ಲಾಕ್‌ಡೌನ್‌ಗೆ ಕಂಗಾಲು, ಮದುವೆ ಸಮಾರಂಭಕ್ಕೆ ಅವಕಾಶ ಕೊಡಿ

By Suvarna NewsFirst Published Jun 1, 2020, 10:28 PM IST
Highlights

ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ ಮದುವೆ ಛತ್ರಗಳು/ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲು ಸಿಎಂಗೆ ಮನವಿ/ ಕೆಲ ಶುಲ್ಕ ವಿನಾಯಿತಿ ನೀಡಿ/ ಲಾಕ್ ಡೌನ್ ನಿಯಮ ಪಾಲಿಸಿಕೊಂಡು ಮದುವೆ ಸಮಾರಂಭ ನಡೆಸಲು ಅವಕಾಶ ಮಾಡಿಕೊಡಿ

ಬೆಂಗಳೂರು(ಜೂ. 01)  ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಮ್ಯಾರೇಜ್ ಹಾಲ್ಸ್ ವೆಲ್ಫೇರ್ ಅಸೋಸಿಯೇಷನ್ ಮುಖ್ಯಂಮಂತ್ರಿ  ಯಡಿಯೂರಪ್ಪ ಅವರಿಗೆ ಅನೇಕ ಮನವಿಗಳನ್ನು ಮಾಡಿದೆ.

ಲಾಕ್ ಡೌನ್ ಕಾರಣಕ್ಕೆ ಕಲ್ಯಾಣ ಮಂಟಪಗಳು, ಮದುವೆ ಹಾಲ್ ಗಳು  ಮತ್ತು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲಿಕಿದ್ದಾರೆ. ರಾಜ್ಯ ಸರ್ಕಾರ ಮದುವೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

ಲಾಕ್ ಡೌನ್; ತುಮಕೂರು ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಲಾಕ್ ಡೌನ್ ಕಾರಣಕ್ಕೆ ಮದುವೆ ಸಮಾರಂಭ ಸ್ಥಗಿತವಾಗಿದ್ದು ಆಸ್ತಿ ತೆರಿಗೆ, ಟ್ರೇಡ್ ಲೈಸನ್ಸ್ ಶುಲ್ಕ, ಆದಾಯ ತೆರಿಗೆ., ಜಿಎಸ್ ಟಿ, ವಿದ್ಯುತ್ ಮತ್ತು ಜಲಮಂಡಳಿ ವಾಣಿಜ್ಯ ಶುಲ್ಕ ದಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸಾನಿಟೈಸ್ ಮಾಡುವುದು ಸೇರಿದಂತೆ ಸರ್ಕಾರ ನಿಗದಿ ಮಾಡುವ ಎಲ್ಲ ಮುಂಜಾಗೃತಾ ಕ್ರಮ ಪಾಲಿಸಲು ನಾವು ಸಿದ್ಧರಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ. ಮದುವೆ ಸಮಾರಂಭ ನಡೆಸಲು ಅನುವು ಮಾಡಿಕೊಟ್ಟರೆ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ. 

 

click me!