ಬೆಳಗಾವಿ: ಸ್ಮಶಾ​ನ​ದಲ್ಲಿ ಸತೀಶ್‌ ಜಾರ​ಕಿ​ಹೊಳಿ ಕಾರಿಗೆ ಚಾಲನೆ

Kannadaprabha News   | Asianet News
Published : Jul 13, 2020, 07:25 AM IST
ಬೆಳಗಾವಿ: ಸ್ಮಶಾ​ನ​ದಲ್ಲಿ ಸತೀಶ್‌ ಜಾರ​ಕಿ​ಹೊಳಿ ಕಾರಿಗೆ ಚಾಲನೆ

ಸಾರಾಂಶ

ಶಾಸಕ ಸತೀಶ್‌ ಜಾರಕಿಹೊಳಿ ಮೂಢನಂಬಿಕೆ ವಿರುದ್ಧ ನಡೆ| ಗ್ರಹಣ ಸಂದರ್ಭದಲ್ಲಿ ಸ್ಮಶಾನದಲ್ಲಿ ಊಟ ಮಾಡುವುದು ಸೇರಿದಂತೆ ಮೌಢ್ಯತೆಯ ವಿರುದ್ಧ  ಜಾಗ್ರತಿ ಮೂಡಿಸುತ್ತಲೇ ಬರುತ್ತಿರುವ ಸತೀಶ್‌ ಜಾರಕಿಹೊಳಿ|

ಬೆಳಗಾವಿ(ಜು.13): ಹೊಸದಾಗಿ ಖರೀದಿಸಿದ ಕಾರನ್ನು ಒಳ್ಳೆಯ ಮುಹೂರ್ತ ನೋಡಿ, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದು ನಂಬಿಕೆ. ಆದರೆ, ಮೂಢನಂಬಿಕೆಗಳ ವಿರುದ್ಧ ಸಡ್ಡು ಹೊಡೆದಿರುವ ಕೆಪಿ​ಸಿಸಿ ಕಾರ್ಯಾ​ಧ್ಯ​ಕ್ಷರೂ ಆದ ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೊಸ​ದಾಗಿ ಖರೀ​ದಿಸಿದ ತಮ್ಮ ಫಾರ್ಚೂ​ನರ್‌ (ಓಅ​49 N​2023) ಕಾರಿಗೆ ಇಲ್ಲಿನ ಸದಾ​ಶಿವ ನಗ​ರದ ಸ್ಮಶಾನದಲ್ಲಿ ಚಾಲನೆ ಕೊಡ​ಲಿ​ದ್ದಾರೆ.

ಅದ​ಕ್ಕಾಗಿ ಇಂದು(ಜುಲೈ 13)ರಂದು ಬೆಳಗ್ಗೆ 11ಕ್ಕೆ ವಿನೂತನ ಕಾರ್ಯಕ್ರಮ ಏರ್ಪಡಿಸಿದ್ದು, ವೈಚಾರಿಕ ಶ್ರೀಗಳಾದ ನಿಜಗುಣಾನಂದ ಸ್ವಾಮೀಜಿ, ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಬಸವರಾಜ ಪಂಡಿತ ಗುರುಗಳು, ಮಲ್ಲಿಕಾರ್ಜುನ ದೇವರು ಸೇರಿದಂತೆ ಸುಮಾರು 10ಕ್ಕಿಂತ ಹೆಚ್ಚು ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಿ​ದ್ದಾರೆ. ಮೌಢ್ಯ ವಿರೋಧಿ ಕಾರ್ಯಕ್ರಮದ ಭಾಗವಾಗಿ ಈ ಕಾರ್ಯಕ್ರಮ ಏರ್ಪ​ಡಿ​ಸಿ​ದ್ದಾರೆ. 

ಸರ್ಕಾರಕ್ಕಿಂತ ಮುಂಚೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ ಸಚಿವ

ಗ್ರಹಣ ಸಂದರ್ಭದಲ್ಲಿ ಸ್ಮಶಾನದಲ್ಲಿ ಊಟ ಮಾಡುವುದು ಸೇರಿದಂತೆ ಮೌಢ್ಯತೆಯ ವಿರುದ್ಧ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಜಾಗ್ರತಿ ಮೂಡಿಸುತ್ತಲೇ ಬರುತ್ತಿದ್ದಾರೆ.

PREV
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ