ಬುರ್ಕಾ ಧರಿಸಿಕೊಂಡು ಬಂದು ಇದೆಂತಾ ಕೆಲಸ ಮಾಡ್ತಿದ್ಲು ಈ ಮಹಿಳೆ

Suvarna News   | Asianet News
Published : Dec 15, 2020, 11:33 AM ISTUpdated : Dec 15, 2020, 11:34 AM IST
ಬುರ್ಕಾ ಧರಿಸಿಕೊಂಡು ಬಂದು ಇದೆಂತಾ ಕೆಲಸ ಮಾಡ್ತಿದ್ಲು ಈ ಮಹಿಳೆ

ಸಾರಾಂಶ

ಬುರ್ಕಾ ಧರಿಸಿ ಮಹಿಳೆಯೋರ್ವಳು ಇಂತಹ ಖತರ್ನಾಕ್ ಕೆಲಸ ಮಾಡುತ್ತಿದ್ದಳು. ಇದೀಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ. 

ಬೆಂಗಳೂರು (ಡಿ.15):  ಬುರ್ಕಾ ಧರಿಸಿ ಚಿನ್ನ ಕದಿಯುತ್ತಿದ್ದ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. 

ಮಾಲೀಕರ ಗಮನ ಬೇರೆಡೆ ಸೆಳೆದು ಅಂಗಡಿಯಲ್ಲಿ ಚಿನ್ನ ಎಗರಿಸುತ್ತಿದ್ದ ಕಳ್ಳಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಪರ್ವಿನ್ (28 ) ಎಂಬಾಕೆಯನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.  

ಬಂಧಿತ ಮಹಿಳೆಯಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.  ಗ್ರಾಹಕರಂತೆ ಬುರ್ಕಾ ಧರಿಸಿ ಚಿನ್ನದ ಅಂಗಡಿಗೆ ಎಂಟ್ರಿ ಕೊಡುತ್ತಿದ್ದ ಚಾಲಾಕಿ  ಚಿನ್ನ ಖರೀದಿಸುವಂತೆ ನಾಟಕ ಮಾಡಿ ಕದಿಯುತ್ತಿದ್ದಳು.

ಚೀಟಿ ಹೆಸರಿನಲ್ಲಿ 5 ಕೋಟಿ ರೂ. ಪಂಗನಾಮ ಹಾಕಿದ್ದ ಬೆಂಗಳೂರಿನ ದಂಪತಿ!

ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನದ ಸರ ಎಗರಿಸುತ್ತಿದ್ದಳು. ಬಳಿಕ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಈಕೆಯ ಕೃತ್ಯ ಬಯಲಾಗುತ್ತಿದ್ದಂತೆ ಆಕೆಯನ್ನು ಅರೆಸ್ಟ್ ಮಾಡಲಾಗಿದೆ. 

PREV
click me!

Recommended Stories

ಆ ಮುಸ್ಲಿಂ ಮಹಾನಾಯಕನ ವಿರುದ್ಧ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ವಾಗ್ದಾಳಿ
ಸಂಪುಟದಲ್ಲಿ ಬದಲಾವಣೆ? ಸಚಿವ ಸ್ಥಾನಕ್ಕಾಗಿ 25 ಕೈ ಶಾಸಕರ ದಿಲ್ಲಿ ಚಲೋ