Omicron Variant: ಸೋಂಕಿತರಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್‌ ಚಿಕಿತ್ಸೆ

By Kannadaprabha News  |  First Published Dec 18, 2021, 11:41 AM IST

*  ರಾಜೀವ್‌ಗಾಂಧಿ ಆಸ್ಪತ್ರೆ ಆವರಣದಲ್ಲಿರುವ ಆಸ್ಪತ್ರೆ
*  ಮುಂಜಾಗ್ರತಾ ಕ್ರಮವಾಗಿ ಎರಡು ತಿಂಗಳ ಹಿಂದೆಯೇ ನಿರ್ಮಿಸಿರುವ ಆಸ್ಪತ್ರೆ
*  ಬೌರಿಂಗ್‌ ಹಾಸಿಗೆ ಭರ್ತಿ ಬಳಿಕ ಕಾರ್ಯಾರಂಭ
 


ಬೆಂಗಳೂರು(ಡಿ.18): ಮೂರನೇ ಅಲೆ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ(Government of Karnataka) ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ (MakeShift Model) ಆಸ್ಪತ್ರೆಯನ್ನು ವಿದೇಶದಿಂದ(Foreign) ಬಂದ ಕೊರೋನಾ ಸೋಂಕಿತರು ಮತ್ತು ಒಮಿಕ್ರೋನ್‌ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.

ಸದ್ಯ ಬೌರಿಂಗ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಆದರೆ, ಕಳೆದ ಎರಡು ದಿನಗಳಿಂದ ವಿದೇಶದಿಂದ ಬಂದವರಲ್ಲಿ ಸೋಂಕು ಹೆಚ್ಚಳವಾಗಿರುವುದು ಮತ್ತು ಒಮಿಕ್ರೋನ್‌(Omicron) ಹೊಸ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಹೆಚ್ಚುವರಿಯಾಗಿ ರಾಜೀವ್‌ಗಾಂಧಿ ಆಸ್ಪತ್ರೆಯನ್ನು(Hospital) ನಿಗದಿಪಡಿಸಲಾಗಿದೆ. ಸದ್ಯ ಬೌರಿಂಗ್‌ನಲ್ಲಿ 120 ಹಾಸಿಗೆಗಳನ್ನು ಚಿಕಿತ್ಸೆಗೆಂದು ಮೀಸಲಿಟ್ಟಿದ್ದು, 20 ಹಾಸಿಗೆ ಭರ್ತಿಯಾಗಿವೆ. ಎಲ್ಲಾ ಹಾಸಿಗೆಗಳು ಭರ್ತಿಯಾದ ಬಳಿಕ ಗಾಜೀವ್‌ಗಾಂಧಿ ಆಸ್ಪತ್ರೆಗೆ ಸೋಂಕಿತರನ್ನು ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ(Department of Health) ಅಧಿಕಾರಿಗಳು ತಿಳಿಸಿದ್ದಾರೆ.

Latest Videos

Omicron Variant: ಬೆಂಗ್ಳೂರಲ್ಲಿ ತಾಯಿ-ಮಗನಿಗೆ ಒಮಿಕ್ರೋನ್‌: ಸಾಮೂಹಿಕ ಪರೀಕ್ಷೆ

2ನೇ ಅಲೆ ಪರದಾಟ ತಪ್ಪಿಸಲು ನಿರ್ಮಾಣ:

ಕೊರೋನಾ(Coronavirus) ಎರಡನೇ ಅಲೆ ಆರಂಭದಲ್ಲಿಯೇ ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳು ಭರ್ತಿಯಾಗಿ ಖಾಸಗಿ ಆಸ್ಪತ್ರೆಗಳ ಅವಲಂಬನೆ ಅನಿವಾರ್ಯವಾಗಿತ್ತು. ಮೇ ಮೊದಲ ಎರಡು ವಾರ ಬೆಂಗಳೂರಿನಲ್ಲಿ(Bengaluru) 25 ಸಾವಿರ ಹಾಸಿಗೆ ಬೇಡಿಕೆ ಇತ್ತು. ಆದರೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿ ಕೇವಲ 17 ಸಾವಿರ ಹಾಸಿಗೆಗಳು ಮಾತ್ರ ಲಭ್ಯವಾಗಿದ್ದವು. ಶೇ.30ರಷ್ಟು ಹಾಸಿಗೆ ಕೊರತೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಹಾಸಿಗೆ ಲಭ್ಯವಾಗದೇ ನೂರಾರು ಸೋಂಕಿತರು ಆ್ಯಂಬುಲೆನ್ಸ್‌(Ambulance), ರಸ್ತೆ ಬದಿಯಲ್ಲಿಯೇ ಪ್ರಾಣಬಿಟ್ಟಿದ್ದರು. ಇದರಿಂದ ಪಾಠ ಕಲಿತ ಸರ್ಕಾರವು ಕೊರೋನಾ ಮೂರನೇ ಅಲೆಗೆ ಸಿದ್ಧತೆಯಾಗಿ ಈ ಆಸ್ಪತ್ರೆ ನಿರ್ಮಿಸಿತ್ತು. ಮುಖ್ಯಮಂತ್ರಿಗಳು ಅಕ್ಟೋಬರ್‌ನಲ್ಲಿ ಉದ್ಘಾಟಿಸಿದ್ದರು. ಆ ಬಳಿಕ ಆಸ್ಪತ್ರೆ ಖಾಲಿ ಇತ್ತು.

ತಾತ್ಕಾಲಿಕ ಆಸ್ಪತ್ರೆ ಆಗಿರುವುದರಿಂದ ನಗರದ ಪ್ರಮುಖ ಆಸ್ಪತ್ರೆಗಳ ಸಿಬ್ಬಂದಿಯನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಇಂದಿರಾಗಾಂಧಿ ಆಸ್ಪತ್ರೆಯಿಂದ ಮಕ್ಕಳ ತಜ್ಞರು, ರಾಜೀವ್‌ಗಾಂಧಿ ಆಸ್ಪತ್ರೆಯಿಂದ ಶ್ವಾಸಕೋಶ ತಜ್ಞರು ಸೇರಿದಂತೆ ಸುತ್ತಮುತ್ತಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ವರ್ಗ ಹೆಚ್ಚವರಿಯಾಗಿ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಲಭ್ಯವಿರುವ ಸೌಲಭ್ಯಗಳಿವು

* 200 ಹಾಸಿಗೆಗಳ ಸುಸಜ್ಜಿತ ಮೆಕ್‌ಶಿಪ್ಟ್‌ ಮಾಡಲ್‌(ತುರ್ತು ಸಂದರ್ಭದ ತಾತ್ಕಾಲಿಕ) ಆಸ್ಪತ್ರೆಯಿದು.
* ಕೊರೋನಾ ನಂತರದಲ್ಲಿಯೂ ಕನಿಷ್ಠ ಮೂರ್ನಾಲ್ಕು ವರ್ಷಗಳು ಬಳಕೆ ಬರುವಂತೆ ಆಸ್ಪತ್ರೆ ನಿರ್ಮಾಣ.
* ತುರ್ತುನಿಗಾ ಘಟಕ (ಐಸಿಯು) 30 ಹಾಸಿಗೆಗಳಿವೆ.
* ಕೃತಕ ಆಕ್ಸಿಜನ್‌ ಅವಲಂಭಿತ ಘಟಕ, ಟ್ರಿಯಾಜ್‌ ಘಟಕ, ಸೆಮಿನಾರ್‌ ಹಾಲ್‌, ಸಿಬ್ಬಂದಿ ಕೊಠಡಿಗಳಿವೆ.
* ಮಕ್ಕಳಿಗಾಗಿಯೇ ಪ್ರತ್ಯೇಕ ವಾರ್ಡ್‌ ಸಿದ್ಧಪಡಿಸಲಾಗುತ್ತಿದ್ದು, ಇದಕ್ಕೆ ಪಕ್ಕದ ಇಂದಿರಾಗಾಂಧಿ ಆಸ್ಪತ್ರೆಯು ಸಹಕಾರ ನೀಡುತ್ತಿದೆ.

Covid 19 Variant Outbreak: ಡೆಲ್ಟಾಗಿಂತ 70 ಪಟ್ಟು ವೇಗವಾಗಿ ಹರಡುತ್ತೆ ಒಮಿಕ್ರೋನ್‌!

ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಮೇಕ್‌ಶಿಫ್ಟ್‌ ನಿರ್ಮಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಉದ್ಘಾಟಸಿದ್ದರು. ಬೌರಿಂಗ್‌ ಆಸ್ಪತ್ರೆ ಹಾಸಿಗೆಗಳು ಭರ್ತಿಯಾದ ಬಳಿಕ ಇಲ್ಲಿ ಒಮಿಕ್ರೋನ್‌ ಸೋಂಕಿತರ ಚಿಕಿತ್ಸೆ ಆರಂಭಿಸಲಾಗುತ್ತದೆ ಅಂತ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ನಾಗರಾಜ್‌ ತಿಳಿಸಿದ್ದಾರೆ.  

ದೇಶದಲ್ಲಿ ನಿತ್ಯ ಲಕ್ಷ ಒಮಿಕ್ರೋನ್‌ ಕೇಸ್‌: ಕೇಂದ್ರದ ಎಚ್ಚರಿಕೆ..!

ಇಡೀ ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ‘ಒಮಿಕ್ರೋನ್‌’(Omicron) ಕೋವಿಡ್‌ ರೂಪಾಂತರಿ ತಳಿ ಬ್ರಿಟನ್‌ನಲ್ಲಿ(Britain) ವ್ಯಾಪಿಸುತ್ತಿರುವಂತೆ ಭಾರತದಲ್ಲಿ(India) ಸಮುದಾಯಕ್ಕೆ ಹರಡಿದರೆ ನಿತ್ಯ 14 ಲಕ್ಷ ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ. ಅದೇ ರೀತಿ ಫ್ರಾನ್ಸ್‌(France) ಮಾದರಿಯಲ್ಲಿ ಹರಡಿದರೆ ದೇಶದಲ್ಲಿ ನಿತ್ಯ 13 ಲಕ್ಷ ಜನರಿಗೆ ಸೋಂಕು ತಗುಲುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ(Central Government) ಎಚ್ಚರಿಸಿದೆ.
 

click me!