ಚಿಕ್ಕಮಗಳೂರು (ಆ.29): ಕಂದಾಯ ನಿರೀಕ್ಷಕ ಆತ್ಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಉಲ್ಲೇಖ ಮಾಡಿದ ಮೂವರಲ್ಲಿ ಓರ್ವನನ್ನು ಬಂಧಿಸಲಾಗಿದೆ.
ಕಂದಾಯ ನಿರೀಕ್ಷಕ ಸೋಮಶೇಖರ್ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಧನಪಾಲ್ ,ರಮೇಶ್, ಸಂಜೀವ್ ಕುಮಾರ್ ಹೆಸರು ಬರೆದಿಟ್ಟಿದ್ದಯ, ಬಳಿಕ ಮೂವರು ಕೂಡ ನಾಪತ್ತೆಯಾಗಿದ್ದರು. ಇದೀಗ ಧನಪಾಲ್‌ನನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರು ಸಹೋದರರ ಬರ್ಬರ ಹತ್ಯೆ
ಮೂವರು ಕೂಡ ತರೀಕೆರೆ ಶಾಸಕ ಡಿ ಎಸ್ ಸುರೇಶ್ ಆಪ್ತರಾಗಿದ್ದು, ಸ್ಮಶಾನ ಜಾಗವನ್ನು ಖಾತೆ ಮಾಡಿಕೊಂಡುವಂತೆ ರಾಜಕೀಯ ಒತ್ತಡ ಹಿನ್ನೆಲೆ
ಆಗಸ್ಟ್ 25 ರಂದು ಭದ್ರಾ ಹಿನ್ನೀರಿನಲ್ಲಿ ಬಿದ್ದು ಸೋಮಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಪ್ರಕರಣದ ಆರೋಪಿಗಳಲ್ಲೋರ್ವ ಧನಪಾಲ್ ನ್ನು ಲಕ್ಕವಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು ತಲೆಮರೆಸಿಕೊಂಡಿರುವ ಇನ್ನು ಉಳಿದ ಇಬ್ಬರಿಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ.