Shivamogga News: 22ರಂದು ಶರಾ​ವತಿ ಸಂತ್ರಸ್ತರ ಪುನರ್ವಸತಿ ಹಕ್ಕೊತ್ತಾಯ ಸಮಾವೇಶ

Published : Jan 04, 2023, 08:10 AM ISTUpdated : Jan 04, 2023, 08:12 AM IST
Shivamogga News: 22ರಂದು ಶರಾ​ವತಿ ಸಂತ್ರಸ್ತರ ಪುನರ್ವಸತಿ ಹಕ್ಕೊತ್ತಾಯ ಸಮಾವೇಶ

ಸಾರಾಂಶ

ಶ್ರೀ ನಾರಾಯಣ ಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಹಯೋಗದಲ್ಲಿ ಇಲ್ಲಿನ ಸೈನ್ಸ್‌ ಮೈದಾನದಲ್ಲಿ ಜ.22ರಂದು ಹಿಂದುಳಿದ ಜಾತಿಗಳ 2-ಎ ಮೀಸಲಾತಿ ರಕ್ಷಣೆ ಮತ್ತು ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಹಾಗೂ ಶರಾವತಿ ಮತ್ತು ಇತರೆ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಬೃಹತ್‌ ಹಕ್ಕೊತ್ತಾಯ ಸಮಾವೇಶ ನಡೆಯಲಿದೆ.

ಶಿವಮೊಗ್ಗ (ಜ.4) : ಶ್ರೀ ನಾರಾಯಣ ಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಹಯೋಗದಲ್ಲಿ ಇಲ್ಲಿನ ಸೈನ್ಸ್‌ ಮೈದಾನದಲ್ಲಿ ಜ.22ರಂದು ಹಿಂದುಳಿದ ಜಾತಿಗಳ 2-ಎ ಮೀಸಲಾತಿ ರಕ್ಷಣೆ ಮತ್ತು ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಹಾಗೂ ಶರಾವತಿ ಮತ್ತು ಇತರೆ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಬೃಹತ್‌ ಹಕ್ಕೊತ್ತಾಯ ಸಮಾವೇಶ ನಡೆಯಲಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡ ಸತ್ಯಜಿತ್‌ ಸುರತ್ಕಲ್‌ ಮಾತನಾಡಿ, ವಿದ್ಯೆಯಿಂದ ಶಕ್ತಿಯುತರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶ ಸಾರಿದ ಸಮಾನತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶದಂತೆ ನಾರಾಯಣ ಗುರು ವಿಚಾರ ವೇದಿಕೆಯೆಂಬ ಸಂಘಟನೆ ನೇತೃತ್ವದಲ್ಲಿ ಹಿಂದುಳಿದ ಜನಾಂಗದ ಮೀಸಲಾತಿಯ ರಕ್ಷಣೆ ಮಾಡುವ ಸಲುವಾಗಿ ಬೃಹತ್‌ ಹಕ್ಕೋತ್ತಾಯ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಬಂದಿದೆ ಎಂದರು.

ಸಂತ್ರಸ್ತರ ಪರ ಪಾರ್ಲಿಮೆಂಟಲ್ಲಿ ಮಾತಾಡುವ ತಾಕತ್ತು ಇಲ್ವಾ? ಸಂಸದರ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ

ಈಡಿಗ, ಬಿಲ್ಲವ, ನಾಮಧಾರಿ, ಪೂಜಾರಿ, ನಾಡರ್‌, ಗಾಣಿಗ ಮೊದಲಾದ 26 ಪಂಗಡಗಳು ಸೇರಿದಂತೆ ಹಿಂದುಳಿದ ಜಾತಿಗಳ ಸಮುದಾಯದ 100ಕ್ಕೂ ಮೇಲ್ಪಟ್ಟಪಂಗಡಗಳ 2-ಎ ಮೀಸಲಾತಿಯು ಇಂದು ಸರ್ಕಾರದ ಪ್ರಬಲ ರಾಜಕೀಯ ಸಮುದಾಯಗಳ ಓಲೈಕೆ ನೀತಿಯಿಂದಾಗಿ ಕೈತಪ್ಪಿ ಹೋಗುವ ಮುಂಚೆ ನಾವುಗಳು ಜಾಗೃತರಾಗಬೇಕಾಗಿದೆ. ಇಂದು ನಮ್ಮ ಮಕ್ಕಳ ಭವಿಷ್ಯವನ್ನು ರಕ್ಷಿಸಿಕೊಳ್ಳದಿದ್ದರೆ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಪ್ರಬಲ ವೀರಶೈವ ಸಮಾಜಕ್ಕೆ ನಿಗಮ ಸ್ಥಾಪನೆ ಮಾಡಿ, .500 ಕೋಟಿ ಇಡುತ್ತಾರೆ. ಒಕ್ಕಲಿಗ ಸಮಾಜಕ್ಕೆ .300 ಕೋಟಿ, ಮರಾಠ ಸಮಾಜಕ್ಕೆ .100 ಕೋಟಿ, ಬ್ರಾಹ್ಮಣ ಸಮಾಜಕ್ಕೆ .150 ಕೋಟಿ ಮತ್ತು ನಿಗಮ ಮಂಡಳಿ ಸ್ಥಾಪನೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಆದರೆ, ರಾಜ್ಯದ ಶೇ.10ರಷ್ಟುಜನಸಂಖ್ಯೆ ಇರುವ ಈಡಿಗ ಸಮಾಜಕ್ಕೆ ಮತ್ತು ಉಪ ಪಂಗಡಗಳಿಗೆ ನಿಗಮ ಮಾಡುವ ಬದಲು ಐಎಎಸ್‌ ಅಧಿಕಾರಿಯನ್ನು ನೇಮಕಗೊಳಿ​ಸಿ, ಕೇವಲ .10 ಕೋಟಿ ಕಾಯ್ದಿರಿಸಿದೆ ಎಂದು ದೂರಿದರು.

ಮೊದಲು ಕಾಂತರಾಜ್‌ ಆಯೋಗದ ವರದಿ ಜಾರಿ ಮಾಡಲಿ. ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಮಂಡಳಿ ರಚನೆ ಆಗಬೇಕು. ಶರಾವತಿ ವರಾಹಿ ಯೋಜನೆಗಳ ಮೂಲಕ ನಾಡಿಗೆ ಬೆಳಕು ನೀಡಿದ ಸಂತ್ರಸ್ತರಿಗೆ ನ್ಯಾಯ ನೀಡಬೇಕು. ಕಾನೂನಿನ ತೊಡಕನ್ನು ಬಗೆಹರಿಸಬೇಕು. ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಅವರ ಹೆಸರನ್ನು ಇಡಬೇಕು. ಸಿಗಂದೂರು ಚೌಡೇಶ್ವರಿ ಕ್ಷೇತ್ರವನ್ನು ರಾಮಪ್ಪ ಕುಟುಂಬಕ್ಕೆ ಬಿಟ್ಟುಕೊಟ್ಟು ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.22ರಂದು ಈಡಿಗ ಭವನದಿಂದ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಮೂಲಕ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೈನ್ಸ್‌ ಮೈದಾನ ತಲುಪಲಿದ್ದಾರೆ. ಅಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದರು.

Shivamogga: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿಎಂ ತಾಕತ್ತು ಪ್ರದರ್ಶಿಸ​ಲಿ: ಮಧು ಬಂಗಾರಪ್ಪ

ಶ್ರೀ ನಾರಾಯಣ ಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ಗೌರವಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಸ್ವಾಮಿರಾವ್‌, ಜಿ.ಡಿ.ನಾರಾಯಣಪ್ಪ, ಹಾಗೂ ಸಿಗಂಧೂರು ದೇವಸ್ಥಾನದ ಧರ್ಮದರ್ಶಿಗಳಾದ ಡಾ.ಎಸ್‌.ರಾಮಪ್ಪ ಹಾಗೂ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್‌ ಹುಲ್ತಿಕೊಪ್ಪ, ಗೌರವಾಧ್ಯಕ್ಷ ಜಿ.ಡಿ.ನಾರಾಯಣಪ್ಪ, ಭುಜಂಗ, ಅಜ್ಜಪ್ಪ, ಯೋಗೇಶ್‌, ಮುಡುಬ ರಾಘವೇಂದ್ರ, ಕಲಗೋಡು ರತ್ನಾಕರ್‌, ಗೀತಾಂಜಲಿ, ಪುಷ್ಪಮೂರ್ತಿ, ಡಾ.ಕಲ್ಲಣ್ಣ ಇದ್ದರು.

PREV
click me!

Recommended Stories

New Year 2026: ಕಾಫಿನಾಡಿಗರಿಗೆ ನಿರಾಸೆ ಮೂಡಿಸಿದ ಹೊಸ ವರ್ಷ, ಉದ್ಯಮಿಗಳಿಗೆ ಆತಂಕ!
ಮುಗಿದ ವಿದ್ಯುದೀಕರಣ ಪ್ರಕ್ರಿಯೆ, ಬೆಂಗಳೂರು-ಮಂಗಳೂರು ವಂದೇ ಭಾರತ್‌ಗೆ ಸಿಕ್ತು ಗ್ರೀನ್‌ಸಿಗ್ನಲ್‌!