ಪಾಳು ಬಿದ್ದ ಕಟ್ಟಡದಲ್ಲಿ ವೃದ್ಧ ಅಂಧ ದಂಪತಿಯ ಜೀವನ

Kannadaprabha News   | Asianet News
Published : Jan 25, 2020, 11:58 AM ISTUpdated : Jan 25, 2020, 12:21 PM IST
ಪಾಳು ಬಿದ್ದ ಕಟ್ಟಡದಲ್ಲಿ ವೃದ್ಧ ಅಂಧ ದಂಪತಿಯ ಜೀವನ

ಸಾರಾಂಶ

ಪಾಳು ಬಿದ್ದಿರುವ ಕಟ್ಟಡವೊಂದರಲ್ಲಿ ಅಂಧ ದಂಪತಿ ವಾಸಿಸುತ್ತಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಅಂಧ ವೃದ್ಧ ದಂಪತಿ ಹಲವಾರು ಬಾರಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ.

ತುಮಕೂರು(ಜ.25): ಪಾವಗಡ ಪಟ್ಟಣ ವ್ಯಾಪ್ತಿಯ 8ನೇ ವಾರ್ಡ್‌ನಲ್ಲಿ ಸೂರಿಲ್ಲದೆ ಮೂರು ದಶಕಗದಿಂದ ಪಾಳು ಬಿದ್ದ ಹಳೇಕೊಟೆಗೆ ಅಂಟಿಕೊಂಡ ಕಟ್ಟಡವೊಂದರಲ್ಲಿಯೇ ವಾಸಿಸುತ್ತಿರುವ ಈ ಅಂಧ ವೃದ್ಧ ದಂಪತಿ ಹಲವಾರು ಬಾರಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು ಇವರ ಗೋಳು ಕೇಳೋರಿಲ್ಲದೇ ನರಿ ಕೂಗು ಗಿರಿಗೆ ಮುಟ್ಟಿತೆ ಎಂಬಂತಾಗಿದೆ ಇವರ ಜೀವನದ ಸ್ಥಿತಿ.

ಪಟ್ಟಣದ ಪುರಸಭೆಯ ಶಿಥಿಲಗೊಂಡ ಹಳೇ ಕಟ್ಟಡವೊಂದರಲ್ಲಿ ವಾಸವಿರುವ ಸುರೇಶ್‌ ಹಾಗೂ ಗಿರಿಜಮ್ಮ ಎಂಬವರು ಸಂಗೀತ ಶಿಕ್ಷಕರಾಗಿದ್ದು ಮೂವತ್ತು ವರ್ಷಗಳಿಂದಲೂ ಅರ್ಜಿ ಸಲ್ಲಿಸಿದರೂ ಸೂರು ಕಲ್ಪಿಸುವಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದೆ. ವಸತಿ ಸೌಲಭ್ಯಕ್ಕೆ ಹಲವಾರು ಬಾರೀ ಅರ್ಜಿ ಸಲ್ಲಿಸಿದರೂ ಇಚ್ಛಾಶಕ್ತಿ ಕೊರತೆಯಿಂದ ತಾಲೂಕು ಆಡಳಿತ ಮತ್ತು ಪುರಸಭೆ ನಿರ್ಲಕ್ಷಿಸಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದ್ದು ಈ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ತಾಲೂಕು ಆಡಳಿತ ವಿರುದ್ಧ ತೀವ್ರ ಅಕ್ರೋಶ ವ್ಯಕ್ತವಾಗಿದೆ.

ಯಡಿಯೂರಪ್ಪರ ಹಾಡಿಹೊಗಳಿದ ಜೆಡಿಎಸ್‌ ಶಾಸಕ

ಆಂಧರಾಗಿರುವ ಈ ದಂಪತಿಗೆ ಇದ್ದ ಮಗ ಅನಿಲ್‌ಕುಮಾರ್‌ ಎಂಬಾತ ಇತ್ತೀಚಿಗೆ ರೈಲಿಗೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಜೀವನಕ್ಕೆ ಅಶ್ರಯವಾಗಿದ್ದ ಪುತ್ರನನ್ನು ಕಳೆದುಕೊಂಡ ಇವರ ಸ್ಥಿತಿ ನೋಡಿದರೆ ಮನಕಲುಕುವಂತಿದೆ.

ಇವರು ವಾಸಿಸುತ್ತಿರುವ ಹಳೇಕೋಟೆ ಕಟ್ಟಡದಲ್ಲಿ ನಿತ್ಯ ವಿಷಪೂರಿತ ಹಾವು ಮತ್ತು ಚೇಳುಗಳ ಕಾಟ ಹೆಚ್ಚಾಗಿದೆ. ಅಲ್ಲದೆ ಮಳೆ ಬಂದರೆ ಸಾಕು ನರಕಯಾತನೆಯಾಗಿದೆ. ಈಗಾಗಲೇ ಹಲವಾರು ಬಾರಿ ಆಂಧ ಸುರೇಶ್‌ ಅವರಿಗೆ ವಿಷಪೂರಿತ ಹಾವು ಕಚ್ಚಿದ್ದು ತಕ್ಷಣ ನೋಡಿಕೊಂಡ ಅಕ್ಕಪಕ್ಕ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಪರಿÜಣಾಮ ಆತ ಜೀವಂತವಾಗಿ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಹಲವಾರು ಮಂದಿ ತಿಳಿಸಿದ್ದಾರೆ.

ತುಮಕೂರು: 3 ಸಾವಿರ ಕೋಳಿಗಳು ಬೆಂಕಿಗಾಹುತಿ

ಈ ಕುರಿತು ಆಂಧ ಶಿಕ್ಷಕ ಸುರೇಶ್‌ ಮಾತನಾಡಿ, ವಸತಿ ಸೌಲಭ್ಯ ಕೋರಿ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕರಾದ ಸೋಮ್ಲಾನಾಯಕ್‌, ಕೆ.ಎಂ.ತಿಮ್ಮರಾಯಪ್ಪ ಹಾಗೂ ಎಲ್ಲಾ ಜನಪ್ರತಿನಿಧಿಗಳ ಬಳಿ ಸುತ್ತಾಟ ನಡೆಸಿ ಮನವಿ ಮಾಡಿಕೊಳ್ಳಲಾಗಿದೆ. ತಹಸೀಲ್ದಾರ್‌ ಹಾಗೂ ಪರಸಭೆ ಮುಖ್ಯಾಧಿಕಾರಿಗೆ ಬೇಡಿಕೊಳ್ಳಲಾಗಿದೆ. ಆದರೆ ಯಾರು ಮನಸ್ಸು ಮಾಡಲಿಲ್ಲ. ಸುಮ್ಮನೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಆತಂತ್ರ ಕಟ್ಟಡದಲ್ಲಿಯೇ ವಾಸವಿದ್ದೇವೆ. ಇನ್ನೂ ಸ್ವಲ್ಪ ದಿನ ಕಳೆದರೆ ಸಾಕು. ಶಾಶ್ವತವಾಗಿ ಭಗವಂತನ ಸನ್ನಿಧಿಗೆ ತೆರಳಿಲಿದ್ದೇವೆ ಎಂದು ಆಳಲು ತೋಡಿಕೊಂಡರು. ಈಗಲಾದರೂ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಈ ವೃದ್ಧ ಆಂಧ ದಂಪತಿಗೆ ಅಶ್ರಯ ಕಲ್ಪಿಸುವರೇ ಎಂದು ಕಾದು ನೋಡಬೇಕಿದೆ.old blind couple lives in a ruined building in tumakur

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!