ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೆ.ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದರು.
ಮಾಗಡಿ : ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೆ.ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದರು.
ಪಟ್ಟಣದ ತಿರುಮಲೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಹೇಮಾ ಮಂಜುನಾಥ್ ರವರ ಜೊತೆ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನುದಲ್ಲಿ ತಲೆ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬಂದಿಲ್ಲ . ನನ್ನ ಸ್ವಂತ ಹಣವನ್ನು ರಾಜಕೀಯದಲ್ಲಿ ಖರ್ಚು ಮಾಡಿ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಆಗುವುದಿಲ್ಲ ಎಂದರು.
ಕೆಲವರು ಒಂದು ಕೋಟಿ, ಎರಡು ಕೋಟಿ ಕೊಟ್ಟು ನನ್ನನ್ನು ಖರೀದಿ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ತಲೆ ಮಾರಿಕೊಂಡು ರಾಜಕೀಯ ಮಾಡುವ ಅವಶ್ಯಕತೆ ನನಗಿಲ್ಲ. ಕಾಂಗ್ರೆಸ… ಮತ್ತು ಬಿಜೆಪಿಯವರು ಪಕ್ಷಕ್ಕೆ ಸೇರಿ ಎಂದು ಹಲವು ಮುಖಂಡರು ಭೇಟಿಯಾಗಿದ್ದರು .
ಜೆಡಿಎಸ್ನಲ್ಲಿ ನನಗೆ ಯಾವುದೇ ತೊಂದರೆ ಆಗಿಲ್ಲ. ನನಗೆ ಉನ್ನತ ಅಧಿಕಾರವನ್ನೇ ಕೊಟ್ಟಿದ್ದಾರೆ. ನಾನು ಮತ್ತು ಶಾಸಕ ಎ. ಮಂಜುನಾಥ್ ರವರು ಸಹೋದರರ ರೀತಿ ಇದ್ದು ಪಂಚರತ್ನ ಕಾರ್ಯಕ್ರಮವನ್ನು ಮಾಗಡಿಯಲ್ಲಿ ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಶಾಸಕ ಎ. ಮಂಜುನಾಥ್ ರವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಶಾಸಕ ಎ ಮಂಜುನಾಥ… ಮಾತನಾಡಿ, ನಮ್ಮ ಪಕ್ಷದ ಹಿರಿಯ ನಾಯಕರಾಗಿರುವ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಅವರು ಯಾವ ಕಾರಣಕ್ಕೆ ಪಕ್ಷವನ್ನು ಬಿಡುತ್ತಾರೆ . ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ನಾನು ಬಾಲಕೃಷ್ಣರವರಿಗೆ ಸವಾಲು ಹಾಕುತ್ತೇನೆ. ನಾನು ಕಾಂಗ್ರೆಸ್ ನವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದರೆ ಒಂದು ಕಡೆಯಿಂದ ಗುಡಿಸಿಕೊಂಡು ಬರುತ್ತೇನೆ ಎಂದು ಸವಾಲು ಹಾಕಿದರು.
ವೈಕುಂಠ ಏಕಾದಶಿ ಪ್ರಯುಕ್ತ ಶಾಸಕ ಎ.ಮಂಜುನಾಥ್ ಹಾಗೂ ಅವರ ಧರ್ಮಪತ್ನಿ ಲಕ್ಷ್ಮಿ ಎ. ಮಂಜುನಾಥ್, ಪುರಸಭೆ ಅಧ್ಯಕ್ಷ ವಿಜಯ ರೂಪೇಶ್ ಸೇರಿದಂತೆ ಹಲವು ಮುಖಂಡರು ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಾಗಡಿ : ಬಿಜೆಪಿ ಪಕ್ಷದಲ್ಲಿ ಟಿಕೆಚ್ ಬೇಡ ಎಂದು ಹೇಳಲು ನಾನೇನು ಸನ್ಯಾಸಿಯಲ್ಲ. ನಾನು ಟಿಕೆಚ್‌ಗಾಗಿ ಬಿಜೆಪಿ ಪಕ್ಷದಲ್ಲಿ ದುಂಬಾಲು ಬೀಳುವುದಿಲ್ಲ ಎಂದು ಕೆಂಪೇಗೌಡ ಪ್ರಾಧಿಕಾರ ನಾಮನಿರ್ದೇಶಕ ಎಚ್.ಎಂ. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಕೆಂಪೇಗೌಡ ಪ್ರತಿಮೆ ಮುಂಭಾಗದಲ್ಲಿ ಕನ್ನಡ ನಾಡು ಎಂಬ 2023 ರ ದಿನದರ್ಶಿಕೆ ಬಿಡುಗಡೆ ಮಾಡಿದ ಅವರು, ಬಿಜೆಪಿ ಪಕ್ಷವು ನನ್ನ ಕರೆದು ಟಿಕೆಚ್ ನೀಡಿದರೆ ನಾನು ಆ ಪಕ್ಷದ ಟಿಕೆಚ್ ಆಕಾಂಕ್ಷಿ ಅನ್ನುತ್ತೇನೆ . ಅದನ್ನು ಬಿಟ್ಟು ಟಿಕೆಚ್ ಕೊಡಿ ಎಂದು ಪಕ್ಷದ ಹಿಂದೆ ಸುತ್ತುವುದಿಲ್ಲ ಎಂದರು.
ರಾಜಕೀಯದಲ್ಲಿ ಕೊನೆಯ ಹಂತದವರೆಗೂ ಮಾರ್ಗದರ್ಶನ ಕೊಡುವುದಿಲ್ಲ . ಆಗ ಟಿಕೆಚ್ ಸಿಗದಿದ್ದಾಗ ಕೊನೆ ಹಂತದಲ್ಲಿ ರಾಜಕಾರಣ ಮಾಡುವುದು ಕಷ್ಟಆಗುತ್ತದೆ ಈಗ ಚುನಾವಣೆ ಸಂದರ್ಭದಲ್ಲಿ ನಾನು ನಾನು ಎಂದು ಸಾಕಷ್ಟುಮಂದಿ ಕಾಣಿಸಿಕೊಳ್ಳುತ್ತಾರೆ. ಚುನಾವಣೆ ಮುಗಿದ ಮೇಲೆ ಎಲ್ಲಿ ಹೋಗುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ ಇದನ್ನು ತಪ್ಪು ಎಂದು ಹೇಳುವುದಿಲ್ಲ. ಸೇವೆ ಮಾಡಲು ಬಂದವರಿಗೆ ಅವಕಾಶ ಕೊಡಬೇಕು ಎಂದು ತಿಳಿಸಿದರು.
ಟಿಕೆಚ್ ಸಿಗದಿದ್ದರೆ ನನ್ನ ದಾರಿ ನನ್ನದು:
ಬಿಜೆಪಿ ಪಕ್ಷವು ಒಂದು ಪಕ್ಷದಲ್ಲಿ ನನಗೆ ಟಿಕೆಚ್ ಕೊಡದಿದ್ದರೆ ನನ್ನ ದಾರಿಯನ್ನು ನಾನು ಕಂಡುಕೊಳ್ಳುತ್ತೇನೆ, ಯಾವ ಪಕ್ಷಕ್ಕೂ ನಾನು ಸೀಮಿತ ಮಾಡಿಕೊಂಡಿಲ್ಲ. ಬಿಜೆಪಿ ಪಕ್ಷದಲ್ಲಿ ಕೆಂಪೇಗೌಡ ಪ್ರಾಧಿಕಾರದ ನಾಮನಿರ್ದೇಶಕರಾಗಿ ಮಾಡಿರುವುದರಿಂದ ಆ ಪಕ್ಷದ ನಾಯಕರು ಬಂದಾಗ ಗೌರವ ಕೊಡುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಪಕ್ಷವೂ ನನಗೆ ಯಾವುದೇ ಹುದ್ದೆಯನ್ನು ನೀಡಿಲ್ಲ ಟಿಕೆಚ್ ಸಿಗಲಿಲ್ಲ ಎಂದ ಪಕ್ಷದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕೆಂಬುದನ್ನು ಆ ಸಮಯದಲ್ಲಿ ತಿಳಿಸುತ್ತೇನೆ ಎಂದು ಕೃಷ್ಣಮೂರ್ತಿ ಹೇಳಿದರು.
ಈ ವೇಳೆ ಮುಖಂಡರಾದ ನಾಗರಾಜು, ತೋಟದ ಮನೆ ಗಿರೀಶ್, ದೊಡ್ಡಿ ಗೋಪಿ, ಆನಂದ್, ರೂಪೇಶ್, ಗುಡ್ಡೆಗೌಡ, ದಯಾನಂದ ಸ್ವಾಮಿ , ಹೇಮಂತ್, ಕೋರಮಂಗಲ ವೆಂಕಟರಮಣಯ್ಯ ಮತ್ತಿತರರು ಹಾಜರಿದ್ದರು.