ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು

By Kannadaprabha News  |  First Published Jul 13, 2020, 7:39 AM IST

ಕೊರೋನಾ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ವಿಕ್ಟೋರಿಯಾ ಆಸ್ಪತ್ರೆ ಗೇಟ್‌ ಮುಂಭಾಗದಲ್ಲೇ ಪ್ರಾಣ ಬಿಟ್ಟದಾರುಣ ಘಟನೆ ಭಾನುವಾರ ನಡೆದಿದೆ.


ಬೆಂಗಳೂರು(ಜು.13): ಕೊರೋನಾ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ವಿಕ್ಟೋರಿಯಾ ಆಸ್ಪತ್ರೆ ಗೇಟ್‌ ಮುಂಭಾಗದಲ್ಲೇ ಪ್ರಾಣ ಬಿಟ್ಟದಾರುಣ ಘಟನೆ ಭಾನುವಾರ ನಡೆದಿದೆ.

ಯಲಹಂಕ ಮೂಲದ ವೃದ್ಧೆಯೊಬ್ಬರಿಗೆ ಶನಿವಾರ ರಾತ್ರಿ 8 ಗಂಟೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ತಕ್ಷಣ ಸ್ಥಳೀಯರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯೊಲಾಗಿದೆ. ಕೊರೋನಾ ಇರಬಹುದು ಎಂದು ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

Tap to resize

Latest Videos

ಆಸ್ಪತ್ರೆಗಳಿಗೆ ಅಲೆದರೂ ಹಾಸಿಗೆ ಸಿಗಲಿಲ್ಲ: ಮಗನ ಮುಂದೆಯೇ ಪ್ರಾಣ ಬಿಟ್ಟ ತಾಯಿ..!

ಕೂಡಲೇ ದೇವನಹಳ್ಳಿಯ ಆಕಾಶ್‌ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಕೊರೋನಾ ಪಾಸಿಟಿವ್‌ ಇದ್ದರೆ ಮಾತ್ರ ಇಲ್ಲಿ ಚಿಕಿತ್ಸೆ ನೀಡವುದಾಗಿ ತಿಳಿಸಿ ವಾಪಸ್‌ ಕಳಿಸಿದ್ದಾರೆ. ಅಲ್ಲಿಂದ ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಗೆ ಬಂದರೆ ಅಲ್ಲಿ ಹಾಸಿಗೆ ಇಲ್ಲ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಎಂದು ಸೂಚಿಸಿದ್ದಾರೆ.

ಸಂಡೇ ಲಾಕ್‌ಡೌನ್‌ಗೆ ಕೊರೋನಾ ಡೋಂಟ್‌ ಕೇರ್: ಕರುನಾಡಲ್ಲಿ ಮಾಹಾಮಾರಿ ಅಟ್ಟಹಾಸ

ಬೆಳಗ್ಗೆ 2 ಗಂಟೆಗೆ ವಿಕ್ಟೋರಿಯಾಗೆ ಆಸ್ಪತ್ರೆಗೆ ಬಂದರೆ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದ ಆಸ್ಪತ್ರೆಯ ಗೇಟ್‌ ಮುಂಭಾಗದಲ್ಲಿ ನಿಲ್ಲಿಸಿದ್ದ ಆ್ಯಂಬುಲೆನ್ಸ್‌ನಲ್ಲಿಯೇ ಸುಮಾರು 2 ತಾಸು ನರಳಿ ನರಳಿ ಬೆಳಗ್ಗೆ 4 ಗಂಟೆ ಸಂದರ್ಭದಲ್ಲಿ ಜೀವ ಬಿಟ್ಟಿದ್ದಾರೆ. ವೃದ್ಧೆಯ ಸಂಬಂಧಿಕರು ಚಿಕಿತ್ಸೆ ನೀಡುವಂತೆ ಸಾಕಷ್ಟುಗೋಗರೆದರೂ ಯಾವ ಆಸ್ಪತ್ರೆಗಳು ಚಿಕಿತ್ಸೆ ನೀಡುವುದಕ್ಕೆ ಮುಂದಾಗಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸತ್ತ ಮೇಲೆ ಪರೀಕ್ಷೆಗೆ ಮುಂದು!

ಬದುಕಿದ್ದಾಗ ಚಿಕಿತ್ಸೆ ನೀಡಲು ಹಿಂಜರಿದ ಆಸ್ಪತ್ರೆಯ ಸಿಬ್ಬಂದಿ ಜೀವ ಬಿಟ್ಟಬಳಿಕ ಶವವನ್ನು ಪಡೆದುಕೊಂಡಿದ್ದಾರೆ. ಮೃತದೇಹಕ್ಕೆ ಕೊರೋನಾ ಪರೀಕ್ಷೆ ನಡೆಸಿದ ಬಳಿಕ ನೀಡುವುದಾಗಿ ಹೇಳುತ್ತಿದ್ದಾರೆ. ಬದುಕಿದ್ದಾಗ ಎಷ್ಟೇ ಬೇಡಿಕೊಂಡರು ಚಿಕಿತ್ಸೆ ನೀಡಲು ಮುಂದಾಗಲಿಲ್ಲ. ಆದರೆ, ಸತ್ತ ಮೇಲೆ ಮೃತದೇಹವನ್ನು ಪಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!