಂದ ಪರವಾನಗಿ‌ ಪಡೆಯುವುದು ಕಡ್ಡಾಯವಾಗಿದೆ.ಅಗತ್ಯವಸ್ತುಗಳ ಕಾಯ್ದೆಯಡಿ‌ ಕ್ರಮ ಜರುಹಿಸಲು ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಸರ್ಕಾರದ ಆದೇಶದ ಮೇರೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

click me!