ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರ ಯುವಕರಿಗೆ ಟಿಪ್ಪರ್ ಚಾಲಕ ವೇಗವಾಗಿ ಬಂದು ಗುದ್ದಿದ ಪರಿಣಾಮ ಓರ್ವನ ಸಾವು
ಹುಬ್ಬಳ್ಳಿ(ಡಿ.09): ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರ ಯುವಕರಿಗೆ ಟಿಪ್ಪರ್ ಚಾಲಕ ವೇಗವಾಗಿ ಬಂದು ಗುದ್ದಿದ ಪರಿಣಾಮ, ಯುವಕನೊಬ್ಬನ ದೇಹ ಛಿದ್ರ ಛಿದ್ರವಾದ ಘಟನೆ ಇಂದು(ಶುಕ್ರವಾರ) ಕುಸಗಲ್ ರಸ್ತೆಯಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪೂರ ನಿವಾಸಿ ರಹಿಮಾನಸಾಬ್ ಕೆರಿಮನಿ ಹಾಗೂ ಹಳೇ ಹುಬ್ಬಳ್ಳಿ ನಿವಾಸಿ ಸೈಯ್ಯದಸಾಬ ಗದಗಕರ ಈ ಇಬ್ಬರು ಯುವಕರು ಒಂದು ವಾಹನವನ್ನು ಟೊಯಿಂಗ್ ಮಾಡಿಕೊಂಡು ಬರುವಾಗ, ಕುಸಗಲ್ ರಸ್ತೆಯಲ್ಲಿರುವ ಸಿದ್ದಾರೂಢ ಮಠದ ಹತ್ತಿರ ವಾಹನ ನಿಲ್ಲಿಸಿ ಹಗ್ಗ ಬಿಗಿಯಾಗಿ ಕಟ್ಟುತ್ತಿರುವಾಗ, ಅದೆ ಮಾರ್ಗವಾಗಿ ಎಂಸ್ಯಾಂಡ್ ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ್ ಚಾಲಕ, ಆ ಇಬ್ಬರ ಯುವಕರಿಗೆ ಗುದ್ದಿದ್ದಾನೆ.
ಸ್ನೇಹಿತನ ಪೋಸ್ಟ್‌ಮಾರ್ಟಮ್ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ
ಆ ಇಬ್ಬರಲ್ಲಿ ಚನ್ನಾಪೂರ ನಿವಾಸಿ ರಹಿಮಾನಸಾಬ್ ದೇಹ ಛಿದ್ರ ಛಿದ್ರವಾಗಿದೆ. ಇನ್ನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೆ ಗುದ್ದಿ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾಸಿದ್ದು ತನಿಖೆ ಪ್ರಾರಂಭಿಸಿದ್ದಾರೆ.