ಮತ್ತೊಂದು ಚುನಾವಣೆಗೆ ಸಜ್ಜಾದ ಹೊಸಕೋಟೆ ಕ್ಷೇತ್ರ

Kannadaprabha News   | Asianet News
Published : Jan 25, 2020, 11:30 AM IST
ಮತ್ತೊಂದು ಚುನಾವಣೆಗೆ ಸಜ್ಜಾದ ಹೊಸಕೋಟೆ ಕ್ಷೇತ್ರ

ಸಾರಾಂಶ

ಅನರ್ಹರಾಗಿದ್ದ ಎಂಟಿಬಿ ನಾಗರಾಜ್ ಹಾಗೂ ಶರತ್ ಬಚ್ಚೇಗೌಡ ಹಣಾಹಣಿಗೆ ಸಾಕ್ಷಿಯಾಗಿದ್ದ ಹೊಸಕೋಟೆ ಕ್ಷೇತ್ರದಲ್ಲಿ ಮತ್ತೊಂದು ಚುನಾವಣೆ ನಡೆಯಲಿದ್ದು, ಮತ್ತೊಂದು ಚುನಾವಣೆಗೆ ಜನ ಸಜ್ಜಾಗಿದೆ. 

ಸೂಲಿಬೆಲೆ [ಜ.25]:  ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ಕಮ್ಮಸಂದ್ರ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಜ. 31ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. 

ಜ. 24ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಜ. 25ರಂದು ಪರಿಶೀಲನೆ, ಕ್ರಮಬದ್ಧ ಮತಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಪ್ರಕಟ, ಜ. 26ಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನ. ಅಂದೇ ಚಿನ್ಹೆಗಳ ವಿತರಣೆ ಮಾಡಲಾಗುವುದು. ಜ.31ರಂದು ಚುನಾವಣೆ, ಅಂದೇ ಮದ್ಯಾಹ್ನದ ನಂತರ ಫಲಿತಾಂಶದ ಘೋಷಣೆಯಾಗಲಿದೆ.

ಎಂಟಿಬಿ ಪ್ರತಿಷ್ಠೆಯಾಗಿದ್ದ ಹೊಸಕೋಟೆ ಚುನಾವಣೆಗೆ ಮೀಸಲಾತಿ ಪ್ರಕಟ.

ಶುಕ್ರವಾರ ನಾಮಪತ್ರ ಸಲ್ಲಿಕೆಯ ವೇಳೆ ಗ್ರಾಮದ ಮುಖಂಡರಾದ ಆನಂದ್‌, ಶ್ರೀನಿವಾಸ್‌, ರಮೇಶ್‌ ಹಾಜರಿದ್ದು ತಮ್ಮ ತಂಡದ ಅಭ್ಯರ್ಥಿಗಳ ನಾಮಪತ್ರವನ್ನು ಸಲ್ಲಿಸಿದರು.

ಬಿಜೆಪಿ ವಿರುದ್ಧ ಮುನಿಸಿಕೊಂಡರಾ ಎಂಟಿಬಿ?...

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?