ಮಠದೊಳಗೆ ಹಾಡಹಗಲೇ ನಡೆಯಿತು ಈ ಕೃತ್ಯ : ಸಿಸಿಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ

Kannadaprabha News   | Asianet News
Published : Dec 15, 2020, 12:08 PM IST
ಮಠದೊಳಗೆ ಹಾಡಹಗಲೇ ನಡೆಯಿತು ಈ ಕೃತ್ಯ : ಸಿಸಿಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ

ಸಾರಾಂಶ

ಹಾಡಹಗಲೇ ಮಠದೊಳಗೆ ಇಂತಹ ಕೆಲಸ ನಡೆದಿತ್ತು. ಆ ದೃಶ್ಯ ಮಠದ ಸಿಸಿಟಿವಿಯಲ್ಲಿ ಸೆರೆಯಾಯ್ತು. ಹಾಗಾದ್ರೆ ಮಠದೊಳಗೆ ನಡೆದಿದ್ದು ಏನು..?

ಬೆಂಗಳೂರು (ಡಿ.15) : ಹಾಡಹಗಲೇ ಮಠದಲ್ಲಿದ್ದ ವಿಗ್ರಹವನ್ನು ಕದ್ದೊಯ್ದ ಕಳ್ಳರು ಇದೀಗ ಪೊಲೀಸರ ವಶವಾಗಿದ್ದಾರೆ.  

ಬೆಂಗಳೂರಿನ ಚಿಕ್ಕಜಾಲ ಠಾಣಾ ಪೊಲೀಸರಿಂದ ಆರೋಪಿಯ ಬಂಧನವಾಗಿದೆ. ವಿಗ್ರಹ ಕದ್ದೊಯ್ದ ರಘು  ಎಂಬಾತನನ್ನು ಬಂಧಿಸಲಾಗಿದೆ.   

ನವೆಂಬರ್ 25ರಂದು‌ ಹುಣಸಮಾರನಹಳ್ಳಿಯ ಚಂದ್ರಮೌಳೇಶ್ವರ ಮಠದಲ್ಲಿ ಕಳ್ಳತನ  ಮಡೆದಿತ್ತು.  150 ವರ್ಷಗಳ ಪುರಾತನ ಪಂಚಲೋಹದ ವಿಗ್ರಹವನ್ನು  ಕಳ್ಳ ಕದ್ದೊಯ್ದಿದ್ದ. 

ವಿಗ್ರಹ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.  ವಿಗ್ರಹವನ್ನ ರೈಸ್ ಪುಲ್ಲಿಂಗ್ ಮಾಡುವವರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ. 

ಬೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ .

ಚಿಕ್ಕಜಾಲ ಠಾಣೆಯಲ್ಲಿ ವಿಗ್ರಹ ಕಳುವಾಗಿರುವ ಬಗ್ಗೆ  ದೂರು ದಾಖಲಿಸಲಾಗಿತ್ತು.  ಮಠದ ಗುರುನಂಜೇಶ್ವರ ಶಿವಚಾರ್ಯ ಸ್ವಾಮೀಜಿ ವಿಗ್ರಹ ಕಳುವಾಗಿರುವ ಸಂಬಂಧ ದೂರು ನೀಡಿದ್ದರು. 

ಸಿಸಿಟಿವಿ ದೃಶ್ಯಗಳನ್ನಾಧರಿಸಿ ಆರೋಪಿಯನ್ನು ಬಂಧಿಸಲಾಗಿತ್ತು. 

PREV
click me!

Recommended Stories

ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್