ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಕಳೆದ ಮೂರು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದ ಜನರು ತುಂಬಾ ಭಯಬೀತರಾಗಿದ್ದಾರೆ. ಚಿರತೆಯೊಂದು ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.9): ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡಿದ ಹಾಗೆ ಕೋಟೆನಾಡಿನಲ್ಲಿಯೂ ಚಿರತೆಯೊಂದು ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದೆ. ಮನೆಯಿಂದ ಜಮೀನುಗಳಿಗೆ ರೈತರು ಹೋಗುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಕಳೆದ ಮೂರು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದ ಜನರು ತುಂಭಾ ಭಯಬೀತರಾಗಿದ್ದಾರೆ. ಸದ್ಯ ಎಲ್ಲಾ ರೈತರು ಜಮೀನುಗಳಲ್ಲಿ ಬೆಳೆದು ನಿಂತಿರೋ ಬೆಳೆಗಳು ಕಟಾವಿಗೆ ಬಂದಿರೋ ಸಮಯ ಇದಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರೂ ಜಮೀನುಗಳಿಗೆ ತೆರಳಬೇಕಾಗುತ್ತದೆ. ಆದ್ರೆ ಅಲ್ಲಲ್ಲಿ ಚಿರತೆ ಪ್ರತ್ಯಕ್ಷ ಆಗ್ತಿರೋದ್ರಿಂದ ಏನಾದ್ರು ಅನಾಹುತ ಆದ್ರೆ ಏನ್ ಮಾಡೋದು ಎಂಬ ಆತಂಕದಲ್ಲಿ ಜನರಿ ಬದುಕು ಸಾಗಿಸ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾಗ, ಬೋನ್ ಅಳವಡಿಕೆ ಮಾಡಲಾಗಿದೆ ಆದ್ರೂ ಕೂಡ ಚಿರತೆ ಸೆರೆ ಆಗಿಲ್ಲ. ಆದಷ್ಟು ಬೇಗ ಚಿರತೆ ಸೆರೆ ಹಿಡಿದು ನಮ್ಮ ಗ್ರಾಮದ ಜನರ ನೆಮ್ಮದಿ ಕಾಪಾಡಬೇಕಿದೆ ಅಂತಾರೆ ಗ್ರಾಮಸ್ಥರು.
ಇನ್ನೂ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷ ಆದಾಗಿನಿಂದ ಚಿಕ್ಕ, ಪುಟ್ಟ ಮಕ್ಕಳನ್ನು ಒಬ್ಬಂಟಿಯಾಗಿ ಮನೆಯಿಂದ ಹೊರ ಕಳುಹಿಸಲಿಕ್ಕೂ ಜನರು ಆತಂಕ ಪಡ್ತಿದ್ದಾರೆ. ಈಗಾಗಲೇ ಹೇಳಿದ ಹಾಗೆ ಗ್ರಾಮೀಣ ಭಾಗದಲ್ಲಿ ರೈತರು ಜಾನುವಾರುಗಳ ಸಾಕಾಣಿಕೆ ಹೆಚ್ಚಾಗಿರೋದ್ರಿಂದ ಅವುಗಳಿಗೆ ಮೇವು ಒದಗಿಸಲು ಜಮೀನುಗಳಿಗೆ ಅನಿವಾರ್ಯವಾಗಿ ತೆರಳುವ ಪರಿಸ್ಥಿತಿ ಬರುತ್ತೆ. ಆದ್ರೆ ಕುರುಡಿಹಳ್ಳಿ, ಬಾಲೇನಹಳ್ಳಿ ಸುತ್ತಮುತ್ತ ಗ್ರಾಮದ ರೈತರ ಜಮೀನಿನ ಕಡೆ ಚಿರತೆ ಓಡಾಟ ನಡೆಸ್ತಿರೋದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.
Bengaluru: ಇನ್ನೂ ಪತ್ತೆಯಾಗದ ಚಿರತೆ; ಆತಂಕದಲ್ಲಿ ಜನ
ಅದ್ರಲ್ಲಂತೂ ಜಮೀನುಗಳಿಲ್ಲಿ ನಿರ್ಮಿಸಿರುವ ಕೆಲ ಮನೆಗಳ ಜನರ ಪರಿಸ್ಥಿತಿ ಅಂತು ಹೇಳತೀರದು. ನಾನು ಕೂಡ ಜಮೀನಲ್ಲಿದ್ದಾಗ ಖುದ್ದು ಚಿರತೆ ನೋಡಿ ಭಯದಿಂದ ರೂಮ್ ಗೆ ತೆರಳಿದೆ ಬಳಿಕ ಅದು ಮಾಯವಾಯ್ತು. ಹಾಗಾಗಿ ಯಾವುದೇ ಅನಾಹುತಗಳು ಸಂಭವಿಸುವುದಕ್ಕಿಂತ ಮುಂಚೆಯೇ ಚೀತಾ ಆಪರೇಷನ್ ಸಕ್ಸಸ್ ಆಗಬೇಕಿದೆ ಅಂತಾರೆ ಪ್ರತ್ಯಕ್ಷದರ್ಶಿ.
ಚಿರತೆಗಳು ಊರಿಗೆ ನುಗ್ಗಲು ಕಲ್ಲು ಕ್ವಾರಿ, ಗಣಿ ಕಾರಣ: ಸಂಜಯ್ ಗುಬ್ಬಿ
ಇತ್ತ ರಾಜ್ಯ ರಾಜಧಾನಿಯಲ್ಲಿ ವಾರಗಟ್ಟಲೆ ಜನರ ನೆಮ್ಮದಿ ಹಾಳು ಮಾಡಿ ಚಿರತೆಯೊಂದು ಕೆಲವರ ಪ್ರಾಣ ತೆಗೆದಿತ್ತು. ಆದ್ದರಿಂದ ಭಯ ಭೀತರಾಗಿರೋ ಕುರುಡಿಹಳ್ಳಿ ಗ್ರಾಮದ ಜನರನ್ನ, ಕೂಡಲೇ ಚಿರತೆ ಕಾಟದಿಂದ ಅರಣ್ಯಾಧಿಕಾರಿಗಳು ಮುಕ್ತಿ ಕೊಡಿಸಲಿ ಎಂಬುದು ನಮ್ಮ ಆಶಯ.