ಹತ್ತಾರು ಆಸ್ಪತ್ರೆಗಳಿಗೆ ಸುತ್ತಾಡಿದರೂ ಹಾಸಿಗೆ ಸಿಗದೇ, ಆ್ಯಂಬುಲೆನ್ಸ್‌ನಲ್ಲಿ ಮಗನ ಎದುರೇ ತಾಯಿ ಕೊನೆಯುಸಿರೆಳೆದ ಮನ ಕಲಕುವ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರು(ಜು.13): ಹತ್ತಾರು ಆಸ್ಪತ್ರೆಗಳಿಗೆ ಸುತ್ತಾಡಿದರೂ ಹಾಸಿಗೆ ಸಿಗದೇ, ಆ್ಯಂಬುಲೆನ್ಸ್‌ನಲ್ಲಿ ಮಗನ ಎದುರೇ ತಾಯಿ ಕೊನೆಯುಸಿರೆಳೆದ ಮನ ಕಲಕುವ ಘಟನೆ ಶುಕ್ರವಾರ ನಡೆದಿದೆ.
ಮಲ್ಲೇಶ್ವರದ ವಿನಾಯಕ ದೇವಾಲಯ ವೃತ್ತದ ಸುಮಾರು 42 ವರ್ಷದ ಮಹಿಳೆಯಲ್ಲಿ ದಿಢೀರ್ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಮಗ ಮುಂದಾಗಿದ್ದಾನೆ.
undefined
ಸಂಡೇ ಲಾಕ್‌ಡೌನ್‌ಗೆ ಕೊರೋನಾ ಡೋಂಟ್ ಕೇರ್: ಕರುನಾಡಲ್ಲಿ ಮಾಹಾಮಾರಿ ಅಟ್ಟಹಾಸ
ಬಳಿಕ ನಗರದ, ಬೌರಿಂಗ್, ಮಾರ್ಥಾಸ್, ಸುಗುಣಾ, ಕೊಲಂಬಿಯಾ ಏಷ್ಯಾ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗೆ ಸುತ್ತಾಡಿದರೂ ಹಾಸಿಗೆ ಸಿಕ್ಕಿರಲಿಲ್ಲ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಕಾಲು ಹಿಡಿದು ಬೇಡಿಕೊಂಡರೂ ನೆರವಿಗೆ ಬರಲಿಲ್ಲ.
ಇದಾದ ನಂತರ ಬಳಿಕ ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆಗೆ ಸೇರಿಸಿದೆ. ಆದರೆ ಅಲ್ಲಿ ಐಸಿಯು ವಾರ್ಡ್ ಖಾಲಿ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದರು. ನಂತರ ಆ್ಯಂಬುಲೆನ್ಸ್‌ಲ್ಲಿ ಹಲವು ಆಸ್ಪತ್ರೆಗಳನ್ನು ಸುತ್ತಾಡಿದರೂ ಪ್ರಯೋಜನವಾಗಿಲ್ಲ.
ಪರಪ್ಪನ ಅಗ್ರಹಾರದಲ್ಲಿ 30 ಕೈದಿಗಳಿಗೆ ಸೋಂಕು
ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡುವಾಗ ಮಾರ್ಗ ಮಧ್ಯದಲ್ಲಿಯೇ ಜೀವ ಬಿಟ್ಟರು. ಕಣ್ಣ ಮುಂದೆ ಜೀವ ಬಿಡುತ್ತಿದ್ದರೂ ಅಸಹಾಯಕನಂತೆ ನೋಡುವಂತಾಗಿತ್ತು ಎಂದು ಅವರ ಮಗ ಕುಮಾರ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.