ಎರಡು ಗುಂಪುಗಳ ನಡುವೆ ಸಂಘರ್ಷ, ಓರ್ವ ಸಾವು

Kannadaprabha News   | Asianet News
Published : Jun 02, 2020, 07:35 AM IST
ಎರಡು ಗುಂಪುಗಳ ನಡುವೆ ಸಂಘರ್ಷ, ಓರ್ವ ಸಾವು

ಸಾರಾಂಶ

ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟೀಲು ಸಮೀಪದ ಎಕ್ಕಾರಿನ ದೇವರ ಗುಡ್ಡೆ ಎಂಬಲ್ಲಿ ಭಾನು​ವಾರ ರಾತ್ರಿ ಎರಡು ಗುಂಪುಗಳ ನಡೆದ ಘರ್ಷಣೆಯಲ್ಲಿ ಒರ್ವ ಮೃತ ಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಮೂಲ್ಕಿ(ಜೂ 02): ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟೀಲು ಸಮೀಪದ ಎಕ್ಕಾರಿನ ದೇವರ ಗುಡ್ಡೆ ಎಂಬಲ್ಲಿ ಭಾನು​ವಾರ ರಾತ್ರಿ ಎರಡು ಗುಂಪುಗಳ ನಡೆದ ಘರ್ಷಣೆಯಲ್ಲಿ ಒರ್ವ ಮೃತ ಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಭಾನು​ವಾರ ರಾತ್ರಿ ದೇವರಗುಡ್ಡೆಯಲ್ಲಿ ಕೀರ್ತನ್‌, ನಿತಿನ್‌ ಮತ್ತು ಮಣೇಶ್‌ ಒಟ್ಟು ಸೇರಿದ್ದು ವಿರೋಧಿ ತಂಡವನ್ನು ಬರ ಹೇಳಿದರು. ಬಳಿಕ ಮಾತಿಗೆ ಮಾತು ಬೆಳೆದು ವಿರೋಧಿ ತಂಡವು ಕೀರ್ತನ್‌ ಮತ್ತವರ ತಂಡದ ಮೇಲೆ ಚೂರಿಯಿಂದ ಹಲ್ಲೆ ನಡೆಸಿದೆ.

ರಾಜ್ಯ ಸರ್ಕಾರದಿಂದ ಮನೆಗಳಿಗೆ ಕೊರೋನಾ ವಿತರಣೆ: ಯು.ಟಿ.ಖಾದರ್‌

ಗಂಭೀರ ಗಾಯಗೊಂಡ ಮಂಗಳೂರಿನ ಮರಕಡ ನಿವಾಸಿ ಕೀರ್ತನ್‌ (20) ಮೃತಪಟ್ಟಿದ್ದು ಆತನ ಸ್ನೇಹಿತರಾದ ನಿತಿನ್‌ (20) ಮತ್ತು ಮಣೇಶ್‌ (20) ಗಂಭಿರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ತಂಡಗಳ ನಡುವೆ ಹಣಕಾಸು ಮತ್ತಿತರ ವಿಷಯಗಳ ಬಗ್ಗೆ ವೈಷಮ್ಯವಿದ್ದು ಘಟನೆ ಬಳಿಕ ಆರೋಪಿ​ಗಳು ಪರಾರಿಯಾಗಿದ್ದಾರೆ. ಬಜ್ಪೆ ಪೊಲೀಸ್‌ ಠಾಣಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!